ದಿವಂಗತ ಶಿರೂರು ವೆಂಕಮ್ಮ. ನನ್ನ ತಾಯಿಯ ಚಿಕ್ಕಮ್ಮ. ನನ್ನ ಪ್ರೀತಿಯ ಅಜ್ಜಿ. ಚಿಕ್ಕ ವಯಸ್ಸಿನಲ್ಲಿ ಗಂಡ ಮತ್ತು ಏಕ ಮಾತ್ರ ಮಗನನ್ನು ಕಳೆದುಕೊಂಡವಳು. ಅತಿ ಬಡತನ, ಶಿಥಿಲವಾದ ಸಣ್ಣ ಮನೆ. ಕಷ್ಟದ ಸ್ಥಿತಿಯಲ್ಲಿ ಚಿಕ್ಕವಯಸ್ಸಿನ ವಿಧವಾ ಸೊಸೆ ಮತ್ತು ಆರು ಮಂದಿ ಚಿಕ್ಕ ಮೊಮ್ಮಕ್ಕಳನ್ನು ಬೆಳಸಿ ಮುನ್ನಡೆಸಿದವಳು. ತನ್ನ ಮನೆಯವರನ್ನಲ್ಲದೆ ನಮ್ಮೆಲ್ಲರನ್ನೂ ಬಹಳವಾಗಿ ಪ್ರೀತಿಸಿದವಳು. ಅಕ್ಕಿಯ ಡಬ್ಬ ಖಾಲಿಯಾದರೂ ಅವಳ ಮನೆಗೆ ನೆಂಟರು ಖಾಲಿಯಾಗುತ್ತಿರಲಿಲ್ಲ. ಅದಕ್ಕೆ ಕಾರಣ ಅವಳು ಜನರಿಗೆ ತೋರಿಸುತ್ತಿದ್ದ ಪ್ರೀತಿ, ವಾತ್ಸಲ್ಯ. ನೆಂಟರಿಗೆ ಅನ್ನ ಮಾಡಿ ಬಡಿಸಿ ತಾನು ಮತ್ತು ಮನೆಯವರು ಗುಟ್ಟಾಗಿ ಗಂಜಿ ಸುರಿದದ್ದು ಹಲವು ಬಾರಿ. ಅನೇಕ ಕಾಹಿಲೆಗಳಿಗೆ ಹಳ್ಳಿ ಔಷಧವನ್ನೂ ಕೊಡುತ್ತಿದ್ದಳು. ಆಕೆ ನಮ್ಮನ್ನು ಬಿಟ್ಟು ಹೋಗಿ 35 ವರುಷಗಳಾದುವು. ಈಗ ಅವಳ ಆರೂ ಮೊಮ್ಮಕ್ಕಳು -- ಗಂಡು ಮಕ್ಕಳು, ಹೆಣ್ಣು ಮಕ್ಕಳು ಸುಖವಾಗಿದ್ದಾರೆ. ಅದಕ್ಕೆ ಅವಳ ಪಾಲನಾ ತಪಸ್ಸು ಕಾರಣ. ನಮ್ಮೆಲ್ಲರ ಸಿರಿ ಸೊಬಗನ್ನು ನೋಡಲು ಅವಳಿಲ್ಲ ಎನ್ನುವುದೇ ನಮ್ಮೆಲ್ಲರ ಕೊರತೆ. ಅವಳಿಗೆ ಸಾಷ್ಟಾಂಗ ನಮಸ್ಕಾರ.
ಫೋಟೋ ಕೃಪೆ : ಶ್ರೀ H.N.ಶ್ರೀಧರ ಹೆಗಡೆ ಮಂಕಳಲೆ

No comments:
Post a Comment
Note: only a member of this blog may post a comment.