ಎಂ.ಗಣಪತಿ. ಕಾನುಗೋಡು
ಪುರುಸಸೊತ್ತಿಲ್ಲ _ ಎನ್ನುವ ಪರಿಕಲ್ಪನೆ ಒಬ್ಬ ದೊಡ್ಡ ಉದ್ಯಮಿಯಿಂದ ಹಿಡಿದು ಬಿಕ್ಷುಕನವರೆಗು ತನ್ನ ಹರವಾನ್ನು ಕಂಡುಕಕೊಂಡಿದೆ . ಇಂದು ಯಾರನ್ನು ಕೇಳಿದರೂ ಪುರುಸೊತ್ತಿಲ್ಲ ಎನ್ನುವ ಸೊಲ್ಲು ಸಾಮಾನ್ಯ.
ಆಧುನಿಕ ಯಾಂತ್ರಿಕ ಬದುಕಿನಲ್ಲಿ ಇದು ಅನಿರೀಕ್ಷಿ ತವೇನಲ್ಲ. ಆದರೆ ಪುರುಸೊತ್ತು ಎನ್ನುವುದು ತಾನಾಗಿಯೇ ಸಿಗುವಂತವುದೇ ಅಥವಾ ನಾವು ಕಂಡುಕೊಳ್ಳಬೇಕಾದುದ್ದೇ ಎಂಬುದನ್ನು ನಾವೇ ಆಲೋಚಿಸಬೇಕು.
ಒಂದು ನಿರ್ದಿಷ್ಟ ಉದ್ಯೋಗದ ಜನರಿಗೆ _ ಕೃಷಿಕ, ನೌಕರ, ವ್ಯಾಪಾರಿ ಹೀಗೆ ಯಾವುದೇ ಒಂದು ಕಸುಬಿನಲ್ಲಿ ನಿರಂತರ ನಿರತರಾಗಿರುವವರಿಗೆ ಬಿಡುವು ಇರುವುದಿಲ್ಲ. ಹಾಗೆಂದು ಅವರು ತಮ್ಮ ದೈನಂದಿನ ಮೂಲಭೂತ ಅಗತ್ಯಗಳು _ ಊಟ, ಸ್ನಾನ, ನಿದ್ರೆ ಹೀಗೆ ಮುಂತಾದವುಗಳನ್ನು ಬಿಡಲು ಸಾಧ್ಯವಿಲ್ಲ. ಅದಕ್ಕೆಲ್ಲ ದಿನನಿತ್ಯದ ಕಸುಬಿನಲ್ಲಿ ಎಷ್ಟೇ ಒತ್ತಡವಿದ್ದರೂ ಪುರುಸೊತ್ತನ್ನು ಕಂಡುಕೊಳ್ಳೂತ್ತಾರೆ . ಅದು ಸಹಜ ಕೂಡ. ಇವರಿಗೆ ತಾವಾಯ್ತು , ತಮ್ಮ ಕೆಲಸವಾಯ್ತು ಅಷ್ಟೇ . ಇದು ಒಂದು ವರ್ಗ.
ಇನ್ನೊಂದು ವರ್ಗದ ಜನರಿದ್ದಾರೆ. ಇವರಿಗೆ ಯಾವುದೇ ನಿರ್ದಿಷ್ಟ ಉದ್ಯೋಗ ಇರುವುದಿಲ್ಲವೆಂದಲ್ಲ. ಅದನ್ನೇ ಹಿಡಿದು ಮುನ್ನೆಡೆಸುವ ಪದ್ದತಿ ಇರುವುದಿಲ್ಲ. ಹಾಗೂ ಹೀಗೂ ಮೂರುಹೊತ್ತಿನ ಅನ್ನಕ್ಕೆ ಬೇಕಾಗುವಷ್ಟು ದುಡಿಮೆ ಅವರದ್ದು. ಹಾಗೆಂದು ಅವರಿಗೂ ಪುರುಸೋತ್ತಿಲ್ಲ . ತಮ್ಮ ಮಿತ ದುಡಿಮೆಯ ಶೂನ್ಯವೇಳೆಯಲ್ಲಿ ಅವರು ತಮ್ಮದರಕ್ಕಿಂತ ಬೇರೆಯವರ ಬಗ್ಗೆ ಕಾಳಜಿ ವಹಿಸುವುದು ಹೆಚ್ಚು. ತಮ್ಮ ಸುತ್ತಮುತ್ತಲಿನವರ ಉಸಾಬರಿಗೆ ಅನಾವಶ್ಯಕ ಮೂಗು ತೂರಿಸುತ್ತಾರೆ. ಪರಪೀಡನೆಯಿದ ಮನೋರಂಜನೆಯನ್ನು ಪಡೆಯುತ್ತಾರೆ. ಇವರು ಒಬ್ಬರಿಗೊಬ್ಬರಿಗೆ ಬೆಂಕಿಹಚ್ಚಿ ಕೊನೆಗೆ ತಾವೇ ಪಂಚಾಯಿತಿ ಮಾಡಿ ಬಾಸ್ ಆಗುವ ಚಟದ ಜನ. ತನ್ನದು ಸಾವಿರ ಹೋದರೂ ಮತ್ತೊಬ್ಬನ ನೂರನ್ನು ವೆಚ್ಚಮಾಡಿಸುತ್ತೇನೆ ಎನ್ನುವ ಜನ. ಆಯುಷ್ಯವಿಡೀ ಕೋರ್ಟು _ಕಟ್ಲೆ ನಡೆಸುವ ಜನ ಹೀಗೆ ಇನ್ನು ಅನೇಕ ಸಲ್ಲದ ಕೆಲಸಗಳಲ್ಲಿಯೇ ದಿನದ ತಮ್ಮ ವೇಳೆಯನ್ನು ವ್ಯಯಮಾಡುವ ಜನರಿದ್ದಾರೆ. ಇವರು ತಮ್ಮ ಸೀಮಿತ ಉದ್ಯೋಗಕ್ಕೆ ಧಕ್ಕೆ ತಂದುಕೊಳ್ಳದೆ ಸ್ವಂತ ರಂಜನೆಗಾಗಿ ಇನ್ನೊಬ್ಬರಿಗೆ ತೊಂದರೆಯನ್ನು ಕೊಡುವುದರಲ್ಲಿ ತಮ್ಮ ಜೀವಿತಾವದಿsಯನ್ನು ತೊಡಗಿಸಿಕೊ0ಡಿರುತ್ತಾರೆ, ಇವರಿಗೂ ಪುರುಸೊತ್ತೇ ಇಲ್ಲ.
ಹಲವು ಜನರಿಗೆ ತಮ್ಮ ಜೀವನೋಪಾಯಕ್ಕಾಗಿ ಯಾವ ಉದ್ಯೋಗವೂ ಇರುವುದಿಲ್ಲ. ಸ್ವಂತ ದುಡಿಯುವುದಕ್ಕಷ್ಟೇ ಸೋಮಾರಿಗಳು. ಸ್ವಾಬಿಮಾನ ವಿಲ್ಲದವರು. ಕುಟುಂಬದಲ್ಲಿ ಯಾರಾದರೂ ದುಡಿಯುವರಿದ್ದರೆ ತಿಂದುಕೊಂಡು ಅಡ್ಡನಾಡಿಯಾದವರು. ಹಾಗಂತ ಇವರಿಗೂ ಪುರುಸೊತ್ತಿಲ್ಲ. ಇವರು ದಿನದ ಹೆಚ್ಚಿನ ಸಮಯ ಮಲಗಿರುತ್ತಾರೆ. ನಿದ್ದೆ ಬಂದಿಲ್ಲವೇ, ಹಾಯಾಗಿ ಕುಳಿತಿರುತ್ತಾರೆ. ಎದ್ದುಹೊರಟರೋ, ಯಾರಿಗಾದರೂ ಟೋಪಿಹಾಕಿ ಹಣ ಲಪಟಾಯಿಸುತ್ತಾರೆ. ಇವರು ಸೋಮಾರಿಗಳೇ ವಿನಃ ದಡ್ಡರಲ್ಲ. ವಿಕೃತ ಮತ್ತು ಕ್ರಿಮಿನಲ್ ಮನೋಭಾವದವರು. ವಾಸ್ತವಿಕ ದುಡಿಮೆಗಾರರ ಮನಸ್ಸು ಒಂದೇ ದಿಕ್ಕಿನಲ್ಲಿ , ಒಂದೇ ರೀತಿಯಲ್ಲಿ ಓಡುತ್ತದೆ ಇವರದ್ದು ಹಾಗಲ್ಲ. ಯಾರನ್ನಾದರೂ ವಂಚಿಸಿ ಹೊಟ್ಟೆ ತುಂಬಿಸಿಕೊಂಡು ಮೋಜುಮಾಡಲು ಹಲವು ಕಡೆ, ಹಲವು ರೀತಿಯಲ್ಲಿ ಬುದ್ಧಿಯನ್ನು ವ್ಯಯಿಸುತ್ತಾರೆ. ಉಂಡಾಡಿಗಳಾಗಿ ತಿರುಗುತ್ತಾರೆ.ಕೆಲವೋಮ್ಮೆ ರೌಡಿಸಂನ್ನು ನಡೆಸುತ್ತಾರೆ. ಸಮಾಜ ಕಂಟಕರಾಗಿ ಬದುಕು ನಡೆಸುತ್ತಾರೆ.
ಒಟ್ಟಾರೆ ಎಲ್ಲರ ಬದುಕು ಪುರಸೊತ್ತು ರಹಿತವಾದದ್ದು. ಸಮಯವನ್ನು ವಿನಿಯೋಗಿಸಿಕೊಳ್ಳುವ ಕ್ರಮಗಳು ಬೇರೆ ಬೇರೆ ಅಷ್ಟೆ. ನಾವು ಜೀವನದ ಸೀಮಿತ ಕಾಲಾವದಿಯನ್ನು ಸರಿಯಾಗಿ ವಿನಿಯೋಗಿಸಿಕೊಳ್ಳುವುದು ಮುಖ್ಯ. ಜೀವನವನ್ನು ಶಿಸ್ತುಬದ್ದವಾಗಿ ಹೊಂದಿಸಿಕೊಳ್ಳುವವರು ಪುರುಸೊತ್ತಿಗೂ ವೇಳೆಯನ್ನು ಹೊನ್ದಿಸಿಕೊಂಡಿರುತ್ತಾರೆ. ಎಲ್ಲದಕ್ಕೂ ಘನ ಷರತ್ತು ಬೇಕು ಅಷ್ಟೆ.
Samaya sadupayogada ariviruva/ellade eruva vibhinna mukhagalu.. Chennagiddu :)
ReplyDelete