Thursday 29 November 2012

ಬೆಡಗು





ಏನ್ ಮಗಳೇ ಮುದ್ದಿನ ವಿರೋಧಾಭಾಸದ ಭಾವ
ತೋರ್ ಬೆರಳ್ ಮಿಸುಕುತಿದೆ ನಿನ್ನಜ್ಜನ ತುಟಿಗಳ
ಹೆಬ್ಬೆರಳ್ ಹಿಸುಕುವಂತಿದೆ  ಮುದ್ದಿನ ಕೊರಳ
ಒಂದೇ ಹಸ್ತದ ಎರಡು ಒತ್ತು ಜಗಕಲ್ಲವೇ ಪಾಠ
ಅಜ್ಜನಿಂದ ಮೊಮ್ಮಗಳಿಗೋ ಮೊಮ್ಮಗಳಿಂದ ಅಜ್ಜನಿಗೋ
ಅರಿವಿಲ್ಲದ ಅಪ್ಪುಗೆ ಕಲಿಸುತಿದೆ ಕನವರಿಸಲು
ನಲಿವಿನಡಿಯಲ್ಲೇ ನೋವಡಗಿ ಬೆಡಗ ಬೀಸುತಿದೆಯೆಂದು  
ಒಂದೇ ಮುಖದ ತಂತ್ರ , ಕುತಂತ್ರದ  ಎರಡು ಕಣ್ಣುಗಳು
ಮನುಕುಲ ಮೌನದಲಿ ಮಥಿಸುವ  ಯಂತ್ರ
ಮೇಲೆ ನಲಿವಿನ ನೋಟ ,ಒಡಲಿನಲಿ ಕೇಡಿನ ಮಾಟ
ವಾಸ್ತವತೆಯ ಮಂದಹಾಸದಿ ಮಾರ್ನುಡಿಸುವೆ
ಎಳತಲ್ಲ  ಎನಗಿಂತ ಬೆಳತು ನೀನು ಘನ ಬೆಡಗಿ
ಎಳೆಗರುಂ ಎತ್ತಾಗಿ ಮೊಳಕೆ ಮೇರು ಮರವಾಗಿ
ಬೆಳೆದು ಮಿಂಚಿದರೆ ಅಂಚುoಟೆ  ಸಂತಸಕೆ
 


A Sonnet By M Ganapathi, Kangod.

Tuesday 27 November 2012

ಅನುಭವದ ಕೆಲ ತುಣುಕುಗಳು ಅಕ್ಷರಗಳಲ್ಲಿ ...


-----
ತೆರುವುದು ಬಂದರೆ ಬಡವ ಹೊರುವುದು ಬಂದರೆ ದಡ್ಡ (ಇದರ ಅರ್ಥ : ಹಣವನ್ನು ತೆರುವ ಸಂದರ್ಭ ಬಂದಾಗ ನಾನು ಬಡವ ಎಂದು ಕೆಲವರು ಹೇಳುತ್ತಾರೆ. ತಮ್ಮ ಸುಖಕ್ಕೆ ಯಾವ ಕೊರತೆಯೂ ಇಲ್ಲ. ಜವಾಬ್ದಾರಿಯನ್ನು ಹೊರುವದು ಬಂದಕೂಡಲೇ ನಾನು ದಡ್ಡ ಎನ್ನುತ್ತಾರೆ . ತಮ್ಮ ಬಚಾವಿಗೆ ಎಲ್ಲಾ ಬುದ್ದಿವಂತಿಕೆಯೂ ಅವರಲ್ಲಿ ಇರುತ್ತದೆ )

-----
ಬಹಳ ಗಂಭೀರವಾಗಿದ್ದರೆ 'ಅಹಂಕಾರಿ' ಎನ್ನುತ್ತಾರೆ . ಬಹಳ ಸರಳವಾಗಿದ್ದರೆ ಅದೇ ಜನ ತಲೆಯ ಮೇಲೆ ಕುಳಿತು ಹಗುರವಾಗಿ ನೋಡುತ್ತಾರೆ. 

-----
ಒಬ್ಬ ವ್ಯಕ್ತಿ ಎಷ್ಟು ಹಣ ಗಳಿಸುತ್ತಾನೆ ಎನ್ನುವದಕ್ಕಿಂತ ಗಳಿಸಿದ್ದನ್ನು ಹೇಗೆ ಖರ್ಚು ಮಾಡುತ್ತಾನೆ ಎನ್ನುವದು ಮುಖ್ಯ .

-----
ಚುನಾವಣೆಯಲ್ಲಿ ಸ್ಪರ್ಧಿಸುವ ದೊಡ್ಡ ಲಾಭವೆಂದರೆ , ಗೆಲುವದು ಸೋಲುವದು ಎರಡನೆಯ ವಿಷಯ , ಆದರೆ ನಮ್ಮ ಸುತ್ತಲೂ ಇರುವವರಲ್ಲಿ ಯಾರು ನಮಗೆ  ನಿಜವಾದ ಶತ್ರುಗಳು ಎನ್ನುವದು ನಿಖರವಾಗುತ್ತದೆ .

-----
ಕುಟುಂಬದ ದೊಡ್ಡ ಕಾರ್ಯಕ್ರಮದಲ್ಲಿ ನೆಂಟರಿಷ್ಟರು , ನೆರೆಹೊರೆಯವರ ಒಲವು ಹಿಡಿಯುವದು ; ಚುನಾವಣೆಯಲ್ಲಿ ಕಾರ್ಯಕರ್ತರ ಒಲವು ಹಿಡಿಯುವದು ; ಗೋವಿನ ಪೂಜೆಯ ದಿನ (ದೀಪಾವಳಿಯಂದು) ಹಸು, ಹೋರಿಗಳ ಒಲವು ಹಿಡಿಯುವದು ; ಈ ಮೂರೂ ಕಷ್ಟ ಸಾಧ್ಯವೇ ಸರಿ .

-----
'ಅವನು ಹಣ ಖರ್ಚು ಮಾಡಲು ಸಾಯುತ್ತಾನೆ , ಹೋಗುವಾಗ ಏನು ಕಟ್ಟಿಕೊಂಡು ಹೋಗುತ್ತಾನೆಯೇ ?' ಎಂದು ಜನ ಹೇಳುತ್ತಾರೆ . ಹಾಗೆಂದು ಹೀಗೆ ಹೇಳುವ ಜನ ತಾವು ಕೂಡಿಡುವ ಅಭ್ಯಾಸವನ್ನೇನೂ ಬಿಡುವದಿಲ್ಲ. ನಮ್ಮೊಂದಿಗೆ ನಮ್ಮ ಹೆಂಡತಿ, ಮಕ್ಕಳು , ಸೊಸೆಯಂದಿರು , ಅಳಿಯಂದಿರು , ಮೊಮ್ಮಕ್ಕಳು , ಮಿಗಿಲಾಗಿ ವೃದ್ಧ ಅಪ್ಪ - ಅಮ್ಮ , ಹೀಗೆ ಎಲ್ಲರೂ ಒಟ್ಟಿಗೆ ಸಾಯುವುದಾದರೆ ಅಡ್ಡಿಯಿಲ್ಲ . ನಾನೊಬ್ಬ ಸತ್ತು ಅವರೆಲ್ಲಾ ಬದುಕಿ ಉಳಿದರೆ ಅವರೇನು ಬಿಕ್ಷೆ ಬೇಡಬೇಕೆ ? ಇಷ್ಟಕ್ಕೂ ಒಬ್ಬ ವ್ಯಕ್ತಿ ಗಳಿಸಿದ ಸಂಪತ್ತು ಕೇವಲ ಅವನೋಬ್ಬನದ್ದಲ್ಲ , ಪರೋಕ್ಷ್ಯವಾಗಿ ಇಡಿಯ ಕುಟುಂಬದ್ದು .

------

ಸುಖ ತೃಪ್ತಿಯನ್ನು ನಾವು ನಾವಿರುವಲ್ಲಿ , ನಮಗಿರುವಿಷ್ಟರಲ್ಲಿ ಕಂಡುಕೊಳ್ಳಬೇಕು. ಹುಡುಕುತ್ತಾ ಹೋದರೆ 'ಸಾಕು' ಎನ್ನಿಸುವದು ಸಿಗುವುದೇ ಇಲ್ಲ . ಸಾಕು ಎನ್ನುವುದು ಕೇವಲ ಎರಡೇ !. ಒಂದು ಹೊಟ್ಟೆಗೆ .. ಎರಡು ಪೆಟ್ಟಿಗೆ !!!
ಮತ್ತೊಬ್ಬರ ಬಾಹ್ಯದಂಬರವನ್ನು ನೋಡಿ ಮೈ ಪರಚಿಕೊಂಡರೆ ಉಳಿವುದು ಗಾಯವೊಂದೇ. ಆ ಆಡಂಬರದ ಹಿಂದೆ ಇರುವ ಗಾಯದ ಹುಳವನ್ನು ಗಮನಿಸಿ ನಾವು ಇಷ್ಟಕ್ಕೂ ಸುಸ್ತಿರ ಎಂಬ ತೃಪ್ತಿಭಾವ ಬೇಕು.

-------

ಎಲ್ಲಾ ಚಟಗಳಂತೆ  ಹಣ  ಮಾಡಬೇಕೆ0ಬುದೂ ಒಂದು ಚಟ. ಹಣ  ಸೇರುವುದು,ಬಿಡುವುದು  ಅವರವರ ಅದೃಷ್ಟ.ಆದರೆ  ಹಣ  ಮಾಡುವ  ಚಟ  ಒಳ್ಳಯದು.ಅದರಿಂದ  ಬೇರೆ  ಚಟ  ಹಿಡಿಯುವುದಿಲ್ಲ .ಏಕೆಂದರೆ  ಬೇರೆ  ಚಟಕ್ಕೆ  ಹೋದರೆ  ಕಾಸು  ಖರ್ಚಾದೀತು  ಎಂಬ  ಚಿಂತೆ .

-- ಎಂ ಗಣಪತಿ , ಕಾನುಗೋಡು

Monday 26 November 2012

Shine and Charm Left to Mind



  Blossom Blossom early in the morning

        I want to enjoy the state of Blossoming 

           O doff dills reveal the charm very soon

               Sunshine succeeds the alarming charm

                    Oh you beautiful come very soon soon 

                         If you say 'no' I don't mourn, mourn

           know well 'shine and charm' left to mind.



 M. GANAPATHI. KANGOD.