-----
ತೆರುವುದು ಬಂದರೆ ಬಡವ ಹೊರುವುದು ಬಂದರೆ ದಡ್ಡ (ಇದರ ಅರ್ಥ : ಹಣವನ್ನು ತೆರುವ ಸಂದರ್ಭ ಬಂದಾಗ ನಾನು ಬಡವ ಎಂದು ಕೆಲವರು ಹೇಳುತ್ತಾರೆ. ತಮ್ಮ ಸುಖಕ್ಕೆ ಯಾವ ಕೊರತೆಯೂ ಇಲ್ಲ. ಜವಾಬ್ದಾರಿಯನ್ನು ಹೊರುವದು ಬಂದಕೂಡಲೇ ನಾನು ದಡ್ಡ ಎನ್ನುತ್ತಾರೆ . ತಮ್ಮ ಬಚಾವಿಗೆ ಎಲ್ಲಾ ಬುದ್ದಿವಂತಿಕೆಯೂ ಅವರಲ್ಲಿ ಇರುತ್ತದೆ )
-----
ಬಹಳ ಗಂಭೀರವಾಗಿದ್ದರೆ 'ಅಹಂಕಾರಿ' ಎನ್ನುತ್ತಾರೆ . ಬಹಳ ಸರಳವಾಗಿದ್ದರೆ ಅದೇ ಜನ ತಲೆಯ ಮೇಲೆ ಕುಳಿತು ಹಗುರವಾಗಿ ನೋಡುತ್ತಾರೆ.
-----
ಒಬ್ಬ ವ್ಯಕ್ತಿ ಎಷ್ಟು ಹಣ ಗಳಿಸುತ್ತಾನೆ ಎನ್ನುವದಕ್ಕಿಂತ ಗಳಿಸಿದ್ದನ್ನು ಹೇಗೆ ಖರ್ಚು ಮಾಡುತ್ತಾನೆ ಎನ್ನುವದು ಮುಖ್ಯ .
-----
ಚುನಾವಣೆಯಲ್ಲಿ ಸ್ಪರ್ಧಿಸುವ ದೊಡ್ಡ ಲಾಭವೆಂದರೆ , ಗೆಲುವದು ಸೋಲುವದು ಎರಡನೆಯ ವಿಷಯ , ಆದರೆ ನಮ್ಮ ಸುತ್ತಲೂ ಇರುವವರಲ್ಲಿ ಯಾರು ನಮಗೆ ನಿಜವಾದ ಶತ್ರುಗಳು ಎನ್ನುವದು ನಿಖರವಾಗುತ್ತದೆ .
-----
ಕುಟುಂಬದ ದೊಡ್ಡ ಕಾರ್ಯಕ್ರಮದಲ್ಲಿ ನೆಂಟರಿಷ್ಟರು , ನೆರೆಹೊರೆಯವರ ಒಲವು ಹಿಡಿಯುವದು ; ಚುನಾವಣೆಯಲ್ಲಿ ಕಾರ್ಯಕರ್ತರ ಒಲವು ಹಿಡಿಯುವದು ; ಗೋವಿನ ಪೂಜೆಯ ದಿನ (ದೀಪಾವಳಿಯಂದು) ಹಸು, ಹೋರಿಗಳ ಒಲವು ಹಿಡಿಯುವದು ; ಈ ಮೂರೂ ಕಷ್ಟ ಸಾಧ್ಯವೇ ಸರಿ .
-----
'ಅವನು ಹಣ ಖರ್ಚು ಮಾಡಲು ಸಾಯುತ್ತಾನೆ , ಹೋಗುವಾಗ ಏನು ಕಟ್ಟಿಕೊಂಡು ಹೋಗುತ್ತಾನೆಯೇ ?' ಎಂದು ಜನ ಹೇಳುತ್ತಾರೆ . ಹಾಗೆಂದು ಹೀಗೆ ಹೇಳುವ ಜನ ತಾವು ಕೂಡಿಡುವ ಅಭ್ಯಾಸವನ್ನೇನೂ ಬಿಡುವದಿಲ್ಲ. ನಮ್ಮೊಂದಿಗೆ ನಮ್ಮ ಹೆಂಡತಿ, ಮಕ್ಕಳು , ಸೊಸೆಯಂದಿರು , ಅಳಿಯಂದಿರು , ಮೊಮ್ಮಕ್ಕಳು , ಮಿಗಿಲಾಗಿ ವೃದ್ಧ ಅಪ್ಪ - ಅಮ್ಮ , ಹೀಗೆ ಎಲ್ಲರೂ ಒಟ್ಟಿಗೆ ಸಾಯುವುದಾದರೆ ಅಡ್ಡಿಯಿಲ್ಲ . ನಾನೊಬ್ಬ ಸತ್ತು ಅವರೆಲ್ಲಾ ಬದುಕಿ ಉಳಿದರೆ ಅವರೇನು ಬಿಕ್ಷೆ ಬೇಡಬೇಕೆ ? ಇಷ್ಟಕ್ಕೂ ಒಬ್ಬ ವ್ಯಕ್ತಿ ಗಳಿಸಿದ ಸಂಪತ್ತು ಕೇವಲ ಅವನೋಬ್ಬನದ್ದಲ್ಲ , ಪರೋಕ್ಷ್ಯವಾಗಿ ಇಡಿಯ ಕುಟುಂಬದ್ದು .
------
ಸುಖ ತೃಪ್ತಿಯನ್ನು ನಾವು ನಾವಿರುವಲ್ಲಿ , ನಮಗಿರುವಿಷ್ಟರಲ್ಲಿ ಕಂಡುಕೊಳ್ಳಬೇಕು. ಹುಡುಕುತ್ತಾ ಹೋದರೆ 'ಸಾಕು' ಎನ್ನಿಸುವದು ಸಿಗುವುದೇ ಇಲ್ಲ . ಸಾಕು ಎನ್ನುವುದು ಕೇವಲ ಎರಡೇ !. ಒಂದು ಹೊಟ್ಟೆಗೆ .. ಎರಡು ಪೆಟ್ಟಿಗೆ !!!
ಮತ್ತೊಬ್ಬರ ಬಾಹ್ಯದಂಬರವನ್ನು ನೋಡಿ ಮೈ ಪರಚಿಕೊಂಡರೆ ಉಳಿವುದು ಗಾಯವೊಂದೇ. ಆ ಆಡಂಬರದ ಹಿಂದೆ ಇರುವ ಗಾಯದ ಹುಳವನ್ನು ಗಮನಿಸಿ ನಾವು ಇಷ್ಟಕ್ಕೂ ಸುಸ್ತಿರ ಎಂಬ ತೃಪ್ತಿಭಾವ ಬೇಕು.
------
ಸುಖ ತೃಪ್ತಿಯನ್ನು ನಾವು ನಾವಿರುವಲ್ಲಿ , ನಮಗಿರುವಿಷ್ಟರಲ್ಲಿ ಕಂಡುಕೊಳ್ಳಬೇಕು. ಹುಡುಕುತ್ತಾ ಹೋದರೆ 'ಸಾಕು' ಎನ್ನಿಸುವದು ಸಿಗುವುದೇ ಇಲ್ಲ . ಸಾಕು ಎನ್ನುವುದು ಕೇವಲ ಎರಡೇ !. ಒಂದು ಹೊಟ್ಟೆಗೆ .. ಎರಡು ಪೆಟ್ಟಿಗೆ !!!
ಮತ್ತೊಬ್ಬರ ಬಾಹ್ಯದಂಬರವನ್ನು ನೋಡಿ ಮೈ ಪರಚಿಕೊಂಡರೆ ಉಳಿವುದು ಗಾಯವೊಂದೇ. ಆ ಆಡಂಬರದ ಹಿಂದೆ ಇರುವ ಗಾಯದ ಹುಳವನ್ನು ಗಮನಿಸಿ ನಾವು ಇಷ್ಟಕ್ಕೂ ಸುಸ್ತಿರ ಎಂಬ ತೃಪ್ತಿಭಾವ ಬೇಕು.
-------
ಎಲ್ಲಾ ಚಟಗಳಂತೆ ಹಣ ಮಾಡಬೇಕೆ0ಬುದೂ ಒಂದು ಚಟ. ಹಣ ಸೇರುವುದು,ಬಿಡುವುದು ಅವರವರ ಅದೃಷ್ಟ.ಆದರೆ ಹಣ ಮಾಡುವ ಚಟ ಒಳ್ಳಯದು.ಅದರಿಂದ ಬೇರೆ ಚಟ ಹಿಡಿಯುವುದಿಲ್ಲ .ಏಕೆಂದರೆ ಬೇರೆ ಚಟಕ್ಕೆ ಹೋದರೆ ಕಾಸು ಖರ್ಚಾದೀತು ಎಂಬ ಚಿಂತೆ .
-- ಎಂ ಗಣಪತಿ , ಕಾನುಗೋಡು
chanagiddu ganapathi mava
ReplyDelete