ಒಂದು ಮಾತು :
ಹವ್ಯಕರ ಮದುವೆಯಲ್ಲಿ ವಿಧಿಗಳಿಗೆ ಸಂಬಂಧಿಸಿ ಹೇಗೆ ಮಂತ್ರಗಳಿವೆಯೋ ಹಾಗೆ ಸಂಪ್ರದಾಯದ ಹಾಡುಗಳೂ ಇವೆ. ಅದರ ಜೊತೆಗೆ ಜರೆವ ಹಾಡುಗಳೂ ಹೌದು.
ಮದುವೆ ಸಮಾರಂಭದಲ್ಲಿ ಒಂದು ಕಡೆಯ ನೆಂಟರು ಮತ್ತೊಂದು ಕಡೆಯ ನೆಂಟರನ್ನು ಜರೆದು ಹಾಡನ್ನುಹಾಡುತ್ತಾರೆ. ಅದಕ್ಕೆ ಬೇಸರಿಸದೆ ಮತ್ತೊಂದು ಕಡೆಯವರು ಪ್ರತಿಯಾಗಿ ಮತ್ತೊಂದು ಜರೆವ ಹಾಡನ್ನು ಹಾಡುತ್ತಾರೆ. ಈ ಪ್ರಕ್ರಿಯೆ ಅನೇಕ ಹಾಡುಗಳ ಪರಿಧಿಯಲ್ಲಿ ಗಂಟೆಗೂ ಮಿಕ್ಕಿ ಹಿಂದಿನ ಕಾಲದಲ್ಲಿ ನಡೆದದ್ದುಂಟು. ಇದು ಪರಸ್ಪರರ ಖುಷಿಗಾಗಿ ಅಷ್ಟೆ. ಬಹಳಷ್ಟು ಸಾರಿ ಇದು ಅತಿ ಸಂತೋಷದಲ್ಲಿಯೇ ಕೊನೆಯನ್ನು ಕಾಣುತಿತ್ತು. ಕೆಲವೊಮ್ಮೆ ಒಂದು ಕಡೆಯವರು ಹಾಡಿನಲ್ಲಿ ಹಿಂದೆ ಬಿದ್ದಾಗ ಪರಿಸ್ತಿತಿಯು ಅಪರೂಪಕ್ಕೆ ಜಗಳಕ್ಕೆ ತಿರುಗಿದ್ದೂ ಇದೆ. ಅಂಥಹ ಸನ್ನಿವೇಶದಲ್ಲಿ ಅಲ್ಲಿದ್ದ ಹಿರಿಯರು ಸಮಜಾಯಿಷಿ ಮಾಡಿ ಸಮಾಧಾನಕ್ಕೆ ತಂದಿದ್ದೂ ಇದೆ.ಹಿಂದೆ ಒಂದು ಕಾಲದಲ್ಲಿ ನಮ್ಮ ಅಜ್ಜಿಯಂದಿರು ಸ್ಥಳದಲ್ಲಿಯೇ ಹಾಡುಗಳನ್ನು ಕಟ್ಟಿ ಕಟ್ಟಿ ಹಾಡುವ ಕಲಾ ಚಾತುರ್ಯವನ್ನು ಹೊಂದಿದ್ದರು.
ಇದು ಕೆಲವು ವರ್ಷಗಳ ಹಿಂದಿನ ಮಾತು. ಇಂದು ಪರಿಸ್ತಿತಿ ಹಾಗಿಲ್ಲ. ಹವ್ಯಕರ ಹೆಣ್ಣು ಮಕ್ಕಳ ಜೀವನ ಕ್ರಮ ಬದಲಾಗಿದೆ. ಇಂದಿನ ಹವ್ಯಕ ಹೆಣ್ಣು ಮಕ್ಕಳಲ್ಲಿ ಸಂಪ್ರದಾಯದ ಹಾಡುಗಳನ್ನು , ಹಿಂದಿನಂತೆ ಜರೆಯುವ ಹಾಡುಗಳನ್ನು ಹೇಳುವವರು ಕಡಿಮೆಯಾಗಿದ್ದಾರೆ. ಹೇಳುವವರು ಕೆಲವರು ಇದ್ದರೂ ಸನ್ನಿವೇಶದ ಸಮಯಾವಕಾಶವಿಲ್ಲ.
ನಮ್ಮ ಮದುವೆ ಸಮಾರಂಭದಲ್ಲಿ ನಮ್ಮಲ್ಲಿರುವ ಸಾಮಾನ್ಯ ಹಾಡುಗಾರ್ತಿಯರೇ ಎರಡು ತಂಡಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಒಮ್ಮೆ ಎರಡು ತಂಡದಲ್ಲಿ ಒಬ್ಬೊಬ್ಬರೇ ಇದ್ದರೂ ಸರಿಯೇ. ಹೆಚ್ಚು ಇದ್ದರೆ ಪಸಂದ. ನೆಂಟರನ್ನು ಹಾಡಿನಲ್ಲಿ ಜರೆದು, ಒಮ್ಮೆ ಎದುರು ಕಡೆಯಿಂದ ಉತ್ತರಿಸಿ ಹಾಡುವವರು ಯಾರೂ ಇಲ್ಲದಿದ್ದರೆ ನಾವೇ ಸಿದ್ಧಪಡಿಸಿಕೊಂಡ ಮತ್ತೊಂದು ತಂಡದಿಂದ ನಮ್ಮನ್ನೇ ನಾವು ಜರೆದು ಹಾಡಿಕೊಳ್ಳಬೇಕು. ಇದರಿಂದ ಮದುವೆ ಸಮಾರಂಭದ ಸಂತೋಷದ ಸನ್ನಿವೇಶದಲ್ಲಿ ಒಂದು ಮನರಂಜನೆ ಎಲ್ಲರಿಗೂ ದೊರೆಯುತ್ತದೆ. ನಶಿಸಿಹೋಗುತ್ತಿರುವ ಜರೆವ ಹಾಡಿನ ಪದ್ಧತಿ ಪುನಃ ರೂಢಿಗೆ ಬರಲು ಸಾಧ್ಯವಾಗುತ್ತದೆ.
ಈ ತೆರೆನ ಜರೆವ ಹಾಡುಗಳು ಒಂದು ಮೋಜಿಗಾಗಿ ಇರಬೇಕೇ ವಿನಃ ಯಾರ ಮನಸ್ಸಿಗೂ ನೋವು ಮಾಡುವಂತೆ ಇರಬಾರದು. ಎರಡೂ ಸಂಬಂಧದವರು ಈ ಹಾಡುಗಳಿಂದ ಖುಷಿಪಟ್ಟು ಮತ್ತಷ್ಟು ನೈಕಟ್ಯವನ್ನು ಹೊಂದಬೇಕೆನ್ನುವುದು ಇಂಥಹ ಹಾಡುಗಳ ಗುರಿಯಾಗಿರಬೇಕು.
ಇಲ್ಲಿ ನಾನು ಇಂದಿನ ಬದಲಾದ ಸನ್ನಿವೇಶಕ್ಕೆ ಹೊಂದುವ ಹಾಗೆ ತಕ್ಕ ಕೆಲವು ಜರೆವ ಹಾಡುಗಳನ್ನು ಬರೆದಿದ್ದೇನೆ. ಜರೆವ ಮಂಡನೆ ಮತ್ತು ಅದಕ್ಕೆ ಜರೆದ ಉತ್ತರ ಎರಡೂ ಇದರಲ್ಲಿವೆ. ಇದು ಒಂದು ಪ್ರಯತ್ನವಷ್ಟೆ. ಹಳೆಯ ಜಾಡಿನ ಹಾಡುಗಳ ಲಯಕ್ಕೆ ಹೊಂದಿಸಿ ಬರೆದಿದ್ದೇನೆ. ಆದ್ದರಿಂದ ಹಾಡು ಹೊಸತಾದರೂ ಹಾಡುವವರು ಹಳೆಯ ಜಾಡಿನಲ್ಲಿಯೇ ಹಾಡುತ್ತಾರೆ ಎಂದು ನನ್ನ ಅಭಿಪ್ರಾಯ. ಒಂದೆರಡು ಹಳೆಯ ಹಾಡುಗಳನ್ನು ಇಂದಿನ ಸನ್ನಿವೇಶಕ್ಕನುಸರಿಸಿ ತಿದ್ದಿ ಪ್ರಸ್ತುತಪಡಿಸಿದ್ದೇನೆ.
ಎಂ. ಗಣಪತಿ.
ಕಾನುಗೋಡು
ಅಂಚೆ : ಬ್ರಾ.ಮಂಚಾಲೆ.--- 577431
ಸಾಗರ ತಾಲ್ಲೂಕು - ಶಿವಮೊಗ್ಗ ಜಿಲ್ಲೆ.
ತಾರೀಖು : 20 - 5 - 2015
--------------------------------------------------
@ ಹವ್ಯಕರ ಮದುವೆ ಮನೆಯಲ್ಲಿ ಜರೆಯುವ ಹಾಡು
1.%%%% ಗಂಡಿನ ಕಡೆಯವರು :-
ಕಲ್ಯಾಣವೇ ಕಪ್ಪಿನ ಕಲ್ಯಾಣವೇ ||
ಮದುವೆ ಮಂಟಪದಲ್ಲಿ ಮದವಣತಿ ಕಪ್ಪು | ಮದವಣತಿ ಅಕ್ಕ ತಂಗಿಯರೇ ಕಪ್ಪು |
ಅವರ್ವಮ್ಶೆಲ್ಲಾ ಕಪ್ಪು ಮೂರು ಲೋಕಕ್ಕೂ ಸಾಕು | ಚಪ್ಪರ ತುಂಬಿತು ಹಗಲುಗಪ್ಪು || 1 ||
ಧಾರೆ ಮಂಟಪದಲ್ಲಿ ಮದವಣತಿ ಕಪ್ಪು | ಮದವಣತಿ ತಾಯಿ ತಂದೆಯರೇ ಕಪ್ಪು |
ಅವರ ಬಳಗೆಲ್ಲಾ ಕಪ್ಪು ಮೂರು ಲೋಕಕ್ಕೂ ಸಾಕು | ಚಪ್ಪರ ತುಂಬಿತು ಹಗಲುಗಪ್ಪು || 2 ||
&&&& ಹೆಣ್ಣಿನ ಕಡೆಯವರ ಉತ್ತರ :-
ಕರಿಯಳೆಂದು ನೀ ಜರೆಯಬೇಡ | ಬಿಳಿಗೆಳತಿಯ ಗರ್ವದಿಂದ ಕಪ್ಪಿಗಿಂತ ಬಿಳಿಬಣ್ಣ ಹೆಚ್ಚು ಹೇಳ್ವೆ ಯಾವ ಹಿರಿಮೆಯಿಂದ || ಪ ||
ಕಬ್ಬಿಣವು ಕಪ್ಪು ಯಂತ್ರಗಳು ಕಪ್ಪು | ಕಲ್ಲಿದ್ದಲು ಕಪ್ಪು ಕಪ್ಪು |
ವಾಹನದ ಗಾಳಿ ಅದರುಸಿರು ಕಪ್ಪು | ಡಾಂಬರಿನ ಬೀದಿ ಕಪ್ಪು || 1 ||
ಈ ಕಪ್ಪು ಪ್ರಿಯವು ಅಪ್ರಿಯವು ಏಕೆ | ಹೇಳೆನ್ನ ಮೈಯೆ ಕಪ್ಪು |
ಕಬ್ಬು ಕಪ್ಪು ಎಂದು ಗಬ್ಬದಿರೆ | ಕಬ್ಬಿನ ಹಾಲಿನ ಸವಿಯ ನೋಡು ಬಾರೆ || 2 ||
ಕಪ್ಪು ಕಪ್ಪು ನೇರಳೆ ಕಪ್ಪು | ತಿಂದು ನೋಡಿದರೆ ರುಚಿ ಒಪ್ಪು |
ನೀ ಮೃಗವು ನಿನ್ನ ನಾಭಿಯೊಳು ನಾನು ಕಸ್ತೂರಿಯಷ್ಟೆ ಬಾರೇ || 3 ||
ಓ ಶ್ವೇತ ಚೆನ್ನೆ ಕಲಿಸುವೆ ಬಾರೆ | ಶೃಂಗಾರ ಸಾರವನ್ನು |
ಕುಂಕುಮವನಿಡುವೆ ಬಿಡು ಕೆಂಪು ಕೇಡು | ಎಂಬೀ ವಿಚಾರವನ್ನು || 4 ||
ಕಪ್ಪು ಕಪ್ಪು ಆಕಳು ಕಪ್ಪು | ಕರೆದು ನೋಡಿದರೆ ಬಿಳಿ ಹಾಲು |
ಹಚ್ಚುವೆನು ಕಣ್ಗೆ ಕಾಡಿಗೆಯ ನೋಡು | ದರ್ಪಣದಿಂ ರೂಪವನ್ನು || 5 ||
-------------------------------------------------
2.%%%% ಗಂಡಿನ ಕಡೆಯವರು ಜರೆದದ್ದು :
ಹತ್ತು ಮಂದಿಯೊಳಗೆ ತಾಯವ್ವಗೆ | ಚೊಚ್ಚಲ ಮಗನಿವನು |
ಮತ್ತೆ ಇವರ್ ಮನೆ ಹೆಣ್ಣು ತರಲಾಗ ಎಂದರೆ | ಬ್ರಹ್ಮ ಸಂಕಲ್ಪವು ತಪ್ಪಲೇ ಇಲ್ಲ |
ಬ್ರಹ್ಮ ಬರೆದನಲ್ಲ | ಇದು ಈಗ ನಮ್ಮ ಮನಸು ಇಲ್ಲ || 1 ||
ನೂರು ಮಂದಿಯು ಬಂದರು ನಮ್ಮನೆಗೆ | ರಂಭೆಯ ಚೆಲುವಿನವಳು |
ತಮ್ಮ ಮಗಳೆಂದು ಕುಣಿಯುತ ಬಂದರು ಒಳಗೆ | ಎಲ್ಲಾ ಬಿಟ್ಟು ಇಲ್ಲಿಗೆ ಬಂದೇವಲ್ಲ |
ಬ್ರಹ್ಮ ಬರೆದನಲ್ಲ | ಇದು ಈಗ ನಮ್ಮ ಮನಸು ಇಲ್ಲ || 2 ||
&&&& ಹೆಣ್ಣಿನವರ ಉತ್ತರ :
ವರನ ವರುಷವ ನೋಡೆ | ಎರಡಾಳುದ್ದವ ನೋಡೆ |
ಅಳಿಯನಿಗಿಂತ ಮಾವ ಕಿರಿದಾದ | ಕಿರಿದಾದ ಮಾವಯ್ಯ |
ಎಲ್ಲಿ ದೊರಕಿದನೋ ಮಗಳೀಗೆ || 1 ||
ಮೂರು ಲೋಕಕು ಗಂಡು | ನಮ್ಮ ಚಿನ್ನದ ಕುವರಿ ಇಂದು |
ನಿಮ್ಮ ಮಗನು ಬಾಣಲಿ ಗುಂಡು | ಕಂಡರೆ ಬರಿಯ ಬೆಂಡು |
ಎಲ್ಲಿ ದೊರಕಿದನೋ ಮಗಳೀಗೆ || 2 ||
------------------------------------------------
3. %%%% ಗಂಡಿನ ಕಡೆಯವರು :-
ಸೀರೆಯನ್ನುಡು ಎಂದರೆ ನಿಮ್ಮ ಮಗಳು | ಸರಕ್ಕನೆ ಜಾರುವವಳಲ್ಲಾ |
ಸೊಂಟಕೆ ಚೂಡಿದಾರವ ಸಿಕ್ಕಿಸಿಕೊಂಡು | ತೈ ತೈ ಎನ್ನುವ ಫಾರಿನ್ ಸೊಸೆಯನು ತಂದೇವಲ್ಲಾ ||
ರಂಗೋಲಿ ಹಾಕೆಂದರೆ ನಿಮ್ಮ ಮಗಳು | ಸೀಮೆಸುಣ್ಣ ಗೀಚಿದಳಲ್ಲಾ ||
ರಂಗನು ಹಚ್ಚಿದ ತೊಂಡೆಹಣ್ಣಿನ ತುಟಿಯಾ | ಕಂಡು ವಿದ್ಯಾವಂತಳೆಂದು ನಾವು ತಂದೇವಲ್ಲಾ ||
ಅಡುಗೆ ಮಾಡೆಂದರೆ ನಿಮ್ಮ ಮಗಳು | ಯಾಕ್ವರ್ಡ್ [ Awkward ] ಎಂದು ಎರಗಿದಳಲ್ಲಾ |
ಹಾಲಿಗೆ ಒಗ್ಗರಣೆ ಕೊಟ್ಟು ಆಲ್ ರೈಟ್ ಎಂದ | ವಳನ್ನು ಬರಿದೇ ನಾವು ತಂದೇವಲ್ಲಾ ||
&&&& ಹೆಣ್ಣಿನವರ ಉತ್ತರ :-
ಕಟ ಕಟೆ ಅತ್ತೇರು ಕಿಟಿ ಕಿಟಿ ಮಾವ್ನೋರು ಸೂತ್ರದ ಗೊಂಬೆ ನನ ಗಂಡ |
ಪಂಜರದ ಧಗೆಯಲ್ಲಿ ಬಾಳುವುದೇ ಕಷ್ಟ ಮನೆಯಲ್ಲಿ ||
ಮಾವ್ನೋರು ಮಾತಾಡಿದರೆ ಸಿಂಹ ಘರ್ಜಿಸಿದಂತೆ ಅತ್ತೇರು ಘಟಸರ್ಪ |
ಘಟಸರ್ಪಕೆ ಬಾಗಿದ ನನ ಗಂಡನೆ ನಷ್ಟ ಮನೆಯಲ್ಲಿ ||
ಅತ್ತೆ ಮಾವರ ಜಗಳ ಮಾತಿಗೆ ಮಾತು ಬಹಳ ನನಗೆ ಪೀಕಲಾಟ |
ಪೀಯ ಪಿಟ್ಟ ಉಸಿರದ ಗಂಡ ಬೆಂಕಿಯ ಚೆಂಡು ಮನೆಯಲ್ಲಿ ||
----------------------------------------------------------------
4.%%%% ಗಂಡಿನ ಕಡೆಯವರು ಜರೆದದ್ದು :-
ಅಂಗಳ ತುಂಬೆಲ್ಲಾ ಜೋಡು ಒಲೆ ಹೂಡಿ ಹೇನಾರಿ ಕಟ್ಟಿಗೆ ಕೂಡಿ |
ಮಿತ್ರೆ ಅತ್ಯೆಮ್ಮ ಎಡಗೈಯಾ | ಎಡಗೈಯ ಕಾಸುತ್ತಾ |
ಸಾರಿಗೆ ಉಪ್ಪ ಹಾಕದಕೆ ಮರೆತಳು ||
ಸಾಂಬಾರು ಕಲಸಿದ ಅನ್ನವ ನಮ್ಮ ಭೀಗರು ಗಟ್ಟಿ ಜಗಿಯಲಾಗಿ |
ಹಲ್ಲಿಗೆ ಹಲ್ಲು ಸಿಕ್ಕಿತೋ ಹಲ್ಲ ನೋಡಲಾಗಿ |
ಅತ್ಯೆಮ್ಮ ಕಟ್ಟಿಸಿದ ಹಲ್ಲು ಸೆಟ್ಟು ||
ಪಾಯಸ ಬಡಿಸಿದ ಅತ್ಯೆಮ್ಮನ ಬಡಿವಾರ ಭುಗಿಲೆದ್ದು ಕುಣಿಯಿತು ಕಾಣಿ |
ದ್ರಾಕ್ಷಿಯೆಂದು ಅವಳ ಸರದ ಹವಳ ತೆವಳಾಡಿತು |
ಅಬ್ಬರದ ಪಾಯಸದ ಸವಿಯ ಬನ್ನಿ ||
&&&& ಹೆಣ್ಣಿನ ಕಡೆಯವರ ಉತ್ತರ :-
ಉಪ್ಪು ಹಾಕಲು ಮರೆತರೆ ಮೇಲುಪ್ಪ ಮರೆತೆರೇನೆ |
ಉಂಡು ದೂರುವ ದರ್ಭಾರಿನ ನೆಂಟರು ನೀವು |
ಯಾರು ಮಾಡದ ಅಡುಗೆಯ ನಾ ಮಾಡಿದೆನೇನೆ ? |
ಉಂಡು ದೂರುವುದು ಥರವಲ್ಲ ||
ಔತಣವನುಂಡು ದೂರುವ ದೂರುಗಳ್ಳೆರಾ ನೀವು |
ಬಾಳೆಯಲಿ ಅನ್ನದ ಅಗುಳ ಉಳಿಸಿದಿರೇನೆ ?
ಒಲ್ಲದ ಗಂಡನಿಗೆ ಮೊಸರಲಿ ಕಲ್ಲ ಕಂಡ |
ಭಂಡತನ ಇದು ಥರವಲ್ಲ ||
-------------------------------------------------------------
5. %%%% ಗಂಡಿನವರು ಜರೆದದ್ದು :-
ಮೈಲುದ್ದಕೂ ಶ್ಯಾಮಿಯಾನದ ಚಪ್ಪರ ಅಂಗಳವೆಲ್ಲಾ ರಂಗೋರಂಗು |
ಹಾಸಿದ ಜಮಖಾನದ ಮೇಲೆ ತಾಂಬೂಲದ ಹರಿವಾಣ ||
ಹತ್ತಾರು ಹರಿವಾಣಗಳೆಂದು ನಾವು ಹಿಗ್ಗಿದೆವಲ್ಲ ಹರಿವಾಣ ತೆಗೆದರೆ
ಜಮಖಾನ ಹರಕೋ ಹರಕು ನೋಡಿರಿ ಭೀಗರ ದವಲತ್ತು ||
ಭೀಗರು ಬಾಯಿ ತೆರೆದರೆ ಸಾಟಿ - ಮೇಟಿ ಇಲ್ಲದ ಕೋಟಿ ಕೋಟಿಯ ಮಾತು |
ಮಾತಿನ ಬಂಗಾರ ಮಗಳಿಗೆ, ನೋಡಿರಿ ಭೀಗರ ದವಲತ್ತು ||
&&&& ಹೆಣ್ಣಿನವರ ಉತ್ತರ :
ನಮ್ಮ ಬಳಗ ದೇಶದುದ್ದಕೂ ಬಹಳ ನಿಮ್ಮ ಕಿಷ್ಕಿಂಧೆ ಸಾಲದೆನ್ದಿರಲ್ಲೇ |
ಶಹರದ ರಂಗಿನಲ್ಲಿ ಮದುವೆ ಹಂದರ ಮೆರೆಯಲೆಂದಿರಲ್ಲೇ ||
ತಾಂಬೂಲ ಜಗಿವುದ ಬಿಟ್ಟು ಹರಿವಾಣವೆತ್ತಿ ಹುಳುಕ ಹರಡುವುದೇನೆ ? |
ನಿಮಗಿಟ್ಟ ಗೌರವ ಸರಿಸಿ ಸೊಸೆ ತವರ ಹೆಂಚಿನ ಲೆಕ್ಕವೇನೆ ? ||
ನಮ್ಮ ಮಗಳೆ ಬಂಗಾರ, ಅರಗಿಲ್ಲದ ಅರಗಿಣಿಗೆ ಮೇಲು ಬಂಗಾರವೇಕೆ ? |
ನಿಮ್ಮ ಮನೆಯ ಬೆಳಗುವ ಚಿನ್ನದ ಕನ್ಯಾ ಇದುವೆ ನಮ್ಮ ಗಮ್ಮತ್ತು ||
-----------------------------------------------------------------
6. %%%% ಗಂಡಿನವರು ಜರೆದದ್ದು :
ನಿಮ್ಮ ಮಗಳ ರೂಪವ ನೋಡಿರೆ ಮೂರು ಲೋಕದಲ್ಲೂ ಕಾಣದ ಚೆಲುವೆ |
ಮೋಸಹೋದನಲ್ಲೆ ನಮ್ಮ ಮಗ ಅವಳ ಪಕ್ಕ ಕುಳಿತವಳ ಮುಖ ನೋಡಿ |
ತರಗ ಎಳೆಯುವ ಜಾಲರಿ ಹಲ್ಲು, ಬಿಲ್ಲನು ನಾಚಿಸುವ ಗೂನು ಬೆನ್ನು |
ಕನ್ನಡದ 'ಡ' ತೋರಿಸುವ ಚಪ್ಪಟ್ಟೆ ಮೂಗು, ಕಿವಿಯವರೆಗೂ ಬಾಯಿ |
ವಿದ್ಯಾವಂತಳೆಂದು ಹೇಳಿದಿರಲ್ಲ ಎರಡು ಸೊನ್ನೆಯ ಮುಂದೆ ಒಂದಂ-
ಕೆಯ ಬರೆದು ನೂರು ಎಂದಳಲ್ಲ, ಜಾಣೆ ನಿಮ್ಮ ಮುದ್ದಿನ ಮಗಳು |
&&&& ಹೆಣ್ಣಿನವರ ಉತ್ತರ :
ತನ್ನ ರೂಪಕೆ ಅನುರೂಪದ ಬಾಲೆ ಎಂದನಲ್ಲೆ ನಿಮ್ಮ ಚೆಲುವ ಚೆನ್ನಿಗರಾಯ |
ನಮ್ಮ ಮಗಳ ಚೆಲುವಿಗಿಂತ ನಿಮ್ಮ ಮಗನ ಚೆಲುವೇ ಮೇಲೆಂದು ಸಾರಿದರು ಎಲ್ಲಾ |
ನಿಮ್ಮ ಕಂದನ ಸೊಟ್ಟ ಮೆರುಗನರಿಯದೆ ಬರಿದೆ ನಮ್ಮ ಕುವರಿಯ ಓರೆಯ ಕಂಡಿರೇನೆ |
ವರನಿಗೆ ತಕ್ಕ ವಾರಿಗೆ ನಮ್ಮ ಚೆನ್ನೆ, ಕಬ್ಬು ಡೊಂಕಾದರೆ ಸವಿ ಡೊಂಕಲ್ಲ ಕಾಣೆ |
ಬಳೆಯನಿಟ್ಟಮೇಲೆ ಕೈಕೊಡವಿದರೆ ವರಿಸಿದ ಬಂಧನ ದೂರ ಸರಿದೀತೇನೆ |
ತೊಟ್ಟ ಒಡವೆಯ ಒರೆಯನೆಣಿಸದೆ ಕೊಟ್ಟ ಸುಖವನರಸಿ ಅರಸಾಗು ಎನ್ನೆ ಮಗನಿಗೆ
----------------------------------------------------------------------------
7. %%%% ಗಂಡಿನವರು ಜರೆದದ್ದು :
ನೋಡಿರಣ್ಣ ಹೇಗಿದೆ ಭೀಗರಣ್ಣನ ಜೋಡಿ ಭೀಗಿತಿಯ ಕೂಡಿ ಕೂಡಿ |
ಮದುವೆ ಚಪ್ಪರದಲ್ಲೆಲ್ಲಾ ಹಳೆಜೋಡಿಯ ದರ್ಭಾರ ಭಲೇ ಅಬ್ಬರ ||
ಭೀಗರಣ್ಣನ ಹಾರಿದ ಹುಬ್ಬಿಗೆ ಭೀಗಿತಿ ಕುಣಿಸಿದಳು ತನ್ನ ಹುಟ್ಟುಮೀಸೆ |
ಭೀಗಿತಿಯ ಕಣ್ಣ ಸನ್ನೆಗೆ ತಣ್ಣಗಾಯಿತು ಭೀಗರಣ್ಣನ ಬಾಯಿ ಕಹಳೆ |
ಭೀಗಿತಿಯ ಕೈ ಕೈ ತಾಳ ಭೀಗರಣ್ಣನ ತೈ ತೈ ಕುಣಿತ, ಹೆಂಡತಿ ಕೈಯ ಗಂಡ |
ಗಮ್ಮತ್ತಿನ ನೆಂಟಸ್ತಿಕೆಯ ಮಾಡಿದೆವಲ್ಲಾ ನಾವು, ನಮಗೆ ಬೇಕು ದಂಡ ||
&&&& ಹೆಣ್ಣಿನವರ ಉತ್ತರ :
ಮಕ್ಕಳ ಮದುವೆಯಾದರೆ ನಾವು ಹಳೆ ಮುದುಕರೇನೆ |
ಮುದುಡಿ ಮೂಲೆ ಸೇರಬೇಕೇನೆ ||
ಹಣ್ಣಾಗುವ ಎಲೆಯಲ್ಲ ನಾವು ನಿತ್ಯಹರಿಧ್ವರ್ಣ |
ಎಳೆಯ ಚಿಗುರಿಗೆ ತಂಪಿನ ಆಸರೆ |
ಕೂಡಿ ನಲಿಯುವ ಮಾದರಿ ಜೋಡಿ ನಂಜಲ್ಲ ನೋಡಿ |
ಮದುವೆ ಮಕ್ಕಳಿಗೆ ನಮ್ಮದೇ ಮೋಡಿ
----------------------------------------------------------------------------------
8. %%%% ಗಂಡಿನವರು ಜರೆದದ್ದು :
ಗಂಡಿನವರು ನಾವು ಕೇಳಲೆಂದು ಸಿ.ಡಿ. ಹಾಕಿ ಮೈಕ್ ಸೆಟ್ ಸಾರಿದಿರಲ್ಲಾ |
ಹೆಣ್ಣಿನ ಪಾಳೆಯದಲಿ ಹಾಡಿನ ಕಲೆಯ ಹೆಂಗಸರಿಲ್ಲ ||
ಹಾಡು ಬರೋದಿಲ್ಲ ಸೇಡಿ ಬರೋದಿಲ್ಲ ನಾವೈದೇವಕ್ಕ ದುರ್ದುಂಡೇರು |
ಎಂದು ಬೀಗುವಿರಲ್ಲ ಫ್ಯಾಶನ್ನಿನ ಲೇಡಿಯರೇ ಎಲ್ಲ ||
ಎದುರುಗೊಂಬುವ ಹಾಡಿನ ಬದಲಿಗೆ 'ವಿರಹಾ ನೂರು ನೂರು ತರಹ' ಎಂಬುದೇನೆ |
ನಮ್ಮ ವರನಿಗೆ ವರಹವ ನೀಡುವ ಸೊಲ್ಲ ಉಸುರಿದವರಿಲ್ಲ ||
&&&& ಹೆಣ್ಣಿನವರ ಉತ್ತರ :
ಗಂಡಿನ ದಿಬ್ಬಣದಲಿ ಶಾಸ್ತ್ರದ ಹಾಡು ಸವಿಯುವ ರಸಿಕರೇ ಸೊನ್ನೆ |
ರಾಗವೆಂದರೆ ಸೊಳ್ಳೆರಾಗವೆಂದು ಸಸಾರಗೈಯುವ ಶೂನ್ಯರೆ ಎಲ್ಲ ||
ಸಭೆಯಲಿ ಕೂರುವ ಗಂಡಸರೆಲ್ಲಾ ಉಪ್ಪರಿಗೆ ಹತ್ತಿಹರು ಇಸ್ಪೀಟಿಗೆ |
ಯಕ್ಕ,ರಾಜ,ರಾಣಿಯ ಎದುರು ಎದುರುಗೊಂಬುವ ಹಾಡು ಯಡವಟ್ಟು ||
ಟಾಕುಟೀಕಿನ ಹುಡುಗಿಯರು ವಾಟ್ಸ್ ಅಪ್ ಅಲೆಯಲಿ ತೇಲಾಡುವರಲ್ಲ |
ರಂಗು ರಂಗಿನ ಚಿತ್ರದ ಮುಂದೆ ಸಂಪ್ರದಾಯವೇ ವಿಚಿತ್ರ ಎಂದರಲ್ಲ ||
ಹರೆಯದ ಹುಡುಗರ ಕುಡಿನೋಟ ನಮ್ಮ ಬೆಡಗಿಯರಯತ್ತ ಕುದುರೆಯೋಟ |
ಕೋಟಲೆ ಅವರಿಗೆ ಹರಿ ಹಾಡಿನ ಪಾಠ, ಸಾಕು ನಿಮ್ಮ ದೊಂಬರಾಟ ||
---------------------------------------------------------------------------------
9. %%%% ಗಂಡಿನವರು ಜರೆದದ್ದು :
ಕೇಳು ಬಾರೆ ಅತ್ತಿಗೆ ಆಲಿಸು ಬಾರೋ ಅಣ್ಣಯ್ಯ ನೆಂಟರ ಮನೆ ಸುದ್ದಿ |
ಹುಣ್ಣಿಮೆ ಬೆಳಕಿನ ತಂಪನು ಮರೆಸುವ ಹೊಸ ಬೀಗರ ನಯ ತಳುಕಿನ ಬುದ್ಧಿ ||
ಬೀಗರೇ ಬಂಗಾರ ಬೀಗಿತಿಯೆ ಬಂಗಾರ ಒಡವೆಯ ಕವಚವೆ ಮೈತುಂಬಾ |
ಒಳಗೆಲ್ಲಾ ಅಳುಕು ಮೇಲೆ ಬಂಗಾರದ ತಳುಕು ಮುಖ ಹೊಳಪೋ ಹೊಳಪು ||
ಮಗಳ ಬಳುವಳಿ ಕೇಳಿ ಕಬ್ಬಿಣದ ಪಾತ್ರೆ - ಪಗಡೆ ಲಾರೀ ತುಂಬಾ |
ಮಗಳ ಕೊರಳಿಗೆ ಕಬ್ಬಿಣದ ಸರಿಗೆಯಲ್ಲಿ ದೃಷ್ಟಿ - ತಾಯಿತದ ಮೆಹರ್ಬಾನು ||
ತನ್ನ ಬಾಲೆಯ ಬಣ್ಣವೇ ಬಂಗಾರ ಹಲ್ಲುಗಳೇ ಬೆಳ್ಳಿಯ ಸೆಟ್ಟು |
ಎಂದು ತುಪ್ಪವ ಸುರಿಸಿ ಬೀಗರು ಕುಣಿಸಿದರು ಮುತ್ತ ಸುರವಿದ ಮೀಸೆಯ ||
&&&& ಹೆಣ್ಣಿನವರ ಉತ್ತರ :
ಕ್ವಿಂಟಾಲ್ ಮೂಟೆಯ ಬಂಗಾರದ ನೆಂಟರೆಂದು ಮರುಳಾದಿರಿ ನಮಗೆ ಮಗಳಿಗಲ್ಲ |
ಬಾಲೆಯ ನೋಡದೆ ವರನ ಚಪ್ಪರಕೆ ತಂದಿರಲ್ಲ ಒಡವೆಯೇ ನಿಮಗೆ ವಧುವಾಯ್ತೇ ||
ನೆಂಟರೆ ಕೇಳಿ ನಮ್ಮ ಹೊಳಪಿನ ಬಂಗಾರ ಸಂತೆ ಪೇಟೆಯ ನಕಲಿ ಬಂಗಾರ |
ಕಳ್ಳರ ಭಯದಿಂದೆ ಕ್ವಿಂಟಾಲ್ ಒಡವೆಯ ಬ್ಯಾಂಕ್ ಲಾಕರಿಗಿಟ್ಟೆವು ಗುಟ್ಟೇನು ||
ಮಗಳ ತೂಕದ ಚಿನ್ನದೊಡವೆಯ ಭಂಡಾರ ಘಟ್ಟಿ ಲಾಕರಿನಲ್ಲಿದೆ ಆಲೋಕ |
ಸೊಸೆಯ ಕೊರಳ ಕೊಳವೆಯಲ್ಲಿಟ್ಟೆವು ಲಾಕರ್ ಕೀಯನು ತಾಯಿತವಲ್ಲ, ಜೋಪಾನ||
------------------------------------------------------------------------
10. %%%% ಗಂಡಿನವರು ಜರೆದದ್ದು :
ಚೂರು ಹೋಳಿಗೆ ಸೂಜಿಲಿ ತುಪ್ಪವ ಬಡಿಸಿದಳೇ ಬೀಗಿತ್ತಿ | ಹಾರ್ರ್ಯಾಡಿದಳೇ ಬೀಗಿತ್ತಿ || ಪ ||
ಬೀಗಿತ್ತಿ ಮಾಡಿದ ಸಾಸಿಮೆಯು ಕಯ್ ಕಯ್ ಕಯ್ ಕಯ್ ಆಗಿತ್ತು |
ಬೀಗಿತ್ತಿ ಮಾಡಿದ ಸಾಸಿಮೆ ಸುದ್ಧಿ ಸಾಗರದ ತನಕ ಅದೇ ಸುದ್ಧಿ | ಶಿರಸಿ ತನಕ ಅದೇ ಸುದ್ಧಿ || ೧ ||
ಬೀಗಿತ್ತಿ ಮಾಡಿದ ಹಪ್ಪಳವು | ಖರ್ಚಾಗದೆಯೇ ಉಳಿದಿತ್ತು | ಪುಟ್ಟಿ ತುಂಬಾ ತುಂಬಿತ್ತು | ಮೊದಲೇ ಕಪ್ ಕಪ್ ಆಗಿತ್ತು | ಬೀಗಿತ್ತಿ ಮಾಡಿದ ಹಪ್ಪಳದ ಸುದ್ಧಿ ಎಲ್ಲೀ ನೋಡಿದರಲ್ ಸುದ್ಧಿ || ೨ ||
ಬೀಗಿತ್ತಿ ಮಾಡಿದ ಉಪ್ಪಿನಕಾಯಿ ಹಳಸೀ ಅಲ್ಲೇ ಮುಗ್ಗಿತ್ತು |
ಪಾತ್ರೆ ತುಂಬಾ ಒದಗಿತ್ತು | ಇಂಥಾ ಚತುರೆ ಬೀಗಿತ್ತಿ ಸುದ್ಧಿ ಯಾವಾಗ್ಲೂ ಹೇಳ್ತಾ ಇರಬೇಕು | ಇವರತ್ರ ಕಲಿಬೇಕು || ೩ ||
A ). &&&& ಹೆಣ್ಣಿನವರ ಉತ್ತರ ;
ಬೋಡು ಬಾಯಿಗೆ ಅಣೆದೀತೆಂದು ಅಣಿಮಾಡಿದ ಹೋಳಿಗೆ ಚೂರಾ |
ಚೂರು ಹೋಳಿಗೆಯೆಂದು ಅಣುಕಿಸಿ ಚಪ್ಪರಿಸುವುದ ಬಿಟ್ಟಿರೇನೆ ||
ಸಾಸಿಮೆ ಹಪ್ಪಳ ಉಪ್ಪಿನಕಾಯಿ ಮೀರಿ ತಿಂದರೆ ಆಗುವುದೇನೆ |
ಒಗಡಿಕೆಯ (ವಗಚಟ್ಟಿದ) ನಾಲಿಗೆ ಹಾಲುಂಡರೂ ರುಚಿ ಕಾಣದು ಸುಳ್ಳೇನೆ ||
ಊಟಬಲ್ಲವರಿಗೆ ರುಚಿಯೆಲ್ಲಾ ಉಂಡು ಜರೆವರಿಗೆ ಹುಳಿಯೆಲ್ಲಾ |
ಮುಗ್ಗಿದ ನಾಲಿಗೆಯಲಿ ಸವಿನೋಡಿದ ನಿಮ್ಮ ಹಿಗ್ಗು ಬಲು ಅಗ್ಗ ||
B ). &&&& ಹೆಣ್ಣಿನವರ ಉತ್ತರ :
ನೆಂಟರ ಮನೆ ಸುದ್ಧಿ ಬಂದ್ಕೇಳು ಅಜ್ಜಮ್ಮ |
ಹತ್ತು ಬಾಗಿಲಿಗೂ ಕದ ಒಂದು | ಕದವೊಂದು ಕೀಲೆರಡು |
ನೆಂಟರ ಮನೆ ಸುದ್ಧಿ ಶುಭನವ || ಪ ||
ದಬ್ಬಣಧಾರೆ ತುಪ್ಪ ಇಬ್ಬರಿಂದ್ಹೋಳಿಗೆ | ಬಗ್ಗಿ ಬಗ್ಗಿ ತುಪ್ಪ ಎರೆವಳು |
ಎರೆವಾಗ ಯಜಮಾನನ ಹುಬ್ಬು ಹಾರಿದಾವೆ ಗಗನಾಕೆ || ೧ ||
ಆಚೆ ಪಂಕ್ತಿಗೆ ದೊನ್ನೆ ಈಚೆ ಪಂಕ್ತಿಗೆ ದೊನ್ನೆ | ನಮ್ಮ ಪಂಕ್ತಿಗೆ ಕೈಯ ಸನ್ನೆ |
ಕೈಸನ್ನೆ ಬೀಗರ ಡಮಕ ಕೇಳಿದರೆ ಶಿವ ಬಲ್ಲ || ೨ ||
ಹೋಳಿಗೆ ಪುಟ್ಟಿಗೆ ಯಜಮಾನನ ಕಾವಲು | ಮನೆ ಅಳಿಯ ಎಂಬ ತಳವಾರ |
ತಳವಾರ, ಬೀಗರ ಸುದ್ಧಿ ಇನ್ನೇನ ಹೊಗಳಾಲಿ || ೩ ||
ಒಂದಕ್ಕಿ ಬೆಂದರೆ ಒಂದಕ್ಕಿ ಬೇಯಲಿಲ್ಲ | ನಂದಿಯ ಸವುದಿ ಉರಿಲಿಲ್ಲ |
ಉರಿಲಿಲ್ಲ ತಂಗ್ಯವ್ವ ಹೊಟಗಚ್ಚು ನಮಗೆ ಹಿರಿದಾದ || ೪ ||
ಆನೆ ಆನೆ ತೂಕ ಆನೆ ಸರಪಳಿ ತೂಕ | ಬೀಗ ಬೀಗಿತ್ತಿ ಸಮತೂಕ |
ಸಮತೂಕ ಇಂಥಾ ನೆಂಟು ಸಿಕ್ಕಿತು ಶಿವನ ಕೃಪೆಯಿಂದ || ೫ ||
ವಿ. ಸೂ : ಬೀಗ, ಬೀಗಿತ್ತಿ ಸಪುರ ಇದ್ದರೆ " ಮೇಕೆ ಮೇಕೆಯ ತೂಕ ಮೇಕೆ ಹಂಗಡ ತೂಕ " ಎಂದು ಹೇಳಿಕೊಳ್ಳಬೇಕು.
ಪ್ರಸ್ತುತಿ : ಎಂ. ಗಣಪತಿ ಕಾನುಗೋಡು.
---------------------------------------------------------
{ ಭಾಗ --- 2 }
%%%% ಗಂಡಿನವರು ಜರೆದಿದ್ದು :
ಪಟ್ಟೆ ಹಚ್ಚಡಗಳಿಲ್ಲ ಮಾವಯ್ಯಗೆ ಮುತ್ತಿನುಂಗುರವೇ ಇಲ್ಲ ಮುತ್ತಿನುಂಗುರವೇ ಇಲ್ಲ | ಬೆಳ್ಳಿಯ ತಾಳಿ ತಂಬಿಗೆ ಕೊಡಲಿಲ್ಲ ಪುತ್ರಿ ಮುಂದಕೆ ಮಾಡಿ ಧಾರೆ ಎರೆದಿರಲ್ಲಾ | ಬೆರಗಾದಿರೇನೆ ನೀವು ಬಂಗಾರಕ್ಕೆ ಮರುಳಾದಿರೇನೆ ನೀವು ಬಂಗಾರಕ್ಕೆ ಮರುಳಾದಿರೇನೆ ನೀವು ||
ಸಾಲಿ ಹಚ್ಚಡಗಳಿಲ್ಲ ಮಾವಯ್ಯಗೆ ನೀಲದುಂಗುರವೇ ಇಲ್ಲ ಮಾವಯ್ಯಗೆ ನೀಲದುಂಗುರವೇ ಇಲ್ಲ | ಚೆಲುವಾದ ತಾಳಿ ತಂಬಿಗೆ ಕೊಡಲಿಲ್ಲ ಬಾಲೆ ಮುಂದಕೆ ಮಾಡಿ ಧಾರೆ ಎರೆದಿರಲ್ಲಾ | ಬೆರಗಾದಿರೇನೆ ನೀವು ಬಂಗಾರಕ್ಕೆ ಮರುಳಾದಿರೇನೆ ನೀವು ಬಂಗಾರಕ್ಕೆ ಮರುಳಾದಿರೇನೆ ನೀವು ||
ಬಣ್ಣದಚ್ಚಡವಿಲ್ಲ ಮಾವಯ್ಯಗೆ ಹರಳಿನುಂಗುರವೇ ಇಲ್ಲ ಹರಳಿನುಂಗುರವೇ ಇಲ್ಲ | ಚೆಲುವಾದ ತಾಳಿ ತಂಬಿಗೆ ಕೊಡಲಿಲ್ಲ ಬಾಲೆ ಮುಂದಕೆ ಮಾಡಿ ಧಾರೆ ಎರೆದಿರಲ್ಲಾ | ಬೆರೆಗಾದಿರೇನೆ ನೀವು ಬಂಗಾರಕ್ಕೆ ಮರುಳಾದಿರೇನೆ ನೀವು ಬಂಗಾರಕ್ಕೆ ಮರುಳಾದಿರೇನೆ ನೀವು ||
&&&& ಹೆಣ್ಣಿನವರ ಉತ್ತರ :
ಪಟ್ಟೆಹಚ್ಚಡವೇತಕೆ ಮಾವಯ್ಯಗೆ ಮುತ್ತಿನುಂಗುರವೇತಕೆ ಮಾವಯ್ಯಗೆ ಮುತ್ತಿನುಂಗುರವೇತಕೆ | ಬೆಳ್ಳಿಯ ತಾಳಿ ತಂಬಿಗೆಯೇತಕೆ ಅದಕ್ಕಿಂತ ಮಿಗಿಲಾದ ಮಗಳ ಕೊಟ್ಟಮೇಲೆ | ಬೆರಗಾಗ್ವರಲ್ಲ ನಾವು ಬಂಗಾರಕೆ ಮರುಳಾಗ್ವರಲ್ಲ ನಾವು ಬಂಗಾರಕೆ ಮರುಳಾಗ್ವರಲ್ಲ ನಾವು ||
ಸಾಲಿ ಹಚ್ಚಡವೇತಕೆ ಅಣ್ಣಯ್ಯಗೆ ನೀಲದುಂಗುರವೇತಕೆ ಅಣ್ಣಯ್ಯಗೆ ನೀಲದುಂಗುರವೇತಕೆ | ಚೆಂದದ ತಾಳಿ ತಂಬಿಗೆಯೇತಕೆ ಅದಕ್ಕಿಂತ ಮಿಗಿಲಾದ ಹೆಣ್ಣು ಕೊಟ್ಟಮೇಲೆ | ಬೆರಗಾಗ್ವರಲ್ಲ ನಾವು ಬಂಗಾರಕೆ ಮರುಳಾಗ್ವರಲ್ಲ ನಾವು ಬಂಗಾರಕೆ ಮರುಳಾಗ್ವರಲ್ಲ ನಾವು ||
ಬಣ್ಣದಚ್ಚಡವೇತಕೆ ಅಣ್ಣಯ್ಯಗೆ ಚಿನ್ನದುಂಗುರವೇತಕೆ ಅಣ್ಣಯ್ಯಗೆ ಚಿನ್ನದುಂಗುರವೇತಕೆ | ಚೆಲುವಾದ ತಾಳಿ ತಂಬಿಗೆಯೇತಕೆ ಅದಕ್ಕಿಂತ ಮಿಗಿಲಾದ ಅನುಜೆ ಕೊಟ್ಟಮೇಲೆ | ಬೆರಗಾಗ್ವರಲ್ಲ ನಾವು ಬಂಗಾರಕೆ ಮರುಳಾಗ್ವರಲ್ಲ ನಾವು ಬಂಗಾರಕೆ ಮರುಳಾಗ್ವರಲ್ಲ ನಾವು ||
%%%% ಗಂಡಿನವರು ಜರೆದದ್ದು :
ಪಟ್ಟೆಯ ಸೆರಗೀಗೆ ಪುತ್ರಿಯ ಜಾತಕ ಕಟ್ಟಿ ಹತ್ತೆಂಟೂರಾ ತಿರುಗಾಡಿ | ತಿರುಗಾಡಿ ಬಂದನು ಮಗಳಿಗೊಂದ್ವರವೂ ಸಿಗಲಿಲ್ಲ ||
ಸಾಲಿಯ ಸೆರಗೀಗೆ ಮಗಳ ಜಾತಕ ಕಟ್ಟಿ ಆರೇಳೂರಾ ತಿರುಗಾಡಿ | ತಿರುಗಾಡಿ ಬಂದನು ಮಗಳಿಗೊಂದ್ವರವೂ ಸಿಗಲಿಲ್ಲ ||
ಬಣ್ಣದ ಸೆರಗೀಗೆ ಮಗಳ ಜಾತಕ ಕಟ್ಟಿ ಊರೂರನೆಲ್ಲಾ ತಿರುಗಾಡಿ | ತಿರುಗಾಡಿ ಬಂದರೂ ಬಾಲೆಗೊಂದ್ವರವೂ ಸಿಗಲಿಲ್ಲಾ ||
&&&& ಹೆಣ್ಣಿನವರ ಉತ್ತರ :
ಹೊಸ್ತಿಲವನಿಳಿದರೆ ಹತ್ತೆಂಟು ವರವುಂಟು ಈಗ ಈ ಸಂಬಂಧ ಬಿಡಬಾರ | ಬಿಡಬಾರದೆಂದ್ ಹೇಳಿ ಹೇಳ್ಕಳ್ಸಿ ಧಾರೆ ಎರೆದೇವು ||
ಬಾಗಿಲನ್ನಿಳಿದರೆ ಬಹಳಷ್ಟು ವರವುಂಟು ಆದರೂ ಈ ಸಂಬಂಧ ಬಿಡಬಾರ | ಬಿಡಬಾರದೆಂದ್ ಹೇಳಿ ಹೇಳ್ಕಳ್ಸಿ ಧಾರೆ ಎರೆದೇವು ||
ಅಂಗಳವ ದಾಟಿದರೆ ಬೇಕಷ್ಟು ವರವಿತ್ತು ಇಂಥಾ ಸಂಬಂಧ ಬಿಡಬಾರ | ಬಿಡಬಾರದೆಂದ್ ಹೇಳಿ ಹೇಳ್ಕಳ್ಸಿ ಧಾರೆ ಎರೆದೇವು ||
%%%% ಗಂಡಿನವರು ಜರೆದಿದ್ದು :
ಪುತ್ರಿಗೆ ಮೂವತ್ತು ವರುಷ ನಾಳಿನ ಆಷಾಡಕ್ಕಾಯಿತಲ್ಲಾ | ಇನ್ನೂ ತನ್ನ ಮಗಳಿಗೆ ವರವಿಲ್ಲವೆಂದು ಯೋಚಿಸಿ ಯೋಚಿಸಿ ಮಾವಯ್ಯ ಬಳಲಿದ್ದ | ಚಿಂತೆ ಪರಿಹಾರವಾಯಿತೋ ಮಾವಯ್ಯ ನಿಮಗೆ ಸಂತೋಷ ಸ್ಥಿರವಾಯಿತೋ ಅತ್ತೆಮ್ಮ ನಿಮಗೆ ಸಂತೋಷ ಸ್ಥಿರವಾಯಿತೋ | ಅಂಥಿಂಥ ವರವಲ್ಲ ಅರಗಿಳಿಯಂಥ ಅಳಿಯ ಮಂಟಪದೊಳಗೆ ಮಗಳ ಕೈ ಹಿಡಿದನು ಚಿಂತೆ ಪರಿಹಾರವಾಯಿತೋ ಮಾವಯ್ಯ ನಿಮಗೆ ಸಂತೋಷ ಘನವಾಯಿತೋ ಅತ್ತೆಮ್ಮ ನಿಮಗೆ ಸಂತೋಷ ಸ್ಥಿರವಾಯಿತೋ ||
ಮಗಳಿಗೆ ಮೂವತ್ತು ಮೀರಿತು ಮುಂದಿನ ಜೇಷ್ಟಮಾಸಕೆ ಬಿಡದೆ | ಇನ್ನು ತನ್ನ ಮಗಳಿಗೆ ವರವಿಲ್ಲವೆಂದು ಚಿಂತಿಸಿ ಚಿಂತಿಸಿ ಮಾವಯ್ಯ ಬಳಲಿದ್ದ | ಚಿಂತೆ ಪರಿಹಾರವಾಯಿತೋ ಮಾವಯ್ಯ ನಿಮಗೆ ಸಂತೋಷ ಘನವಾಯಿತೋ ಅತ್ತೆಮ್ಮ ನಿಮಗೆ ಸಂತೋಷ ಸಂತೋಷ ಸ್ಥಿರವಾಯಿತೋ | ಅಂತಿಂಥ ವರವಲ್ಲ ಅರಗಿಳಿಯಂಥ ಅಳಿಯ ಮಂಟಪದೊಳಗೆ ಮಗಳ ಕೈ ಹಿಡಿದನು | ಸಂತೋಷ ಘನವಾಯಿತೋ ಮಾವಯ್ಯ ನಿಮಗೆ ಚಿಂತೆ ಪರಿಹಾರವಾಯಿತೋ ಅತ್ತೆಮ್ಮ ನಿಮಗೆ ಸಂತೋಷ ಸ್ಥಿರವಾಯಿತೋ ||
ಮಗಳಿಗೆ ಮೂವತ್ತು ಹಾರಿತು ಮುಂದಿನ ಶ್ರಾವಣಮಾಸಕೆ ಬಿಡದೆ | ಇನ್ನು ತನ್ನ ಮಗಳಿಗೆ ಪತಿ ಇಲ್ಲವೆಂದು ಚಿಂತಿಸಿ ಚಿಂತಿಸಿ ಮಾವಯ್ಯ ಬಳಲಿದ್ದ | ಚಿಂತೆ ಪರಿಹಾರವಾಯಿತೋ ಮಾವಯ್ಯ ನಿಮಗೆ ಸಂತೋಷ ಘನವಾಯಿತೋ ಅತ್ತೆಮ್ಮ ನಿಮಗೆ ಸಂತೋಷ ಸ್ಥಿರವಾಯಿತೋ | ಅಂತಿಂಥ ವರವಲ್ಲ ಅರಗಿಳಿಯಂಥ ಅಳಿಯ ಮಂಟಪದೊಳಗೆ ಮಗಳ ಕೈಹಿಡಿದನು | ಸಂತೋಷ ಸ್ಥಿರವಾಯಿತೋ ಮಾವಯ್ಯ ನಿಮಗೆ ಚಿಂತೆ ಪರಿಹಾರವಾಯಿತೋ ಅತ್ತೆಮ್ಮ ನಿಮಗೆ ವ್ಯಥೆಯು ಪರಿಹಾರವಾಯಿತೋ ||
&&&& ಹೆಣ್ಣಿನವರ ಉತ್ತರ :
ಮುತ್ತಿನ ಚೀಟಿ ಮೇಲೆ ಸೂಜಿ ದಾರದ ಮೇಲೆ ಓಲೆಮೇಲ್ ಓಲೆ ಕಳುಹಿದ |
ಕಳುಹಿದ ಕಾರಣದಿಂದ ಕೊಟ್ಟೆವು ನಿಮ್ಮ ಮಗನಿಗೆ ||
ಚೆಂದದ ಹಾಳೆಮೇಲೆ ಸೂಜಿದಾರದ ಮೇಲೆ ಪತ್ರದ ಮೇಲ್ ಪತ್ರ ಕಳುಹಿದ |
ಕಳುಹಿದ ಕಾರಣದಿಂದ ಕೊಟೆವು ನಿಮ್ಮ ಮಗನಿಗೆ ||
ಎಷ್ಟು ಹೇಳಿದರಿವನ ಚೆಂದ ಹೆಚ್ಚಾಯಿತು ಎಂದು ಮೆಚ್ಚಿಗೆಯಿಂದ ಕೊಡಲಿಲ್ಲ |
ಕೊಡಲಿಲ್ಲ ಮುದ್ದಿನ ಮಗಳ ಬೇಕೆಂದೇ ಧಾರೆ ಎರೆದೇವು ||
%%%% ಗಂಡಿನವರು ಬೀಗಿತಿಯನ್ನು ಜರೆದದ್ದು :
ನೆಂಟರು ಬರುತಾರೆಂದು ಮಂಟಪ ಗುಡಿಸಲ್ಹೋಗಿ ಸೊಂಟುಳುಕಿ ಅಲ್ಲೇ ಕುಳಿತಾಳು | ಕುಳಿತ ಬೀಗಿತ್ತಿಗೆ ದಂಟ್ಕೋಲ ಕೊಟ್ಟು ಕರೆತನ್ನಿ ||
ಬೀಗರು ಬರಿತಾರೆಂದು ಬೀದಿ ಗುಡಿಸಲ್ಹೋಗಿ ಕಾಲುಳುಕಿ ಅಲ್ಲೇ ಕುಳಿತಾಳು | ಕುಳಿತ ಬೀಗಿತ್ತಿಗೆ ಊರ್ಗೋಲ ಕೊಟ್ಟು ಕರೆತನ್ನಿ ||
ಅತಿಥಿಗಳು ಬರುತಾರೆಂದು ಅಂಗಳ ಗುಡಿಸಲ್ಹೋಗಿ ಬೆನ್ನುಳುಕಿ ಅಲ್ಲೇ ಕುಳಿತಾಳು |
ಕುಳಿತ ಬೀಗಿತ್ತಿಯ ಹಿಡಿದೆತ್ತಿ ಒಳಗೆ ಕರೆತನ್ನಿ ||
%%%% ಗಂಡಿನವರು ಬೀಗಿತಿಯನ್ನು ಜರೆದಿದ್ದು :
ಮಿತ್ರೆ ತಾನುಟ್ಟಿದ್ದು ಎಪ್ಪತ್ತು ಗಂಟಿನ ಸೀರೆ | ನಸುನಾಚಿ ಹೊರಗೆ ಬರಲೊಲ್ಲ |
ಬರಲೊಲ್ಲ ನಾವ್ ತಂದ ಪಟ್ಟೇ ಕೊಡುತೇವೆ ಬರಹೇಳಿ ||
ನಾರಿ ಬೀಗಿತಿ ತಾನು ಅರವತ್ ಗಂಟಿನ ಸೀರೆ | ಉಟ್ಟಾಗ ಹೊರಗೆ ಬರಲೊಲ್ಲ |
ಬರಲೊಲ್ಲ ನಾವ್ ತಂದ ಸಾಲಿ ಕೊಡುತೇವೆ ಬರಹೇಳು ||
ರಂಭೆ ಬೀಗಿತಿ ತಾನು ಹರಕು ಸೀರೆಯನುಟ್ಟು | ಬೀಗರಿಗೆ ನಾಚಿ ಬರಲೊಲ್ಲ |
ಬರಲೊಲ್ಲ ನಾವ್ ತಂದ ಬಣ್ಣಾ ಕೊಡುತೇವೆ ಬರಹೇಳು ||
ವಿ.ಸೂ : ಪಟ್ಟೇ, ಸಾಲಿ, ಬಣ್ಣಾ ಇವುಗಳು ಹಿಂದಿನ ಕಾಲದಲ್ಲಿ ಬಹಳ ಒಳ್ಳೆಯ ಜಾತಿಯ ಸೀರೆಗಳ ಹೆಸರು.
&&&& ಹೆಣ್ಣಿನವರ ಉತ್ತರ :
ಉಪ್ಪರಿಗೆ ಒಳವಿಕ್ಕೇ [ ಒಳದಿಕ್ಕೇ ] ಹತ್ತು ಸುತ್ತಿನ ಕೋಟೆ | ಮಿತ್ರೆ ಬೀಗಿತ್ತಿಯ ಒಳಕೂಡಿ |
ಒಳಕೂಡಿ ಬೀಗವನ್ಹಾಕಿ ಪಟ್ಟೆ ಕೊಟ್ಟ ನಾಕ [ ತನಕ ] ಬಿಡಬೇಡಿ ||
ಅಂದರದ ಒಳವಿಕ್ಕೇ ಆರುಸುತ್ತಿನ ಕೋಟೆ | ನಾರಿ ಬೀಗಿತ್ತಿಯ ಒಳಕೂಡಿ ||
ಒಳಕೂಡಿ ಬೀಗವನ್ಹಾಕಿ ಸಾಲಿ ಕೊಟ್ಟ ನಾಕ ಬಿಡಬೇಡಿ ||
ಅಂಕಣದ ಒಳವಿಕ್ಕೇ ಸುತ್ತುಸುತ್ತಿನ ಕೋಟೆ | ನಾರಿ ಬೀಗಿತ್ತಿಯ ಒಳಕೂಡಿ |
ಒಳಕೂಡಿ ಬಾಗಿಲ ಹಾಕಿ ಬಣ್ಣ ಕೊಟ್ಟ ನಾಕ ಬಿಡಬೇಡಿ ||
ವಿ. ಸೂ : ಅಂದರ = ಜಗುಲಿ [ veranda ]. ನಾಕ = ತನಕ. ಒಳವಿಕ್ಕೇ [ ಒಳದಿಕ್ಕೇ ].
[ ಇಲ್ಲಿ ಎಪ್ಪತ್ತು, ಅರವತ್ ಗಂಟಿನ ಸೀರೆ ಎಂದರೆ ಬೀಗಿತಿಗೆ ಉಡಲು ಸರಿಯಾದ ಸೀರೆಯಿಲ್ಲದೆ ಹರಕು ಸೀರೆಯನ್ನೇ ಅಷ್ಟು ಗಂಟುಗಳನ್ನು ಹಾಕಿಕೊಂಡು ಉಟ್ಟಿದ್ದಾಳೆ ಎಂದು ಜರೆಯುವುದು ].
%%%% ಗಂಡಿನವರು ಜರೆದದ್ದು :
ಹತ್ತು ಮಂದಿಯ ಒಳಗೆ ತಾಯವ್ವಗೆ | ಚೊಚ್ಚಲ ಮಗನಿವನು |

ಬ್ರಹ್ಮ ಬರೆದನಲ್ಲ | ಇದು ಈಗ ನಮ್ಮ ಮನಸು ಇಲ್ಲ || ೧ ||
ಆರು ಮಂದಿಯ ಒಳಗೆ ತಾಯವ್ವಗೆ | ಮೋಹದ ಮಗನಿವನು | ಈಗ ಇವರ್ ಮನೆ ಹೆಣ್ಣು ತರಲಾಗ ಎಂದರೆ ಬ್ರಹ್ಮ ಸಂಕಲ್ಪವು ತಪ್ಪಲೇ ಇಲ್ಲ | ಬ್ರಹ್ಮ ಬರೆದನಲ್ಲ | ಇದು ಈಗ ನಮ್ಮ ಮನಸು ಇಲ್ಲ || ೨ ||
&&&& ಹೆಣ್ಣಿನವರ ಉತ್ತರ :
ಇಪ್ಪತ್ತು ವರುಷವ ನೋಡೆ | ಎರಡಾಳುದ್ದವ ನೋಡೆ | ಅತ್ತೆಗಿಂತ ಅಳಿಯ ಹಿರಿದಾದ | ಹಿರಿದಾದ ತಮ್ಮಯ್ಯ | ಎಲ್ಲಿ ದೊರಕಿದನೋ ಮಗಳಿಗೆ || ೧ ||
ಮೂವತ್ತು ವರುಷವ ನೋಡೆ | ಮೂರಾಳುದ್ದವ ನೋಡೆ |
ಮಾವನಿಂದಳಿಯ ಹಿರಿದಾದ | ಹಿರಿದಾದ ತಮ್ಮಯ್ಯ | ಎಲ್ಲಿ ದೊರಕಿದನೋ ಮಗಳಿಗೆ || ೨ ||
%%%% ಗಂಡಿನವರು ಜರೆದಿದ್ದು :
ಹಾಡನ್ನು ಹೇಳೆಂದರೆ ನಿನ್ನ ಮಗಳು | ಕತ್ತೆತ್ತಿ ನೋಡಲಿಲ್ಲ ವಿದ್ಯಾವಂತಳೆಂದು ನಾವು ತಂದೆವಲ್ಲ | ಹಾಡನ್ನು ಹೇಳದೆ ಓಡಿ ಹೋಗುವಳಲ್ಲ || ೧ ||
ಹಾಡನ್ನು ಓದು ಎಂದರೆ ನಿನ್ನ ಮಗಳು | ಮುಖವನ್ನೇ ನೋಡುವಳು | ಪುಸ್ತಕದ ಗುರುತನ್ನು ಅರಿಯದಿದ್ದವಳನ್ನು ವಿದ್ಯಾವಂತಳೆಂದು ನಾವು ತಂದೆವಲ್ಲ || ೨ ||
ಶಿಸ್ತನ್ನು ಮಾಡೆಂದರೆ ನಿನ್ನ ಮಗಳು | ಮುಖ ಎತ್ತಿ ನೋಡಲಿಲ್ಲ | ಶಿಸ್ತಿನ ಬಗೆಯನ್ನು ತಿಳಿಯದಿದ್ದವಳನ್ನು ಬುದ್ಧಿವಂತಳೆಂದು ನಾವು ತಂದೆವಲ್ಲ || ೩ ||
&&&& ಹೆಣ್ಣಿನವರ ಉತ್ತರ :
ಕಟೆ ಕಟೆ ಅತ್ತೇರು ಕಿಟಿ ಕಿಟಿ ಮಾವ್ನೋರು | ಬೆಂಕಿ ಕಿಡಿಯಂತ ಪತಿಗಳು |
ಪತಿಗಳ ಕಾಲ್ದಲ್ಲಿ ಬಾಳುವುದೇ ಕಷ್ಟ ಮನೆಯಲ್ಲಿ || ೧ ||
ಮಾವ್ನೋರು ಮಾತಾಡಿದರೆ ಸಿಂಹ ಘರ್ಜಿಸಿದಂತೆ | ಅತ್ತೇರು ಘಟಸರ್ಪ |
ಘಟಸರ್ಪನ ಕಾಲ್ದಲ್ಲಿ ಬಾಳುವುದೇ ಕಷ್ಟ ಮನೆಯಲ್ಲಿ || ೨ ||
ಅತ್ತೇರ ಕಾಲ್ದಲ್ಲಿ ಒಪ್ಪೊತ್ತೂಟವ ಬಿಟ್ಟೆ | ಮತ್ತೆ ಮನೆ ಕೆಲಸ ಬಹು ಕಷ್ಟ |
ಬಹು ಕಷ್ಟ ಮನೆಯೊಳಗೆ | ಬಾಳುವುದೇ ಕಷ್ಟ ಮನೆಯಲ್ಲಿ || ೩ ||
ಕಿಟಿ ಕಿಟಿ ಅತ್ತೇರು ಕಟೆ ಕಟೆ ಮಾವ್ನೋರು | ಸಣ್ಣ ಮೆಣಸಿನಂಥ ಪತಿಗಳು |
ಪತಿಗಳ ಕಾಲ್ದಲ್ಲಿ ಬಾಳುವುದೇ ಕಷ್ಟ ಮನೆಯಲ್ಲಿ || ೪ ||
%%%% ಗಂಡಿನವರು ಜರೆದದ್ದು :
ಉಪ್ಪರಿಗೆ ಒಳದಿಕ್ಕೆ ಹತ್ತು ಜೋಡು ಒಲೆ ಹೂಡಿ ಮಿತ್ರೆ ಅತ್ತೆಮ್ಮ ನಡು ಬೆನ್ನ | ನಡು ಬೆನ್ನ ಕಾಸುತ್ತಾ ಸಾರಿಗೆ ಉಪ್ಪ ಹಾಕಲಿಕೆ ಮರೆತಳು || ೧ ||
ಮಾಳಿಗೆ ಒಳದಿಕ್ಕೆ ಆರು ಜೋಡು ಒಲೆ ಹೂಡಿ ರಂಭೆ ಅತ್ತೆಮ್ಮ ನಡು ಬೆನ್ನ | ನಡುಬೆನ್ನ ಕಾಸುತ್ತಾ ಪಲ್ಯಕೆ ಉಪ್ಪ ಹಾಕಲಿಕೆ ಮರೆತಳು || ೨ ||
ಅಂದರದ ಒಳದಿಕ್ಕೆ ಮೂರು ಜೋಡು ಒಲೆ ಹೂಡಿ ರಾಣಿ ಅತ್ತೆಮ್ಮ ಎಡಗೈಯ್ಯ | ಎಡಗೈಯ್ಯ ಕಾಸುತ್ತಾ ಗೊಜ್ಜಿಗ್ ಉಪ್ಪ ಹಾಕಲಿಕೆ ಮರೆತಳು || ೩ ||
&&&& ಹೆಣ್ಣಿನವರ ಉತ್ತರ ;
ಸಾರಿಗ್ ಉಪ್ಪ ಹಾಕದಿದ್ರೆ ಆಶ್ಚರ್ಯವೇನೆ | ಮೇಲ್ ಉಪ್ಪ ಹಾಕ್ಕೊಂಡು ತಿನಬಾರದೇನೆ |
ಯಾರೂ ಮಾಡದಡಿಗೆಯ ನಾ ಮಾಡಿದನೇನೆ | ಉಂಡು ದೂರುವುದು ಥರವಲ್ಲ || ೧ ||
ಪಲ್ಯಕೆ ಉಪ್ಪ ಹಾಕದಿದ್ರೆ ಆಶ್ಚರ್ಯವೇನೆ | ಮೇಲ್ ಉಪ್ಪು ಹಾಕೊಂಡು ತಿನಬಾರದೇನೆ |
ಯಾರೂ ಮಾಡದ ಪಲ್ಯವ ನಾ ಮಾಡಿದನೇನೆ | ಉಂಡು ದೂರುವುದು ಥರವಲ್ಲ [ ದೂರುಗಳ್ಳೆರಾ ಮೊದಲ್ಹೋಗಿ ] || ೨ ||
%%%% ಗಂಡಿನವರು ಜರೆದದ್ದು :
ಹತ್ತು ಜೋಡು ವಾದ್ಯವ ಒಪ್ಪಕೆ ತಂದಿರುವೆವು | ಇಂದು ಬೀಗರ ಮನೆ ಸಣ್ಣ | ಮನೆ ಸಣ್ಣ ಎಂದ್ಹೇಳಿ ವಾದ್ಯ ಹಿಂದಕೆ ಕಳಿಸೇವು || ೧ ||
ಆರು ಜೋಡು ಕಹಳೆಯ ಆಯಕೆ ತಂದಿರುವೆವು | ಈಗ ಬೀಗರ ಮನೆ ಸಣ್ಣ | ಮನೆ ಸಣ್ಣ ಎಂದ್ಹೇಳಿ ಕಹಳೆ ಹಿಂದಕೆ ಕಳಿಸೇವು || ೨ ||
&&&& ಹೆಣ್ಣಿನವರ ಉತ್ತರ :
ಉದ್ದಿನ ಹಕ್ಕಲಿಗೆ ಹದ್ದು ಬಂದಿಳಿದಂತೆ | ಸದ್ದಿಲ್ಲದೆ ಬೀಗರು ಬರುತಾರೆ | ಬರುತಾರೆಂಬುದ ಕೇಳಿ ವಾದ್ಯವ ಕೊಟ್ಟು ಕರೆಸೇವು || ೧ ||
ಗೋದಿಯ ಹಕ್ಕಲಿಗೆ ಮಂಗ ಬಂದಿಳಿದಂತೆ | ಸದ್ದಿಲ್ಲದೆ ಬೀಗರು ಬರುತಾರೆ | ಬರುತಾರೆಂಬುದ ಕೇಳಿ ಕಹಳೆಯ ಕೊಟ್ಟು ಕರೆಸೇವು || ೨ ||
%%%% ಗಂಡಿನವರು ಜರೆದದ್ದು :
ಮಿತ್ರೇರು ನಾವ್ ಬರುವ ರಭಸವ ನೋಡೆ | ನಿನ್ನ ಚಪ್ಪರ ಮಂಡೆಯ ಅತ್ತಿತ್ತ ಮಾಡೆ |
ಮಿತ್ರೆ ಬೀಗಿತ್ತಿ ಇನ್ನೆಲ್ಲಡಗಿಹಳೊ | ನಾರಿಯರೇ ಹೋಗಿ ಕರೆತನ್ನಿ || ೧ ||
ನಾರಿಯರು ನಾವ್ ಬರುವ ರಭಸವ ನೋಡೆ | ನಿನ್ನ ಸೋಗೆಯ ಮಂಡೆಯ ಅತ್ತಿತ್ತ ಮಾಡೆ |
ರಂಭೆ ಬೀಗಿತ್ತಿ ಇನ್ನೆಲ್ಲಡಗಿದಳೊ | ಮಿತ್ರೆಯರೇ ಹೋಗಿ ಕರೆತನ್ನಿ || ೨ ||
&&&& ಹೆಣ್ಣಿನವರ ಉತ್ತರ :
ದಿಬ್ಬಣ ಬಂತು ನೋಡಲು ಬನ್ನಿರೇ | ಆ ಊರಾ ದಿಬ್ಬಣ ಬಂತು ನೋಡಲು ಬನ್ನಿರೇ || ಪ ||
ದಿಬ್ಬಣ ಬಂತು ನೋಡುವ ಬನ್ನಿ ಒಬ್ಬರಿಗಿಂಥ ಒಬ್ಬರು ಚೆಂದಾ | ನೋಡುವವರಿಗಾನಂದ ಕಂಬಳಿ ಕುರಿ ಹಿಂಡಿನಂತೆ |
ಕಬ್ಬಿಣ ಗದ್ದೆಲವರ ಸಂತೆ ದಿಬ್ಬಣ ಬಂತು ನೋಡುವ ಬನ್ನಿರೆ || ೧ ||
ಒಬ್ಬರಿಗಿಂಥಾ ಒಬ್ಬರು ಚೆಂದಾ ಬೆಕ್ಕಿಗಿಂತ ಬೀಗಿತಿ ಚೆಂದಾ | ಮರವನೇರಿದ ಕೋಡಗನಿಗಿಂತ ಬೀಗರೆ ಚೆಂದಾ |
ವಡ್ಡರಿಗಿಂತ ಇವರೆ ಚೆಂದ ದಿಬ್ಬಣ ಬಂತು ನೋಡುವ ಬನ್ನಿರೆ || ೨ ||
%%%% ಗಂಡಿನವರು ಜರೆದಿದ್ದು :
ಹತ್ತಕೆ ಕೊಂಡಿದ್ದಲ್ಲ | ಇಪ್ಪತ್ತಕೆ ಬೆಲೆಯಾದ್ದಲ್ಲ |ತೌಡಿಗೆ ಕೊಂಡ ಬಿದಿರ್ ಚಾಪೆ |
ಬಿದುರ್ ಚಾಪೆ ಕುರುಬರ ಜಾಡಿ | ತಂದು ಹಾಸಿದಿರಿ ಜಗುಲಿಗೆ || ೧ ||
ಆರಕೆ ಕೊಂಡಿದ್ದಲ್ಲ | ಮೂರಕೆ ಬೆಲೆಯಾದ್ದಲ್ಲ | ನುಚ್ಚಿಗೆ ಕೊಂಡ ಹರಕ್ ಚಾಪೆ |
ಹರಕ್ ಚಾಪೆ ಕುರುಬರ ಜಾಡಿ | ತಂದು ಹಾಸಿದಿರಿ ಜಗುಲಿಗೆ || ೨ ||
&&&& ಹೆಣ್ಣಿನವರ ಉತ್ತರ :
ಹತ್ತಕೆ ಕೊಂಡಿದ್ಹೌದು ಇಪ್ಪತ್ತಕೆ ಬೆಲೆಯಾದ್ಹೌದು |ನೂರಕೆ ಕೊಂಡ ಜಮಖಾನ |
ಜಮಖಾನ ಬೀಗರೇ | ತಂದು ಹಾಸಿರುವೆ ಜಗುಲಿಗೆ ||
ಆರಕೆ ಕೊಂಡಿದ್ಹೌದು ಮೂರಕೆ ಬೆಲೆಯಾದ್ಹೌದು | ಐನೂರಕೆ ಕೊಂಡ ಜಮಖಾನ |
ಜಮಖಾನ ಬೀಗರೇ | ತಂದು ಹಾಸಿರುವೆ ಜಗುಲಿಗೆ || ೨ ||
%%%% ಗಂಡಿನವರು ಜರೆದಿದ್ದು :
ವಾದ್ಯದ ಧ್ವನಿಯ ಕೇಳುತಲಿ ಓಡಿಹೋದನು ಮಾವಯ್ಯ |
ಓಡದಿರು ಅಡಗದಿರು ಬಹಳ ಮಂದಿಯು ಬರಲಿಲ್ಲ || ೧ ||
ಕಹಳೆಯ ಧ್ವನಿ ಕೇಳಿ ಹೆದರಿ ಹೋದನು ಬಾವಯ್ಯ |
ಹೆದರದಿರು ಅಂಜದಿರು ಬಹಳ ಮಂದಿಯು ಬರಲಿಲ್ಲ || ೨ ||
&&&& ಹೆಣ್ಣಿನವರ ಉತ್ತರ :
ವಾದ್ಯದ ಧ್ವನಿಯ ಕೇಳುತಲಿ ಓಡಿಬಂದನು ಅಪ್ಪಯ್ಯ |
ಹೆದರದೆ ಬೆದರದೆ ಬಹಳ ಮಂದಿಯು ಬನ್ನಿರೆಂದು || ೧ ||
ಕಹಳೆಯ ಧ್ವನಿಯ ಕೇಳುತಲಿ ಬೇಗ ಬಂದನು ಅಣ್ಣಯ್ಯ |
ಅಂಜದೆ ಅಳುಕದೆ ಬಹಳ ಮಂದಿಯು ಬನ್ನಿರೆಂದು || ೨ ||
%%%% ಗಂಡಿನವರು :
ನಾವೇನ್ ವರದಕ್ಷಿಣೆ ಕೇಳೋದಿಲ್ಲ
ನೀವೇನ್ ಸಾಲ ಮಾಡಿ ತರಬೇಕಿಲ್ಲ
ವರೋಪಚಾರ ಮಾತ್ರ ಮಾಡ್ಲೇಬೇಕು
ಕೇಳಿದ್ದೆಲ್ಲಾ ಗೌರವದಿಂದ ಕೊಟ್ರೆ ಸಾಕು || ಪ ||
ಹೊದಿಲಿಕ್ಕೊಂದು ಶಲ್ಯ ನೀವು ಕೊಡಲೇಬೇಕು
ಜರಿ ಅಂಚಿನಿಂದ ಅದು ಕೂಡಿರಲೇಬೇಕು
ಜರಿ ಅಂಚಿನ ಪೇಟ ನೀವು ಕೊಡ್ಲೇಬೇಕು
ಮಿರಿ ಮಿರಿ ಮಿರಿ ಅಂತಾ ಮಿರಗಾಬೇಕು || ೧ ||
ಪೂಜೆ ಸಂಧ್ಯಾವಂದನೆ ಎಲ್ಲಾ ಮಾಡೋದಕ್ಕೆ
ಬೆಳ್ಳಿ ತಟ್ಟೆ ಬೆಳ್ಳಿ ತಂಬಿಗೆ ಸಾಕೇಸಾಕು
ಊಟ ಕಾಫಿ ತಿಂಡಿ ಎಲ್ಲಾ ಮಾಡೋದಕ್ಕೆ
ಬೆಳ್ಳಿ ತಟ್ಟೆ ಬೆಳ್ಳಿ ಲೋಟ ಬೇಕೇಬೇಕು || ೨ ||
ಇರಲಿಕ್ಕೊಂದು ಬಂಗಲೆ ನೀವು ಕೊಡ್ಲೇಬೇಕು
ಸಕಲ ವ್ಯವಸ್ಥೆಯಿಂದ ಅದು ಕೂಡಿರಬೇಕು
ಘನತೆಗೆ ತಕ್ಕ ಮದುವೆ ಮಾತ್ರ ಮಾಡ್ಲೇಬೇಕು
ಮಹಾರಾಜರ ಮದುವೆಯ ಮೀರಿಸಲೇಬೇಕು || ೩ ||
%%%% ಗಂಡಿನವರು ಜರೆದದ್ದು :
ಹತ್ತು ನಿಂಬೆಯ ಹಣ್ಣ ತರಿಸಲಿಲ್ಲ | ಒಳ್ಳೆಯ ಉಕ್ಕುವ ಪಾನಕವ ಕರಡಲಿಲ್ಲ |
ಮಿತ್ರೆ ಬೀಗಿತ್ತೆರಿಗೆ ತಂದು ಕೊಡಲೇ ಇಲ್ಲ | ಸಾಕು ಅತ್ತಿಗೆ ನಿಮ್ಮ ಉಪಚಾರ || ೧ ||
ಆರು ನಿಂಬೆಯ ಹಣ್ಣ ತರಿಸಲಿಲ್ಲ | ಒಳ್ಳೆಯ ತಣ್ಣನೆಯ ಪಾನಕವ ಕರಡಲಿಲ್ಲ |
ನಾರಿ ಬೀಗಿತ್ತೆರಿಗೆ ತಂದು ಕೊಡಲೇ ಇಲ್ಲ | ಸಾಕು ಅತ್ತಿಗೆ ನಿನ್ನ ಬಡಿವಾರ || ೨ ||
&&&& ಹೆಣ್ಣಿನವರ ಉತ್ತರ :
ಹತ್ತು ನಿಂಬೆಯ ಹಣ್ಣ ತರಿಸಿದೆವು | ಒಳ್ಳೆಯ ಉಕ್ಕುವ ಪಾನಕವ ಕರಡಿದೆವು |
ಮಿತ್ರೆ ಬೀಗಿತ್ತೆರಿಗೆ ತಂದುಕೊಟ್ಟೆವಲ್ಲ | ಸಾಕು ಅತ್ತಿಗೆ ನಿಮ್ಮ ಬಡಿವಾರ | ಸಾಕು ಅತ್ತಿಗೆ ನಿಮ್ಮ ವೈಯ್ಯಾರ || ೧ ||
ಆರು ನಿಂಬೆಯ ಹಣ್ಣ ತರಿಸಿದೆವು | ಒಳ್ಳೆಯ ರುಚಿಯಾದ ಪಾನಕವ ಕರಡಿದೆವು |
ನಾರಿ ಬೀಗಿತ್ತೆರಿಗೆ ತಂದು ಕೊಟ್ಟೆವಲ್ಲ | ಸಾಕು ಅತ್ತಿಗೆ ದುಷ್ಟತನವ ಮಾಡದಿರು | ಉತ್ತಮರಾದವರ ದೂರದಿರು || ೨ ||
&&&& ಹೆಣ್ಣಿನವರ ಉತ್ತರ :
ನಾವೇನ್ ಹೆಚ್ಚಿನ ವಸ್ತು ಕೇಳೋದಿಲ್ಲ
ನೀವೇನ್ ಸಾಲ ಮಾಡಿ ತರಬೇಕಿಲ್ಲ
ವಧುವಿಗೊಂದು ಪದಕದ ಸರ ಕೊಡ್ಲೇಬೇಕು
ಕೊರಳಿಗೊಂದು ನೆಕ್ಲೇಸ್ ಮಾತ್ರ ಬೇಕೇಬೇಕು || ೧ ||
ಪಟ್ಟೆ ಸೀರೆ ಪಟ್ಟೆ ಕುಪ್ಪಸ ಕೊಡ್ಲೇಬೇಕು
ಜರಿ ಅಂಚಿನಿಂದ ಅದು ಕೂಡಿರಬೇಕು
ಉಡಲಿಕ್ಕೊಂದು ಪೀತಾಂಬರ ಬೇಕೇಬೇಕು
ಮಿರಿ ಮಿರಿ ಮಿರಿ ಅಂತ ಮಿರಗಬೇಕು || ೨ ||
ಕೈಗೆ ಮಾತ್ರ ನಾಲ್ಕು ಬಳೆ ಬೇಕೇಬೇಕು
ಅದರ ಜೊತೆಗೆ ಮುತ್ತಿನ್ ಬಳೆ ಸಾಕೇಸಾಕು
ಅದಕೆ ತಕ್ಕ ವಾಚು ಉಂಗುರ ಬೇಕೇಬೇಕು
ತಲೆಗೊಂದು ಕೇಶಗೊಂಡ್ಯ ಸಾಕೇಸಾಕು || ೩ ||
ಕಿವಿಗೆ ಮಾತ್ರ ವಜ್ರದೋಲೆ ಬೇಕೇಬೇಕು
ಇದಕೆ ತಕ್ಕ ಜುಮುಕಿಯನ್ನು ಇಟ್ರೆ ಸಾಕು
ಮುಂದುಗಡೆ ಟಿ. ವಿ. ಮಾತ್ರ ಇಡ್ಲೇಬೇಕು
ಗೌರವದಿಂದ ಇಷ್ಟು ಮಾತ್ರ ಕೊಡ್ಲೇಬೇಕು || ೪ ||
%%%% ಗಂಡಿನವರು ಜರೆದಿದ್ದು :
ಹೋಳಿಗೆಯ ಕಂಪಿಲ್ಲೆ | ಮಾಳಿಗೆಯ ತಂಪಿಲ್ಲೆ | ಮಿತ್ರೆ ಬೀಗಿತ್ತಿಯ ಸುಳಿವಿಲ್ಲೆ |
ಸುಳಿವಿಲ್ಲೆ ಅತ್ತಿಗೆ | ನಾವೆಲ್ಲ ಹೋಗಿ ಬರುತ್ತೇವೆ || ಪ ||
ಕಾಫಿ ಬೇಕೆಂದರೆ ಪಾನಕ ತಂದುಕೊಟ್ಟು | ನೆಂಟರಿಗೆ ಬೇಗ ಉಪಚಾರ ಉಪಚರಿಸಿದ ಅತ್ತಿಗೆ ನಾವೆಲ್ಲ ಹೋಗಿಬರುತ್ತೇವೆ || ೧ ||
ಊಟವಾದಮೇಲೆ ತಗಡಿನಡಿಗೆ ಕುಳಿತು | ಕಾಲ ಕಳೆಯುವುದೇ ಬಲುಕಷ್ಟ |
ಬಲುಕಷ್ಟ ಆಯಿತು ನಾವೆಲ್ಲ ಹೋಗಿಬರುತ್ತೇವೆ || ೨ ||
ಮದುಮಗನ ಕರೆದರೆ ಮದುವಣತಿ ಓಡಿಬಂದು | ಒಂದೂ ಮಾತಾಡಲು ಬಿಡಲಿಲ್ಲ |
ಬಿಡಲಿಲ್ಲ ಅತ್ತಿಗೆ ನಾವೆಲ್ಲ ಹೋಗಿಬರುತ್ತೇವೆ || ೩ ||
&&&& ಹೆಣ್ಣಿನವರ ಉತ್ತರ :
ಬಂದು ನೋಡಿಕೊ ಸೊಸೆಯ ಬೀಗಿತ್ತಿಯೆ | ನಿಂದು ನೋಡಿಕೊ ಸೊಸೆಯ |
ಬಂದು ನೋಡಿಕೊ ಮುದ್ದಿನ ಸೊಸೆಯನು | ಅರಗಿಣಿಯಂಥ ಮಗಳನು || ೧ ||
ಉಟ್ಟ ಸೀರೆಯ ನೋಡೆ ಬೀಗಿತ್ತಿಯೆ | ಇಟ್ಟ ಕಾಲುಂಗುರ ನೋಡೆ |
ಕೊಟ್ಟ ಉಂಗುರ ನೋಡೆ ಬೀಗಿತ್ತಿಯೆ | ಇಟ್ಟ ಕುಂಕುಮವ ನೋಡೆ || ೨ ||
%%%% ಗಂಡಿನವರು ಜರೆದದ್ದು :
ನೆಂಟರುಪಚರಿಸಲು ಮುಂಚುಟ್ಟಳು ಕೂರೆಯ | ಕಂಚಿಯ ಸೊಪ್ಪು ತಲೆತುಂಬಾ |
ತಲೆತುಂಬಾ ಮುಡಕೊಂಡು | ನೆಂಟರುಪಚರಿಸಲು ಹೊರಟಳು || ೧ ||
ಬೀಗರು ಬಂದರತ್ತಿಗೆ ನೆಂಟರು ಬಂದರು ನಾದಿನಿ | ನೆಂಟರು ಬಂದರೆಂಬ ಸಡಗರ |
ನೆಂಟರು ಬಂದರೆಂಬ ಸಡಗರ | ಸಡಗರದಿಂದತ್ತಿಗೆ ಸೊಂಟುಳುಕಿ ಅಲ್ಲೇ ಕುಳಿತಳು |
ಕುಳಿತ ಬೀಗಿತ್ತಿಯ ದಂಟಕೋಲ ಕೊಟ್ಟು ಕರೆತನ್ನಿ || ೨ ||
ವಿ. ಸೂ : ಕೂರೆಯ = ಕೊಳಕಾದ ಬಟ್ಟೆ.
&&&& ಹೆಣ್ಣಿನವರ ಉತ್ತರ :
ನೆಂಟರುಪಚರಿಸಲಿಕೆ ಮುಂಚುಟ್ಟಳು ಪಟ್ಟೇಯ | ಸೇವಂತಿಗೆ ಹೂವ ತಲೆತುಂಬಾ |
ತಲೆತುಂಬಾ ಮುಡಕೊಂಡು ಬೀಗರುಪಚರಿಸಲು ಹೊರಟಳು || ೧ ||
ಬೀಗರುಪಚರಿಸಲಿಕೆ ಮುಂಚುಟ್ಟಳು ಸಾಲಿಯ | ಮಲ್ಲಿಗೆ ಹೂವ ತಲೆತುಂಬಾ ||
ತಲೆತುಂಬಾ ಮುಡಕೊಂಡು ಬೀಗರುಪಚರಿಸಲು ಹೊರಟಳು || ೨ ||
&&&& ಹೆಣ್ಣಿನವರ ಉತ್ತರ :
ಕಪ್ಪಾದರೆ ನಿನ್ನ ಕುಲಕೆ ತಪ್ಪೇನ ಬಂದಿತೆ ಎಪ್ಪತ್ತು ವರಹದ ಸರಿಗೆಯ | ಸರಿಗೆಯನಿಟ್ಟರೂ ಕಪ್ಪಿನ ಬಟ್ಟೊನ್ದ ಇಡಬೇಕು ||
ಕರಿದಾದರೆ ನಿನ್ನ ಕುಲಕೆ ಕೆಡುಕೇನು ಆಯಿತೆ ಅರುವತ್ವರಹದ ಸರಿಗೆಯ | ಸರಿಗೆಯನಿಟ್ಟರೂ ಕರಿಯ ಬಟ್ಟೊನ್ದ ಇಡಬೇಕು ||
ಬಣ್ಣ ಕಪ್ಪಾದರೆ ತಪ್ಪು ಏನಾಯಿತೆ ನಲವತ್ವರಹದ ಸರಿಗೆಯ | ಸರಿಗೆಯನಿಟ್ಟರೂ ಸಾದಿನ [ ಕರಿಯ ] ಬಟ್ಟೊನ್ದ ಇಡಬೇಕು ||
%%%% ಮೇಲಿನ ಹಾಡಿಗೆ ಗಂಡಿನವರ ಉತ್ತರ :
ಪುತ್ರ ಕಪ್ಪಾದರೆ ಸೃಷ್ಟಿಯನಾಳ್ಯಾನು | ಮಿತ್ರೆ ನಿನ್ನ ಮಗಳು ಅತಿ ಚೆಲುವೆ |
ಅತಿ ಚೆಲುವೆಯಾದರೂ ಉಪ್ಪರಿಗೆ ಕಸವ ಮೊಗಿಬೇಕು || ೧ ||
ಬಾಲ ಕಪ್ಪಾದರೆ ರಾಜ್ಯವನಾಳ್ಯಾನು | ನಾರಿ ನಿನ ಮಗಳು ಚೆಲುವೆಯು |
ಚೆಲುವೆಯಾದರೂ ಮಾಳಿಗೆಯ ಕಸವ ಮೊಗಿಬೇಕು || ೨ ||
ಕಂದ ಕಪ್ಪಾದರೆ ಪಟ್ಟವನೇರ್ಯಾನು | ರಂಭೆ ನಿನ ಮಗಳು ಸ್ಪುರಧ್ರೂಪಿ |
ಸ್ಪುರಧ್ರೂಪಿಯಾದರೂ ಅಂದರದ ಕಸವ ಮೊಗಿಬೇಕು ||
ಸಂಗ್ರಹ : ಎಂ. ಗಣಪತಿ
ಕಾನುಗೋಡು
ಅಂಚೆ : B . ಮಂಚಾಲೆ ----577431
ಸಾಗರ ತಾಲ್ಲೂಕು. ಶಿವಮೊಗ್ಗ ಜಿಲ್ಲೆ.
ಮೊ : 9481968771

ನಿಮ್ಮ, ಅಪೂರ್ವ ಪ್ರತಿಭೆ,ಆಸಕ್ತಿ,ಶ್ರಮ ಎಲ್ಲಾ ಕಂಡು ಬೆರಗಾಗಿರುವೆ.ನಿಮ್ಮ ಬ್ಲಾಗ್ ಒಂದು ಅಪೂರ್ವ ರತ್ನ ಭಂಡಾರ.ವಂದನೆಗಳು.
ReplyDelete