--ಎಂ. ಗಣಪತಿ, ಕಾನುಗೋಡು
ವ್ಯಕ್ತಿಯೊಬ್ಬ ಯಾವುದಾದರೂ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುತ್ತಾನೆ. ಆಗ ಜನರು ಅವನದು ಉಳ್ಳಾಗಡ್ಡೆ ಲಾಭದ ಕತೆಯಾಯಿತು ಎಂದು ಆ ವ್ಯವಹಾರದ ಕುರಿತು ವರ್ಣನೆ ಮಾಡುತ್ತಾರೆ.
ಹಾಗಾದರೆ ಉಳ್ಳಾಗಡ್ಡೆ ಲಾಭದ ಕತೆ ಎಂದರೆ ಏನು ? . ವ್ಯಾಪಾರಿಯೊಬ್ಬ ಒಂದು ಕ್ವಿಂಟಾಲ್ ಉಳ್ಳಾಗಡ್ಡೆಯನ್ನು ತಂದರೆ ಅದನ್ನು ತೊಂಬತ್ತು ಕೇಜಿ ಲೆಕ್ಕಕ್ಕೆ ಹಿಡಿದು ಮಾರುತ್ತಾನೆ. ಏಕೆಂದರೆ ನೀರುಳ್ಳಿ ಆರಿಕೆ ಬರುತ್ತದೆ . ಸಿಪ್ಪೆ ಹಾರಿ ಹೋಗುತ್ತದೆ . ಹೆಚ್ಚಾಗಿ ಕೊಳೆತು ಹೋಗುತ್ತದೆ. ಹತ್ತು ಕೇಜಿ ಕಡಿಮೆ ಲೆಕ್ಕಕ್ಕೆ ಹಿಡಿದು ಕೊಂಡರೂ ಪೂರ್ತಿ ವ್ಯಾಪಾರ ಮಾಡಿ ಲೆಕ್ಕಾಚಾರ ಮಾಡಿಕೊಳ್ಳುವ ಹೊತ್ತಿಗೆ ಕೆಲವೊಮ್ಮೆ ಅವನಿಗೆ ವ್ಯಾಪಾರಕ್ಕೆ ಸಿಗುವುದು ಎಂಬತ್ತೇ ಕೇಜಿಯಾಗಿರುತ್ತದೆ . ಅಲ್ಲಿಗೂ ಇನ್ನೂ ಹತ್ತು ಕೇಜಿ ತೂಕದಲ್ಲಿ ಕಡಿಮೆ ಬಂದಿರುತ್ತದೆ . ಒಟ್ಟಾರೆ ನಷ್ಟವೇ ಸರಿ.
ತಕ್ಕಡಿಗೆ ಸಂಸ್ಕೃತದಲ್ಲಿ " ತುಲಾ " ಎನ್ನುತ್ತಾರೆ . ತುಲಾ ಲಘ್ನ , ತುಲಾ ರಾಶಿ , ತುಲಾ ಭಾರ ಎನ್ನುವುದಿಲ್ಲವೇ? ಹಾಗೆ. ಅದಕ್ಕಾಗಿ ಗಾದೆ ಇರುವುದು " ಉಳ್ಳಾಗಡ್ಡೆ ಲಾಭ ತುಲಾದಲ್ಲಿ ಹೋಯಿತು ".
ಕೆಲವು ಜನ ತಮ್ಮ ತಲುಬಿಗಾಗಿ ಅದಕ್ಕೊಂದು ಒತ್ತು ಕೊಟ್ಟುಕೊಂಡಿದ್ದರ ಪರಿಣಾಮ ಆ ಗಾದೆಯು ಬಹಿರಂಗವಾಗಿ ಹೇಳಲಿಕ್ಕೆ ಬಾರದಷ್ಟು ಅಪಭ್ರಂಶಗೊಂಡಿದೆ. ಓ ದೇವರೇ .. !!
ಎಂ. ಗಣಪತಿ, ಕಾನುಗೋಡು
ಬಿ. ಮಂಚಾಲೆ ಅಂಚೆ, - 577 431
ಸಾಗರ ತಾ. ಶಿವಮೊಗ್ಗ ಜಿಲ್ಲೆ.
Email : m.ganapathi.kangod@gmail.com
Blog : mgkangod.blogspot.com
Mob : 9481968771
No comments:
Post a Comment
Note: only a member of this blog may post a comment.