ನಮ್ಮ ಮನಯಲ್ಲಿ ಮಾಡಿರುವ ಅಡಿಕೆ ಬೇಯಿಸುವ ಒಲೆ. ಅಸ್ತ್ರ ಒಲೆ. ಇದರ ವಿಶೇಷ ಎಂದರೆ 1. ಒಲೆಯ ಕೆಳಗಿನ ಭಾಗದಿಂದ ಒಳಗೆ ಗಾಳಿ ಬರುವ ವ್ಯವಸ್ತೆ -- ಹಿಂದಿನ ಆಲೆಮನೆಯ ಪೂಗುದಾಳಿ [ ಒಲೆಯ ಮಧ್ಯಭಾಗದಲ್ಲಿನ ಕೆಳಗಿನ ಗಾಳಿ ಬರುವ ಕಿಂಡಿ ] ಇದ್ದಂತೆ . ಇದರಲ್ಲಿ ಬೂದಿಯೂ ಕೆಳಗೆ ಬೀಳುತ್ತದೆ. 2. ಕಟ್ಟಿಗೆ ಕೂಡುವ ಜಾಗ ಕೇವಲ 12 ಇಂಚು ಅಗಲ, 8 ಇಂಚು ಎತ್ತರ, ಹಂಡೆ ಇಡುವ ಜಾಗದಿಂದ ಹೊರಗೆ 30 ಇಂಚು ಉದ್ದದ ಒಂದು ಕಾಲುವೆಯಾಕೃತಿಯ ವ್ಯವಸ್ಥೆ ಸಾಕು. ಸುಮಾರು ಐದು ಅಡಿ ಉದ್ದದ ಒಂದು ತಲೆ ಹೊರೆ ಮರದ ಚೆಕ್ಕೆಗಳನ್ನು ಕೂಡಿದರೆ ಒಂದು ಹಂಡೆ ಅಡಿಕೆ ಬೇಯುತ್ತದೆ.. ಕುಂಟೆಗಳ ಅಗತ್ಯವಿಲ್ಲ. ಇದರಲ್ಲಿ ಗಾಳಿ ಒಳಹೋಗದಂತೆ ಮುಚ್ಚಿಡಲಾಗುತ್ತದೆ. .3. . ಗಾಳಿ ಬರುವ ಕಿಂಡಿ + ಬೂದಿ ಬೀಳುವ ಜಾಗದಲ್ಲಿ ಹಾಕಿರುವ ಜಾಲರಿಯ ಮಟ್ಟದಿಂದ ಅಂದರೆ ಒಲೆಯ ತಳಭಾಗದಿಂದ ಹಂಡೆಯಾ ತಳ ಕೇವಲ 7 ರಿಂದ 8 ಇಂಚು ಅಂತರ ಇದ್ದರೆ ಸಾಕು . [ ಅದು ಕಟ್ಟಿಗೆ ಕೂಡಲಿಕ್ಕೆ ].. ಇದರಿಂದ ಶಾಖ [ ಕಾವು ] ಬರುವ ಶಕ್ತಿ ಹೆಚ್ಚು ಇರುತ್ತದೆ. .4. ಒಲೆಯ ಒಳಭಾಗದಲ್ಲಿ ಸುತ್ತ ಮತ್ತು ಕೆಳಗಿನಿಂದ ಮೇಲಿನವರೆಗೆ [ ಹಂಡೆಯ ಕಂಟದವರೆಗೆ ] . ಹಂಡೆಗೂ ಒಲೆಗೂ ಮಧ್ಯೆ 2 ಇಂಚು ಅಂತರ [ Gap ] ಇರಬೇಕು . ಇದರಿಂದಾಗಿ ಬೆಂಕಿ ಹಂಡೆಯ ಸುತ್ತ ಮೇಲಿನವರೆಗೂ ಆವರಿಸಿ ಹಂಡೆಗೆ ಶಾಖ ಬೇಗನೆ ಹೆಚ್ಚು ಸಿಗುತ್ತದೆ. 5. . ಒಲೆಯ ಒಳಭಾಗದಲ್ಲಿ ಭತ್ತದ ಉಮಿಯನ್ನು [ ಭತ್ತದ ಸಿಪ್ಪೆ ] ಸೇರಿಸಿದ ಮಣ್ಣಿನಿಂದ ಮೆತ್ತಿಗೆ ಮಾಡಬೇಕು. ಇದರಿಂದಾಗಿ ಬೆಂಕಿಯ ಕಾವು ಬೇಗನೆ ಬರುತ್ತದೆ ಮತ್ತು ಹೀಗೆ ಬಂದ ಕಾವು ಬೇಗ ತಣಿಯದೆ ಹೆಚ್ಚು ಹೊತ್ತು ಇರುತ್ತದೆ. 6. . ಹಂಡೆಯ ಮೇಲ್ಭಾಗದಲ್ಲಿ ಹೆಂಚು ಮತ್ತು ಮಣ್ಣನ್ನು ಬಳಸಿ ಮುಚ್ಚಬೇಕು. ಇದರಿಂದಾಗಿ ಕಾವು ಬೇಗ ಬರುತ್ತದೆ.. 7. ಚಿತ್ರದಲ್ಲಿ ತೋರಿಸಿದಂತೆ ಒಲೆಯ ಅರ್ಧ ಎತ್ತರದಲ್ಲಿ ಹೊಗೆ ಕಿಂಡಿಯನ್ನಿಟ್ಟು ಮೇಲೆ ಪೈಪನ್ನು ನೆಡಬೇಕು. ನಾನು ಬಳಸಿರುವ ಹಂಡೆಯಲ್ಲಿ 48 ಗಿದ್ನ [ ಹನ್ನೆರಡು ಮಣ್ಣು ಬುಟ್ಟಿ ಅಥವಾ ಸಾಗರದ ಹನ್ನೆರಡು ಡಬ್ಬ ] ] ಸುಳಿ ಬೇಳೆ ಬೇಯುತ್ತದೆ. ಮೊದಲನೆಯ ಹಂಡೆ 48 ಗಿದ್ನ ಅಡಿಕೆ ಬೇಯಲಿಕ್ಕೆ ಸುಮಾರು ಒಂದು ಗಂಟೆ ಬೇಕು. ನಂತರದ ಹಂಡೆಯ ಅಡಿಕೆ ಬೇಯಲು ಕೇವಲ 30 ನಿಮಿಷಗಳು ಸಾಕು. ಪ್ರತೀ 5 ನಿಮಿಷಕ್ಕೊಮ್ಮೆ ಕಟ್ಟಿಗೆಯನ್ನು ಮುಂದೆ ಹಾಕುತ್ತಿರಬೇಕು.










No comments:
Post a Comment
Note: only a member of this blog may post a comment.