--ಎಂ. ಗಣಪತಿ ಕಾನುಗೋಡು
ಹೆಚ್ಚಾಗಿ ಮಲೆನಾಡಿನಲ್ಲಿ ಮನೆ ಮುಂದಿನ ಗೇಟಿಗೆ ಒಂದು ಕಡೆ ಮುಚ್ಚಳ ಹಾಕಿದ 2 ಅಡಿ ಉದ್ದದ ಪಿ.ವಿ.ಸಿ ಪೈಪ್‍ನ್ನು ಕಟ್ಟಿರುತ್ತಾರೆ. ನೆನೆಯದಿರಲೆಂದು ಮಳೆಗಾಲದಲ್ಲಿ ಸುದ್ಧಿ ಪತ್ರಿಕೆಯ ರಕ್ಷಣೆಗಾಗಿ ಪ್ರತಿ ಮನೆಯಲ್ಲಿ ಮಾಡಿರುವ ವ್ಯವಸ್ಥೆ ಇದು. ಪತ್ರಿಕೆಯನ್ನು ತಂದ ಹುಡುಗ ಅದರೊಳಗೆ ಅದನ್ನು ಪ್ರತಿದಿನ ತುರುಕಿ ಹೋಗುತ್ತಾನೆ.
ಒಂದು ದಿನ ಬೆಳಿಗ್ಗೆ ಮನೆಯ ಯಜಮಾನರೊಬ್ಬರು ಪ್ರತಿಕೆನ್ನು ತೆಗೆಯಲಿಕ್ಕಾಗಿ ಆ ಪೈಪ್‍ನೊಳಗೆ ಬೆರಳನ್ನು ಓಡಿಸಿದ್ದಾರೆ. ಪ್ರತಿಕೆ ಅದರಲ್ಲಿ ಇರಲಿಲ್ಲ. ಹುಡುಗ ಬರುವುದು ತಡವಾಗಿತ್ತು. ಯಜಮಾನರ ಕೈಗೆ ಸ್ಪರ್ಶವಾಗಿದ್ದೇ ಬೇರೆ. ಪುನಃ ಕೈಯಾಡಿಸಿ ನೋಡ ಲಾರದ ಮಟ್ಟಕ್ಕೆ ಅವರ ಎದೆ ಝಲ್ ಎಂದಿತ್ತು. ತಕ್ಷಣ ಟಾರ್ಚ್‍ನ್ನು ಬಳಸಿ ಒಳಗೆ ನೋಡಿದ್ದಾರೆ. ಒಂದು ಸಣ್ಣ ಸರ್ಪ ಅದರೊಳಗೆ ಮಳೆಯಿಂದ ರಕ್ಷಣೆಯನ್ನು ಪಡೆದಿದೆ. ಯಜಮಾನರ ಅದೃಷ್ಟಕ್ಕೆ ಅವರ ಕೈಗೆ ತಾಗಿದ್ದು ಸರ್ಪದ ಬಾಲ ಅಷ್ಟೇ.
ಹುಡುಗಾಟಿಕೆಯ ಹುಡುಗ ಬಂದು ಇಂದು ಏಕೋ ಪೇಪರ್ ಸರಿಯಾಗಿ ಒಳಗೆ ಹೋಗುತ್ತಿಲ್ಲಾ ಎಂದುಕೊಳ್ಳುತ್ತಿದ್ದ ಅದನ್ನು ಹಿಂದೆ-ಮುಂದೆ ಸರಿಸಾಡಿ ತನ್ನ ಬೆರಳು ಸಹಿತ ಮುಂದೂಡುವ ಪ್ರಯತ್ನ ಮಾಡುತ್ತಿದ್ದ. ಸರ್ಪ ಹೊರಗೆ ಹೊರಡುವ ಭರದಲ್ಲಿ ಅವನ ಹಸ್ತವನ್ನು ಕುಟುಕಿದರೂ ಆಶ್ಚರ್ಯವಿರಲಿಲ್ಲ.
ಅಂದು ಹುಡುಗ ತಡವಾಗಿ ಬಂದದ್ದು, ಯಜಮಾನರು ಮುಂಚೆಯೇ ಕೈ ಹಾಕಿ ಜಾಗ್ರತೆ ವಹಿಸಿದ್ದು ಇವೆರಡೂ ಸರ್ಪ ಕಡಿತದಿಂದ ಜೀವವೊಂದು ಪಾರಾಗಲು ಸಹಾಯವಾಯಿತು.
ಅಲ್ಲ. ಒಂದು ಪ್ರಶ್ನೆ. ನಾವು ಕೈಗೊಳ್ಳುವ ರಕ್ಷಣಾ ಕಾರ್ಯವು ಕೂಡಾ ಒಮ್ಮೆಮ್ಮೆ ನಮಗೆ ವಿಷವಾಗಿ ತಿರುಗಬಹುದಲ್ಲವೇ? ಜೋಕೆ...... ಜೋಕೆ.....!
ದಿನಾಂಕ: 18-11-2013 ಎಂ. ಗಣಪತಿ M.A.
ಕಾನುಗೋಡು
ಅಂಚೆ : ಬಿ.ಮಂಚಾಲೆ-577431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ ಮೊ.: 9481968771
Blog : mgkangod.blogspot.com
No comments:
Post a Comment
Note: only a member of this blog may post a comment.