ಎಂ. ಗಣಪತಿ. ಕಾನುಗೋಡು
ಹೌದು. ಹೆಂಡತಿಯ ಮೇಲೆ ಗಂಡನಾದವನು ಅತ್ಯಾಚಾರ ನಡೆಸುವುದೂ ಇದೆ. ಇದನ್ನು ಕೇಳಿ ಬಹಳ ಜನರಿಗೆ ಆಶ್ಚರ್ಯವಾಗುತ್ತದೆ. ಒಬ್ಬ ಪುರುಷ ಮಹಿಳೆಯನ್ನು ಮದುವೆಯಾಗಿದ್ದಾನೆ ಎಂದಮೇಲೆ ಅವಳ ದೈಹಿಕ ಸಂಪರ್ಕವನ್ನು ಹೊಂದುವ ಹಕ್ಕು ಅವನಿಗೆ ಇದೆ. ಇಲ್ಲಿ ಅತ್ಯಾಚಾರದ ಪ್ರಶ್ನೆ ಏನು ಎಂದು ಸಾಮಾನ್ಯರ ಅಭಿಪ್ರಾಯ.
ಸ್ವತಃ ಪತ್ನಿಯೊಡನೆ ದೈಹಿಕ ಸಂಪರ್ಕವನ್ನು ಹೊಂದಬೇಕಾದರೂ ಆಕೆಯ ಪೂರ್ಣ ಸಮ್ಮತಿಬೇಕು. ಅವಳ ಇಚ್ಚೆಯ ವಿರುದ್ಧ ಬಲಾತ್ಕಾರವಾಗಿ ಅವಳನ್ನು ಸಂಪರ್ಕಿಸುವುದು ವೈವಾಹಿಕ ಅತ್ಯಾಚಾರ ಎಂದು ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪತಿ-ಪತ್ನಿಯರ ಕೂಡುವಿಕೆಗೂ ಕಾಲ, ಸ್ಥಳ, ಪರಸ್ಪರ ಒಪ್ಟಿಗೆ ಹಾಗೂ ಆ ಕ್ರಿಯೆಗೆ ಸಂಬಂಧಪಟ್ಟು ಸಂದರ್ಭದ ಪೂರ್ಣ ಸಿದ್ಧತೆಬೇಕು. ಇವ್ಯಾವುದರ ಹೊಂದಾಣಿಕೆಯೂ ಇಲ್ಲದೆ ಹಠಾತ್ ಒತ್ತಾಯಪೂರ್ವಕವಾಗಿ ನಡೆಸುವ ಸಂಭೋಗ ಅತ್ಯಾಚಾರವೆನಿಸುತ್ತದೆ. ಮದುವೆಯಾದ ಹೊಸತರದಲ್ಲಿ ಅಥವಾ ಯೌವನದ ಬಿಸಿ ಕುದುಯುತ್ತಿರುವವರೆಗೂ ಈ ತೆರೆನ ಅನಪೇಕ್ಷಿತ ಸಂದರ್ಭಗಳು ನಿರ್ಮಾಣವಾಗುತ್ತದೆ. ಇದು ಪ್ರಾಯದ ಪ್ರಮಾದವೇ ವಿನಃ ಹಿಂಸೆಯ ದುರುದ್ದೇಶ ಪುರುಷನಿಗೆ ಇರುವುದಿಲ್ಲ. ಹಾಗಂತ ಈ ಮಾತು ಎಲ್ಲರಿಗೂ ಅನ್ವಯವಾಗುವುದಿಲ್ಲ.
ಆಹಾರ ಪಥ್ಯದಂತೆ ಹಾಸಿಗೆ ಪಥ್ಯವೂ ಕೂಡ ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ಒಂದು ನಿಗ್ರಹ. ಸಂತಾನ ನಿಯಂತ್ರಣದ ಆಧುನಿಕ ತಂತ್ರಗಳ ಅಭಾವದ ಕಾಲದಲ್ಲಿ ಸಂತಾನ ನಿಯಂತ್ರಣಕ್ಕಾಗಿ ನಮ್ಮ ಹಿರಿಯರು ಹಾಸಿಗೆ ಪಥ್ಯವನ್ನು ಅನುಸರಿಸುತ್ತಿದ್ದರು. ಹೆಂಡತಿ ಗರ್ಭವನ್ನು ಧರಿಸಬಹುದಾದ ದಿನಗಳಲ್ಲಿ ಆಕೆಯ ದೆೃಹಿಕ ಸಂಪರ್ಕವನ್ನು ನಡೆಸುತ್ತಿರಲಿಲ್ಲ. ಹೆಂಡತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಹಾಸಿಗೆ ಪಥ್ಯ ಅಗತ್ಯ. ಆಧುನಿಕ ಸಮಾಜದ ಬಹುತೇಕ ಯುವಜನರಿಗೆ ಈ ಪರಿಕಲ್ಪನೆಯ ಮಾಹಿತಿ ಇಲ್ಲ.
ಬಹಳ ಕೆಲಸಗಳಿಂದ ದಣಿದಾಗ, ಕಾಯಿಲೆಯಿಂದ ಬಳಲಿದಾಗ, ರಾತ್ರಿ ನಿದ್ದೆಯಲ್ಲಿ ಮೈಮರೆತಾಗ, ತುಂಬು ಗರ್ಭಿಣಿ ಇದ್ದಾಗ, ಬಾಣಂತಿಯಿದ್ದಾಗ ಗಂಡನಡೆಸುವ ಸಂಪರ್ಕ ಕ್ರಿಯೆಯು ಅತ್ಯಾಚಾರವೆನಿಸುತ್ತದೆ.
ನಗರದ ಬಹಳ ಕುಟುಂಬಗಳಲ್ಲಿ ರಜಸ್ವಲೆಯಾದ ಮಹಿಳೆ ಹೊರಗೆ ಇರುವುದು ಕಂಡುಬರುವುದಿಲ್ಲ. ಈ ಸಂದರ್ಭದಲ್ಲಿ ಅವಳಿಗೆ ದೈಹಿಕ ಮತ್ತು ಮಾನಸಿಕ ವಿಶ್ರಾಂತಿಬೇಕು. ಈ ಕಾರಣದಿಂದ ಕೆಲಸದ ಒತ್ತಡದಿಂದ ಆಕೆ ದೂರವಿರಬೇಕು ಎನ್ನುವ ನಮ್ಮ ಹಿರಿಯರ ಕಲ್ಪನೆಯಲ್ಲಿ ನಾಲ್ಕುದಿನ ಆಕೆಯನ್ನು ಪ್ರತ್ಯೇಕ ಇರಿಸುವ ಪದ್ಧತಿ ಬಂದಿದ್ದಿರಬೇಕು. ಈ ಸಂದರ್ಭದಲ್ಲಿ ದೈಹಿಕ ಸಂಪರ್ಕವೂ ಅವಳ ಆರೋಗ್ಯದ ದೃಷ್ಟಿಯಿದ ನಿಷಿದ್ಧ. ದೇಹ ಮತ್ತು ಮನಸ್ಸು ಬಹಳ ಬಳಲಿಕೆಯಲ್ಲಿ ಇರುವುದರಿಂದ ಮಹಿಳೆಗೆ ಅದರ ಅಪೇಕ್ಷೆಯೂ ಇರುವುದಿಲ್ಲ. ಆದರೆ ಇಂದಿನ ಜಂಜಾಟದ ಬದುಕಿನಲ್ಲಿ, ಅದೂ ಕೂಡ ಕೇವಲ ಪತಿ- ಪತ್ನಿಯರಷ್ಟೆ ಇರುವ ಅಣು ಕುಟುಂಬದಲ್ಲಿ ಮಹಿಳೆ ರಜಸ್ವಲೆಯಾದಾಗ ಹೊರಗೆ ಇರುವ ಮಾತು ಇರಲಿ, ಒಟ್ಟಿಗೇ ಹಾಸಿಗೆಯನ್ನು ಹಂಚಿಕೊಳ್ಳುತ್ತಾರೆ. ಇಲ್ಲಿ ಹೆಂಡತಿಯ ಸಂಪರ್ಕವನ್ನು ಅದಕ್ಕೆ ಬೇಕಾದ ವ್ಯವಸ್ಥೆಯೊಂದಿಗೆ ಗಂಡ ಬಯಸುವ ಸಾಧ್ಯತೆ ಇದೆ. ಇದು ಅತ್ಯಾಚಾರ.
ಪುರುಷರಿಗಿಂತ ಮಹಿಳೆಯರು ಹೆಚ್ಚು ಧಾರ್ಮಿಕ ಆಚರಣೆವುಳ್ಳವರು. ಕುಟುಂಬದಲ್ಲಿ ವ್ರತಾದಿಗಳಿದ್ದಾಗ ಧಾರ್ಮಿಕ ಕಟ್ಟಳೆಯಕಾರಣ ಆನೇಕ ಮಹಿಳೆಯರಿಗೆ ದೈಹಿಕ ಸಂಪರ್ಕ ನಿಷಿದ್ಧ. ಅಂದಿನ ದಿನ ಹಾಸಿಗೆ ಪಥ್ಯವನ್ನು ಅವಳು ಬಯಸುತ್ತಾಳೆ. ಪುರುಷನ ಯೌವನದ ಒತ್ತಡ ಸುಮ್ಮನಿದ್ದೀತೆ?. ಹೆಂಡತಿಯ ಇಚ್ಚೆಯ ವಿರುದ್ಧವಾಗಿ, ಬಲತ್ಕಾರವಾಗಿ ಅವಳ ಸಂಪರ್ಕ ನಡೆಸುತ್ತಾನೆ. ಇದು ಗಂಡನ ಅತ್ಯಾಚಾರ.
ಹಿಂದಿನಹಾಗೆ ಈಗ ಅವಿಭಕ್ತ ಕುಟುಂಬಗಳಿಲ್ಲ. ಮನೆತುಂಬಾ ಜನರು ಇಲ್ಲ. ಈಗ ಏನಿದ್ದರೂ ಅಣು ಕುಟುಂಬ (ನ್ಯೂಕ್ಲಿಯರ್ ಫ್ಯಾಮಿಲಿ). ಗಂಡ ಮತ್ತು ಹೆಂಡತಿ ಇಬ್ಬರದ್ದೇ ದರ್ಭಾರು. ಮಧ್ಯೆ ಬ್ರೇಕ್ ಹಾಕುವ ಹಿರಿಯರು ಇಲ್ಲಿ ಇಲ್ಲ. ಇಂತಹ ಅವಘಟನೆಯ ವೇದನೆಯನ್ನು ಹೊರಗೆ ತರುವ ಸ್ಥಿತಿಯಲ್ಲಿ ಹೆಂಡತಿ ಇರುವುದಿಲ್ಲ. ಏಕೆಂದರೆ ಗಂಡ ಎನ್ನುವ ಮರ್ಯಾದೆ, ಪ್ರೀತಿ ಅವಳಿಗೆ ಇದ್ದೇ ಇರುತ್ತದೆ. ಒಳಗೇ ವಿರೋಧಿಸಿದರೆ ಗಂಡ ತಡೆದುಕೊಳ್ಳಬೇಕಲ್ಲ. ಅಸಾಯಕಳಾಗಿ ಈ ತೆರೆನ ಅತ್ಯಾಚಾರಕ್ಕೆ ಆಕೆ ಸಿಲುಕಿಕೊಳ್ಳುತ್ತಾಳೆ.
ಪುರುಷನಿಗೂ ಕೂಡ ಲೈಂಗಿಕ ಸಂಪರ್ಕ ಒಂದು ಅಗತ್ಯ. ಹಾಗೂ ನೈಜವಾದ ಪ್ರಕ್ರಿಯೆ ಎಂಬುದು ಸುಳ್ಳಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಮೇಲೆ ಹೇಳಿದ ಅನೇಕ ಪ್ರಸಂಗಗಳಲ್ಲಿಯೂ ಅವನಿಗೆ ವಿನಾಯಿತಿ ಇರುತ್ತದೆ.
ವಿಷಯ ಹೇಗಾದರೂ ಇರಲಿ. ಹೆಂಡತಿಯ ಮೇಲೆ ನಡೆಯುವ ಗಂಡನ ಅತ್ಯಾಚಾರ ಒಟ್ಟಾರೆ ಸಮಾಜದ ಸ್ವಾಸ್ತ್ದ್ಯದ ದೃಷ್ಟಿಯಿಂದ ಪುರುಷನಿಗೆ ತಿಳಿಯಹೇಳಬೇಕಾದ ಮತ್ತು P್ಷÀಮಿಸಬಹುದಾದ ಘಟನೆಯೂ ಹೌದು.
ಅಂಚೆ : ಬಿ. ಮಂಚಾಲೆ - 577 431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊ : 9481968771
No comments:
Post a Comment
Note: only a member of this blog may post a comment.