Friday 5 December 2014

ನಮ್ಮ ವಿವಾಹ ಸಂಸ್ಕಾರದ ವಿಧಿ - ವಿಧಾನಗಳು


ಪ್ರಸ್ತುತಿ : ಎಂ.ಗಣಪತಿ ಕಾನುಗೋಡು.


ವಿವಾಹ ಸಂಸ್ಕಾರವೂ ಬ್ರಾಹ್ಮಣನಿಗೆ ಆಗಬೇಕಾದ ಹದಿನಾರು ಸಂಸ್ಕಾರಗಳಲ್ಲಿ ಹದಿನೈದನೆಯದು. ನಮ್ಮ ವಿವಾಹ ಸಂಸ್ಕಾರದಲ್ಲಿ ಇಪ್ಪತ್ತೊಂದು ವಿಧಿ - ವಿಧಾನಗಳಿವೆ. ಅವುಗಳ ಹೆಸರನ್ನು ಮಾತ್ರ ಇಲ್ಲಿ ಪ್ರಸ್ಥಾಪಿಸಲಾಗಿದೆ. ಇದರ ಜೊತೆಜೊತೆಯಾಗಿ, ಇದಕ್ಕೆ ಪೂರಕವಾಗಿ ಸುಮಂಗಲೆಯರು ನಡೆಸುವ ಪದ್ಧತಿಗಳೂ ಅನೇಕ ಇವೆ. ಅವುಗಳನ್ನು ಈಗ ಪ್ರಸ್ಥಾಪಿಸಲಾಗುತ್ತಿಲ್ಲ.
1 . ವರಾಗಮನ. 2 . ವಾಗ್ದಾನ 3 . ಮಧುಪರ್ಕ 4 . ನಿರೀಕ್ಷೆ 5 . ಕನ್ಯಾದಾನ 6 . ಅಕ್ಷತಾರೋಹಣ ಮತ್ತು ಮಾಂಗಲ್ಯಧಾರಣೆ 7 . ಪಾಣಿಗ್ರಹಣ 8 . ಸಪ್ತಪದಿ 9 . ವಿವಾಹ ಹೋಮ 10 . ಅಶ್ಮಾರೋಹಣ [ ವಧುವು ಅರಳನ್ನು ಸಮರ್ಪಿಸುತ್ತ ಹೋಮಕುಂಡವನ್ನು ಪ್ರದಕ್ಷಿಣೆ ಮಾಡುವುದು.] 11 . ವ್ರತಗ್ರಹಣ ಹೋಮ 12 . ಔಪಾಸನ ಹೋಮ 13 . ಆರುಂಧತೀ [ಅರುಂಧತೀ ಎನ್ನುವುದು ವಾಡಿಕೆಯಲ್ಲಿದೆ] ಮತ್ತು ಧ್ರುವನಕ್ಷತ್ರದರ್ಶನ 14 . ಚತುರ್ಥೀ [ ಪಕ್ವ] ಹೋಮ 15 . ವ್ರತವಿಸರ್ಜನ ಹೋಮ 16 . ಉಪಸಂವೇಶನ 17 ಸ್ಥಾಲೀಪಾಕ ಹೋಮ 18 . ಓಕುಳಿ 19 . ಸಮಾರೋಪಣ 20 .ವಧೂಪ್ರವೇಶ 21 . ಗೃಹಸ್ಥಾಶ್ರಮ ವಿಧಿ
ತಾರೀಖು : 04 - 12 -2014
ಮಾಹಿತಿಯ ಕೃಪೆ : ವಿದ್ವಾನ್ ಹೇರಂಭ. ಆರ್. ಭಟ್ಟ ಅಗ್ಗೆರೆ. [ಅವರ ' ಸನಾತನ ಸಂಸ್ಕಾರಗಳು ' ಪುಸ್ತಕದಿಂದ]

1 comment:

  1. ನಮಸ್ತೆ
    ವಿಧಿಗಳ ಪಟ್ಟಿಗಾಗಿ ಧನ್ಯವಾದ.ವಿದ್ವಾನ್ ಹೇರಂಭ ಆರ್ ಭಟ್ಡ ಅಗ್ಗೆರೆಯವರು ಬರೆದ ಸನಾತನ ಸಂಸ್ಕಾರಗಳು ಪುಸ್ತಕ ಲಭ್ಯವೇ. .ಎಲ್ಲಿ ದೊರೆಯುವುದೆಂದು ತಿಳಿಸುವಿರಾ

    ReplyDelete

Note: only a member of this blog may post a comment.