-- ಎಂ. ಗಣಪತಿ, ಕಾನುಗೋಡು
ಪದ್ಮಜ್ಜಿ ಮತ್ತು ಲಕ್ಷ್ಮಜ್ಜಿ ಇಬ್ಬರೂ ಓರೆಗಿತ್ತಿಯರು. ಇಬ್ಬರ ಗಂಡಂದಿರೂ ತೀರಿ ಹೋಗಿದ್ದಾರೆ . ಇಬ್ಬರ ಮನೆಯೂ ಅಕ್ಕಪಕ್ಕದಲ್ಲಿಯೇ ತಾಗಿಕೊಂಡಿದೆ. ಇಬ್ಬರೂ ಹಲ್ಲು ಬಿದ್ದ ಬೋಡು ಬಾಯಿಯ ಮುದುಕಿಯರಾಗಿದ್ದಾರೆ. ಇವರಿಬ್ಬರ ಯಜಮಾನರಲ್ಲಿ ಅಣ್ಣ ಬುದ್ದಿವಂತ. ಆಸ್ತಿ ಮನೆ ವಿಸ್ತರಿಸಿ ತಮ್ಮನಿಗೆ ಆಸ್ತಿಯಲ್ಲಿ ನ್ಯಾಯವಾಗಿ ಪಾಲು ಕೊಟ್ಟು ಮನೆಯನ್ನೂ ಕಟ್ಟಿಸಿಕೊಟ್ಟಿದ್ದಾನೆ.
ವಯಸ್ಸು ಹೋದರೇನು ? ಓರೆಗಿತ್ತಿಯರ ನಂಜೇನೂ ಹೋಗಲಿಲ್ಲವಲ್ಲ... ಒಂದು ದಿನ ಸಂಜೆ ಅಕ್ಕಪಕ್ಕದ ಅವರವರ ಮನೆಯ ಕಟ್ಟೆಯಮೇಲೆ ಕುಳಿತಿದ್ದರು. ಹೇಗೋ ಜಗಳಕ್ಕೆ ಶುರುವಾಯಿತು. ಇದು ಹಿಂದಿನಿಂದಲೂ ಇದ್ದದ್ದೇ. ಸುಮಾರು ಅರ್ಧ ಗಂಟೆ ವಾದಾಟವಾದ ನಂತರ ಹೇಳಿದಳು ಅಕ್ಕ ಅಜ್ಜಿ ...
" ನಿಂಗಳದ್ದು ಎಂತಾ ಇದ್ದೇ ? ಯಲ್ಲಾ ಯಮ್ಮನೇರು ಮಾಡಿಟ್ಟಿದ್ದನ್ನೇ ನಿಂಗ ತಿಂಬೋದು ಸೈಯಲ್ಲೇ ? !!" ..
ತಂಗಿ ಅಜ್ಜಿಗೆ ಸಿಟ್ಟು ನೆತ್ತಿಗೇರಿತು. ಅಕ್ಕನ ಒಂದು ಮಾತಿಗೆ ನಾಲ್ಕು ಮಾತು ಕುಟ್ಟಿಗಾಣಿಸಬೇಕು ಎಂಬುದೇ ಅವಳ ಆತುರ .. ಉಭ್ರಮೆಯಲ್ಲಿಯೇ ಹೇಳಿಬಿಟ್ಟಳು ..
" ಹೌದೇ.... ಎಲ್ಲಾ ನಿನ್ನ ಗಂಡನ್ದೇಯಾ .. ಈ ಮನೆಯೂ ನಿನ್ನ ಗಂಡನ್ದೇಯಾ ... ಈ ಅಡಿಕೆ ತೋಟವೂ ನಿನ್ನ ಗಂಡನ್ದೇಯಾ .. ನಮ್ಮನೆ ಸೋಮ, ಚಂದ್ರನೂ ನಿನ್ನ ಗಂಡನ್ದೇಯಾ.. .. (ಸೋಮ ಚಂದ್ರ ಇವಳ ಮಕ್ಕಳು :) ) "
ಈ ತೆರನ ಸಂದರ್ಭಕ್ಕೇ ಕಾಯುತ್ತಿದ್ದ ಅಕ್ಕ ಅಜ್ಜಿ ಮುಡುಗಿದ ಸೊಂಟದಲ್ಲಿಯೇ ತಂಗಿ ಅಜ್ಜಿಯ ಕಡೆಗೆ ದೌಡಾಯಿಸಿ ಹೇಳಿದಳು ....
" ಹೌದೋ ... ಏನೋ ...... ಯಾರಿಗೆ ಗೊತ್ತು..... ? . ..!! "
ಎಂ. ಗಣಪತಿ, ಕಾನುಗೋಡು
ಬಿ. ಮಂಚಾಲೆ ಅಂಚೆ, - 577 431
ಸಾಗರ ತಾ. ಶಿವಮೊಗ್ಗ ಜಿಲ್ಲೆ.
Email : m.ganapathi.kangod@gmail.com
Blog : mgkangod.blogspot.com
Mob : 9481968771
No comments:
Post a Comment
Note: only a member of this blog may post a comment.