ಜೋತಿಷ್ಯ ಹೇಳುವವರು ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
[ ಇದನ್ನು ತಮಾಷೆಯಾಗಿ ಎಲ್ಲರೂ ತೆಗೆದುಕೊಳ್ಳಬೇಕು ]
++ ಒಬ್ಬ ವಿವಾಹಿತನು ಸ್ವಲ್ಪ ಕಾಲದಲ್ಲಿಯೇ ಸಾಯುವ ಯೋಗ ಕಂಡುಬಂದರೆ ನೀನು ಸಧ್ಯ ಸಾಯುತ್ತೀಯೆ ಎಂದು ಹೇಳಬಾರದು. ಅದರ ಬದಲು ನಿನ್ನ ಹೆಂಡತಿಯ ಮಾಂಗಲ್ಯಯೋಗಕ್ಕೆ ಮಾರಕವಿದೆ, ಅದಕ್ಕಾಗಿ ಕೂಡಲೇ ಶಾಂತಿಯನ್ನು ಮಾಡಿಸಬೇಕು ಎಂದು ಹೇಳಬೇಕು. ಇದರಿಂದ ಇವನಿಗೂ ಕಾಸು ಆಗುತ್ತದೆ. ನಾಲ್ಕು ಮಂದಿ ವೈದಿಕರಿಗೂ ಕೆಲಸ ಸಿಕ್ಕುತ್ತದೆ. ಆಜುಬಾಜಿನವರಿಗೂ ಪಾಯಸದ ಊಟ ದೊರೆಯುತ್ತದೆ.
++ ಕೆಲವರಿಗೆ ವಿವಾಹಯೋಗ ಇರುವುದಿಲ್ಲ. ಆದರೆ ಮಕ್ಕಳಾಗುವ ಯೋಗ ಇರುತ್ತದೆ. ಅದಕ್ಕೆ ನಿನಗೆ ವಿವಾಹಯೋಗವಿಲ್ಲದಿದ್ದರೂ ಮಕ್ಕಳಾಗುತ್ತದೆ ಎಂದು ಎದುರಾಎದುರು ಹೇಳಿದರೆ ಆ ಜಾತಕನಿಂದ ತಪರಾಕಿ ತಿನ್ನಬೇಕಾದೀತು. ಅದರ ಬದಲು ನಿಮ್ಮ ಸುತಮುತ್ತಲ ಊರಿನಲ್ಲಿ ನಿಮ್ಮನ್ನು ತಂದೆಯೆಂದೇ ಪರಿಗಣಿಸುವ ಹಲವು ಮಂದಿ ನಿಮಗೆ ಇರುತ್ತಾರೆ ಎಂದು ಹೇಳಬೇಕು.
++ ಆಶ್ಲೇಷ ನಕ್ಷತ್ರದ ಕನ್ಯೆಯಿಂದ ಅತ್ತೆಗೆ ಕೇಡು ಎಂಬುದು ಕೆಲವರ ಅಭಿಪ್ರಾಯ. ಅಂಥಹ ಸಂದರ್ಭದಲ್ಲಿ ಸೊಸೆಯಿಂದ ಬರುವ ಎಂಥಹ ಬಲಿಷ್ಠ ಕೇಡನ್ನೂ ಹೊಡೆದೋಡಿಸುವನ್ಥಹ ಸ್ವಭಾವನ್ನು ತೋರಿಸುವ ಜಾತಕವಿರುವ ಅತ್ತೆಯನ್ನೇ ಆ ಕನ್ಯೆಗೆ ತಳುಕೆ ಹಾಕಬೇಕು.
++ ತೀರಾ ಜೋರಿನ ಸ್ವಭಾವದ ಹೆಣ್ಣಿಗೆ ಅತಿ ಸೌಮ್ಯ ಸ್ವಭಾವದ ಗಂಡನ್ನು, ಅದೇ ಸ್ವಭಾವದ ಗಂಡಿಗೆ ಅತಿ ಸೌಮ್ಯ ಸ್ವಭಾವದ ಹೆಣ್ಣನ್ನು ತಳಿಕೆ ಹಾಕಬೇಕು. ಇಲ್ಲದಿದರೆ ಬಾಯಿಮುಚ್ಚಿಕೊಳ್ಳುವ ಹಂತಕ್ಕೆ ಬರಲು ಅಂತಹ ಹೆಂಡತಿಗೆ ಅಥವಾ ಗಂಡನಿಗೆ ಸ್ವಲ್ಪ ತ್ರಾಸು ಆಗುತ್ತದೆ.
No comments:
Post a Comment
Note: only a member of this blog may post a comment.