Sunday 13 January 2019

#### ಯಜ್ನೋಪವೀತ ####

ಯಜ್ನೋಪವೀತ ಎಂದರೆ ಕೇವಲ ಜನಿವಾರ ಅಲ್ಲ. ಯಜ್ನೋಪವೀತದ ಜಾಗಕ್ಕೆ ಕಾಲಾನುಕ್ರಮದಲ್ಲಿ ಜನಿವಾರ ಬಂದಿದೆ ಅಷ್ಟೆ. ಯಜ್ನೋಪವೀತ ಎಂದರೆ ಯಜ್ಞ ಮಾಡುವುದಕ್ಕಾಗಿ ಮಾಡಿಕೊಂಡ ಉಪವೀತ. ಉಪವೀತ ಎಂದರೆ ಉತ್ತರೀಯ ಎಂದರ್ಥ. ಎಡದ ಹೆಗಲ ಮೇಲಿನಿಂದ ಬಂದು ಬಲದ ತೋಳಿನ ಕೆಳಗಡೆಯಿಂದ ಬಂದಿದ್ದರೆ ಅದು ಯಜ್ನೋಪವೀತವಾಗುತ್ತದೆ. ಯಜ್ನೋಪವೀತವನ್ನು ಬಹಳ ಹಿಂದಿನ ಕಾಲದಲ್ಲಿ ಸದಾ ಧರಿಸಿರಬೇಕಾಗಿರಲಿಲ್ಲ. ಯಜ್ನಾದಿ ಧಾರ್ಮಿಕ ಕಾರ್ಯವನ್ನು ಮಾಡುವಂಥಹ ವಿಶಿಷ್ಟ ಸಂದರ್ಭಗಳಲ್ಲಿ ಮಾತ್ರ ಧರಿಸಿದ್ದರೆ ಸಾಕಾಗಿತ್ತು. ಸ್ವಾಧ್ಯಾಯ , ಉತ್ಸರ್ಗ, ದಾನ, ಭೋಜನ, ಮತ್ತು ಆಚಮನಗಳೆಂಬ ಪಂಚಕರ್ಮಗಳನ್ನು ನಡೆಸುವಾಗ ಮಾತ್ರ ಧರಿಸುವ ಅಗತ್ಯವಿತ್ತು.

 ಪ್ರಾಚೀನ ಕಾಲದಲ್ಲಿ ಈಗಿನಂತೆ ಯಜೋಪವೀತವು ಜನಿವಾರ ಆಗಿರಲಿಲ್ಲ. ಕೃಷ್ಣಮೃಗದ ಇಡೀ ಚರ್ಮವೇ [ ಕೃಷ್ಣಾಜಿನ ] ಉಪವೀತವನ್ನಾಗಿ ಧರಿಸಲಾಗುತ್ತಿತ್ತು. ಅದು ಭಾರವೆನ್ನಿಸಿದ್ದರಿಂದ ನಂತರ ಕಾಲಾನುಕ್ರಮದಲ್ಲಿ ಹತ್ತಿಯ ಬಟ್ಟೆಯನ್ನು ಉಪವೀತವನ್ನಾಗಿ ಬಳಸಲಾಯಿತು. ಆದರೆ ಪ್ರಾಚೀನ ಪದ್ಧತಿಯನ್ನು ಬಿಡಲಾಗದ ಪೂರ್ವಾಗ್ರದಲ್ಲಿ ಆ ಬಟ್ಟೆಯ ಉಪವೀತದ ಜೊತೆಗೆ ನಾಲ್ಕು ಅಂಗುಲ ಅಗಲದ ಕೃಷ್ಣಾಜಿನದ ಉದ್ದನೆಯ ಪಟ್ಟಿಯನ್ನು-- ಎಡದ ಹೆಗಲ ಮೇಲಿನಿಂದ ಬಲ ತೋಳಿನ ಕೆಳಗಿನವರೆಗೆ -- ಧರಿಸಿಕೊಳ್ಳುವ ಪದ್ಧತಿ ಬಂತು. ಮುಂದೆ ಕಾಲಾನುಕ್ರಮದಲ್ಲಿ ಅದೂ ಕಷ್ಟವೆನಿಸಿದಾಗ ಮೂರು ಅಥವಾ ಕೃಷ್ಣಾಜಿನದ ನಾಲ್ಕು ಅಂಗುಲದ ಒಂದು ಚಿಕ್ಕ ತುಂಡನ್ನು ಆ ಬಟ್ಟೆಯ ಉಪವೀತಕ್ಕೆ ಸೇರಿಸಿ ಧರಿಸುವ ಪದ್ಧತಿ ಬಂತು. ಈಗ ಉಪನಯನವಾದ ಕೆಲವು ದಿನ ಅದೇ ರೀತಿ ಜನಿವಾರಕ್ಕೆ ಕೃಷ್ಣಾಜಿನ ಚಿಕ್ಕ ತುಂಡನ್ನು ಸೇರಿಸುವುದು ಈ ಕಾರಣದಿಂದ ಎಂದು ಹೇಳಲಾಗಿದೆ. ಕೃಷ್ಣಮೃಗದ ಚರ್ಮವೇ ಆಗಲಿ, ನಂತರದ ಹತ್ತಿಯ ಬಟ್ಟೆಯೇ ಆಗಲಿ ಎಡದ ಹೆಗಲ ಮೇಲಿನಿಂದ ಬಲ ತೋಳಿನ ಕೆಳಗೆ ಬರುವ ಕ್ರಮವನ್ನು ಅನುಸರಿಸಲಾಗಿತ್ತು. ಈಗ ಅಪರಕರ್ಮವನ್ನು ಮಾಡುವಾಗ ಜನಿವಾರದ ಜೊತೆಗೆ ಬಟ್ಟೆಯ ತುಂಡನ್ನುಉಪವೀತದ ಆಕಾರದಲ್ಲಿ ಸೇರಿಸಿಕೊಳ್ಳುವುದು ಆಗಿನ ಕಾಲದ ಇಡೀ ಬಟ್ಟೆಯ ಉಪವೀತದ ಅನುಕರಣೆ ಇರಬೇಕು.

 ಒಂದು ಕಾಲದಲ್ಲಿ ಯಜ್ಞಗಳು ವ್ಯಕ್ತಿಯ ಜೀವನದಲ್ಲಿ ಆಗಾಗ್ಯೆಯಷ್ಟೇ ನಡೆಯುತ್ತಿತ್ತು ಆಗಷ್ಟೇ ಯಜೋಪವೀತವನ್ನು ಧರಿಸಲಾಗುತ್ತಿತ್ತು. ಉಳಿದ ಸಂದರ್ಭಗಳಲ್ಲಿ ಅದನ್ನು ಧರಿಸುವ ಪರಿಪಾಠ ಇರಲಿಲ್ಲ. ಆದರೆ ಕಾಲಾನುಕ್ರಮದಲ್ಲಿ ಯಜ್ನಗಳಿಗೆ ಪ್ರಾಶಸ್ತ ಬಂದಮೇಲೆ ಪ್ರತಿ ದಿನವೂ ಯಜ್ನವನ್ನು ಮಾಡಬೇಕೆಂದು ವಿಧಿ ಮಾಡಿದರು. ಪಂಚಮಹಾಯಜ್ಞಗಳು ಗೃಹಸ್ಥನಿಗೆ ಕಡ್ದಾಯವೆಂದು ವಿಧಿಸಲಾಯಿತು. ಅಷ್ಟೇ ಅಲ್ಲ, ಇತರ ಅನೇಕ ಕಾರ್ಯಗಳನ್ನು ಯಜ್ಞ ಸಮಾನವೆಂದು ಸಾರಲಾಯಿತು. ಯಜ್ನ ಮಾಡುವಾಗ ಉಪವೀತ ಇರಬೇಕು ಎಂದಮೇಲೆ ಈ ಕಾಲಘಟ್ಟದಲ್ಲಿ ಸದಾಕಾಲವೂ ಯಜ್ನೋಪವೀತವು ಶರೀರದ ಮೇಲೆ ಇರುವುದು ಕಡ್ದಾಯವಾಯಿತು.
ಈ ಹಂತದವರೆಗೆ ಯಜ್ನೋಪವೀತವನ್ನು ಬೇಕಾದಾಗ ಶರೀರದ ಮೇಲೆ ಇಟ್ಟುಕೊಳ್ಳುವ ಬೇಡವೆಂದಾಗ ತೆಗೆದಿಡುವ ಪದ್ಧತಿ ರೂಢಿಯಲ್ಲಿತ್ತು. ಸದಾಕಾಲವೂ ಯಜ್ನೋಪವೀತವು ಶರೀರದ ಮೇಲೆ ಇರಬೇಕು ಎನ್ನುವ ಈ ಕಾಲದಲ್ಲಿ ಕೃಷ್ಣಾಮೃಗದ ಇಡಿಯ ಚರ್ಮವನ್ನೋ ಅಥವಾ ಕೃಷ್ಣಾಜಿನದ ನಾಲ್ಕು ಅಂಗುಲ ಅಗಲದ ಉದ್ದನೆಯ ಪಟ್ಟಿಯನ್ನು ಸೇರಿಸಿಕೊಂಡ ಹತ್ತಿಯ ಇಡಿಯ ಬಟ್ಟೆಯನ್ನೋ ಅಥವಾ ನಾಲ್ಕು ಅಂಗುಲದ ಕೃಷ್ಣಾಜಿನದ ತುಂಡನ್ನು ಸೇರಿಸಿದ ಹತ್ತಿಯ ಬಟ್ಟೆಯನ್ನೂ ಉಪವೀತವನ್ನಾಗಿ ದಿನ ನಿತ್ಯ ಧರಿಸುವ ಪದ್ಧತಿ ಕಷ್ಟವೆನಿಸಿರಬೇಕು. ಆಗ ಅದರ ಬದಲು ದರ್ಭೆಯ ಹಗ್ಗವನ್ನು ಯಜ್ನೋಪವೀತವನ್ನಾಗಿ ಧರಿಸುವ ಪರಿಪಾಠ ಬಂತು. ಆದರೆ ಅದೂ ಕಿರಿಕಿರಿಯನ್ನುಂಟು ಮಾಡುತ್ತಿದ್ದುದರಿಂದ ಹತ್ತಿಯ ದಾರವನ್ನು ಯಜ್ನೋಪವೀತವನ್ನಾಗಿ ಧರಿಸುವ ಪದ್ಧತಿ ಜಾರಿಗೆ ಬಂತು. ಮೂರೆಳೆಯ ದಾರವನ್ನು ಜನಿವಾರವನ್ನು ಯಜ್ನೋಪವೀತವನ್ನಾಗಿ ಧರಿಸುವ ಪದ್ಧತಿ ಪ್ರಾಚಿನದಕ್ಕೆ ಹೋಲಿಸಿದರೆ ಇತ್ತೀಚಿನದು. ಯಜ್ನೋಪವೀತವು ಹೀಗೆ ಸಂಪೂರ್ಣ ಕಷ್ಣಾ ಮೃಗದ ಚರ್ಮ , ಸಂಪೂರ್ಣ ಹತ್ತಿಯ ಬಟ್ಟೆ , ಹತ್ತಿಯ ದಾರ ಎಂಬ ಮೂರು ಹಂತಗಳಲ್ಲಿ ಕಾಲಾನುಕ್ರಮದಲ್ಲಿ ಪರಿವರ್ತನೆಯಾಗಿದೆ.

 [ ಪ್ರೊ. ಎಂ. ಎ. ಹೆಗಡೆಯವರ ' ಹಿಂದೂ ಸಂಸ್ಕಾರಗಳು ' ಎನ್ನುವ ಪುಸ್ತಕದಿಂದ ಆಯ್ದು ಬರೆದದ್ದು. ]

 ತಾರೀಖು : 10 -- 1 -- 2019

#### ಜನಿವಾರ ###

ಸಂಗ್ರಹ : ಎಂ. ಗಣಪತಿ ಕಾನುಗೋಡು.

 ಜನಿವಾರ ಎನ್ನುವುದು ಮೂರು ಎಳೆಯ ಹತ್ತಿಯ ದಾರ . ಪ್ರಾಚೀನ ಕಾಲದಲ್ಲಿ ಮೊದಲು ಕೃಷ್ಣಮೃಗದ ಇಡಿಯ ಚರ್ಮ , ಸ್ವಲ್ಪ ಕಾಲದ ನಂತರ ನಾಲ್ಕು ಅಂಗುಲದ ಅಗಲದ ಉದ್ದನೆಯ ಕೃಷ್ಣಮೃಗದ ಚರ್ಮದ ಪಟ್ಟೆಯೊಂದಿಗೆ ಹತ್ತಿಯ ದೊಡ್ಡ ಬಟ್ಟೆ, ಇನ್ನೂ ಸ್ವಲ್ಪ ಕಾಲದ ನಂತರ ಕೃಷ್ಣಾ ಮೃಗದ ಚರ್ಮದ ನಾಲ್ಕು ಅಂಗುಲದ ಒಂದು ಸಣ್ಣ ತುಂಡಿನೊಂದಿಗೆ ಹತ್ತಿಯ ಬಟ್ಟೆ, ಅದಕ್ಕೂ ಸ್ವಲ್ಪ ಕಾಲಾ ನಂತರ ದರ್ಭೆಯ ಹುರಿಯನ್ನು ಯಜ್ನೋಪವೀತವನ್ನಾಗಿ ಮಾಡಿಕೊಳ್ಳಲಾಗಿತ್ತು. ಬಹಳ ಕಾಲದ ನಂತರ ಇವೆಲ್ಲದರ ಬದಲಿಗೆ ಅನುಕೂಲಸಿಂಧುವಾಗಿ ಹತ್ತಿಯ ನೂಲಿನ ದಾರವನ್ನು ಯಜ್ನೋಪವೀತವನ್ನಾಗಿ ಬಳಸುವ ರೂಢಿ ಬಂತು. ಅದಕ್ಕೆ ಜನಿವಾರ ಎಂದು ಹೆಸರಿಸಲಾಯಿತು. ಹಿಂದಿನ ಯಜ್ನೋಪವೀತದ ಕ್ರಮದಂತೆ ಜನಿವಾರವನ್ನೂ ಎಡ ಹೆಗಲಿನ ಮೇಲಿನ ಭಾಗದಿಂದ ಬಂದು ಬಲದ ತೋಳಿನ ಕೆಳಗಡೆಯವರೆಗೆ ಧರಿಸಿಕೊಳ್ಳುವುದು ಆಚರಣೆಯಾಯಿತು.

 ಜನಿವಾರಕ್ಕೆ ಹಿಂದಿನ ಯಜ್ನೋಪವೀತದ ಬೇರೆ ಬೇರೆ ರೂಪಗಳಿಗೆ ಕೊಟ್ಟ ಮಹತ್ವ ಮತ್ತು ಪಾವಿತ್ರ್ಯವನ್ನು ಕೊಡಲಾಯಿತು. ಅದಕ್ಕಾಗಿ ಜನಿವಾರವನ್ನು ಧರಿಸುವಾಗ ಹಿಂದಿನ ಯಜ್ನೋಪವೀತಗಳನ್ನು ಧರಿಸುವಾಗ ಹೇಳುವ ಮಂತ್ರ " ಯಜ್ನೋಪವೀತಂ ಪರಮಂ ಪವಿತ್ರಂ ............ ಯಜ್ನೋಪವೀತಂ ಬಲಮಸ್ತು ತೇಜಃ || ಎನ್ನುವ ಮಂತ್ರವನ್ನು ಹೇಳಲಾಗುತ್ತದೆ. ಶಾಸ್ತ್ರಕಾರರು ಅದಕ್ಕೆ ಪಾವಿತ್ರ್ಯ ಮತ್ತು ಗಾಂಭೀರ್ಯಗಳನ್ನು ತುಂಬುವುದಕ್ಕೆ ಅನೇಕ ವಿಧಿಗಳನ್ನು ಹೇಳಿದ್ದಾರೆ.

 ಜನಿವಾರದ ಅಳತೆ 96 ಅಂಗುಲ. ಅದು ಅತಿ ಲಂಬವೂ ಆಗಿರಬಾರದು. ಅತಿ ಹ್ರಸ್ವವೂ ಆಗಿರಬಾರದು. 96 ಅಂಗುಲದ ದಾರವನ್ನು ಮೂರು ಸಮ ಎಳೆಗಳಾಗಿ ವಿಂಗಡಿಸಿ ಒಂದೇ ಗಂಟನ್ನು ಹಾಕುವುದು ಕ್ರಮ. ಮೂರು ಎಳೆಗಳು ಮೂರು ವೇದಗಳನ್ನು ಸಂಕೇತಿಸುತ್ತವೆ. ಇಲ್ಲಿ ಹಾಕುವ ಗಂಟಿಗೆ ಬ್ರಹ್ಮಗಂಟೆಂದು ಹೆಸರು. ಜನಿವಾರವು ಮೂರು ಎಳೆಗಳಿಂದ ಕೂಡಿರುತ್ತದೆ. ಅದರಲ್ಲಿನ ಪ್ರತಿ ಎಳೆಯೂ ಮತ್ತೆ ಮೂರು ಎಳೆಗಳಿಂದ ಕೂಡಿರುತ್ತದೆ. ಅಂದರೆ ಜನಿವಾರವು ವಾಸ್ತವಾಂಶದಲ್ಲಿ ಒಟ್ಟು ಒಂಬತ್ತು ಎಳೆಗಳಿಂದ ಕೂಡಿರುತ್ತದೆ. ಈ ಒಂದೊಂದು ಎಳೆಗೂ ಒಬ್ಬ ಅಧಿದೇವತೆ. ಓಂಕಾರ , ಅಗ್ನಿ, ನಾಗ, ಚಂದ್ರ, ಪಿತೃ, ಪ್ರಜಾಪತಿ, ವಾಯು, ಸೂರ್ಯ, ವಿಶ್ವೇದೇವ ಇವರು ಆ ಒಂಬತ್ತು ಎಳೆಗಳಿಗೆ ಒಂಬತ್ತು ಅಧಿದೇವತೆಗಳು. ಈ ದೇವತೆಗಳನ್ನು ಆವಾಹಿಸಿ ಪೂಜೆ ಸಲ್ಲಿಸಿ ಯಜ್ನೋಪವೀತವನ್ನು ಧಾರಣ ಮಾಡಬೇಕು.

 ಜನಿವಾರವು 96 ಅನ್ಗುಲವೇ ಏಕಿರಬೇಕೆಂಬುದಕ್ಕೆ ಬೇರೆ ಬೇರೆ ಕಾರಣವನ್ನು ಹೇಳಲಾಗಿದೆ.

 ಈಗಿನ ಕಾಲದಲ್ಲಿ ಬಹುತೇಕ ಮಂದಿ ವಿಧ್ಯುಕ್ತವಾದ ಅನುಷ್ಠಾನವನ್ನು ಮಾಡದಿದ್ದರೂ ಎಂದಿನಿಂದಲೋ ಬಂದ ಒಂದು ಸಂಪ್ರದಾಯವೆಂದು ಜನಿವಾರವನ್ನು ಧರಿಸುತ್ತಿದ್ದಾರೆ. ಹಾಗೆ ಮಾಡುವುದರಿಂದ ಅದರ ಶಕ್ತಿ ಕಳೆದುಹೋಗುತ್ತದೆ.

 [ ಪ್ರೊ: ಎಂ. ಎ. ಹೆಗಡೆಯವರ ' ಹಿಂದೂ ಸಂಸ್ಕಾರಗಳು ' ಪುಸ್ತಕದಿಂದ ಆಯ್ದು ಬರೆದದ್ದು ]

#### ಮಕರ ಸಂಕ್ರಾಂತಿ ####

ಎಂ. ಗಣಪತಿ. ಕಾನುಗೋಡು. 

ಮಕರ ಸಂಕ್ರಾಂತಿ ಅಥವಾ ಮಕರ ಸಂಕ್ರಮಣವು ಸೂರ್ಯನ ಪಥ ಬದಲಾವಣೆಗೆ ಸಂಬಂಧಿಸಿದ ಪರ್ವದಿನ [ Transition Day ]. ಸೂರ್ಯನು ಮಕರ ರಾಶಿಗೆ ಪ್ರವೇಶಿಸಿ ದಕ್ಷಿಣದಿಂದ ಉತ್ತರಾಭಿಮುಖವಾಗಿ 6 ತಿಂಗಳು ಪ್ರಯಾಣ ಬೆಳಸುತ್ತಾನೆ. ಪೌಷ್ಯ ಲಕ್ಷ್ಮಿಯ ಆಗಮನದ ತರುವಾಯ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ದಿನವನ್ನೇ ಮಕರ ಸಂಕ್ರಾಂತಿ ಎಂದು ಕರೆಯುವುದು. ಹೀಗೆ ಸೂರ್ಯಪಥ ಗಮನದಿಂದ ಭಾರತವಲ್ಲದೆ ಅರೇಬಿಯಾ, ಸಿರಿಯಾ, ಬೆಬಿಲೋನ್, ರೋಮ್ ಮೊದಲಾದ ದೇಶಗಳಿಗೆ ರಾತ್ರಿ ಕಡಿಮೆ ಆಗಿ ಹಗಲು ಹೆಚ್ಚು ದೊರಕುತ್ತದೆ. 

ಮದುವೆಯಾದ ಮೊದಲ ವರ್ಷದಲ್ಲಿ ಮಕರ ಸಂಕ್ರಾಂತಿಯಂದು ಹತ್ತಿರದ ನೆಂಟರಿಷ್ಟರೊಂದಿಗೆ ಸೊಸೆಯನ್ನು ತವರಿಗೆ ಕರೆದೊಯ್ದು ತಾಯಿಗೆ ಸೋಸೆಯಿಂದ ಬಾಗೀನ ಕೊಡಿಸುವ ಪದ್ಧತಿ ಕೆಲವೆಡೆ ಇದೆ. ಕರ್ಕಾಟಕ ಸಂಕ್ರಾಂತಿಯಂದು ತವರ ಮನೆಯವರು ತಮ್ಮ ಹತ್ತಿರದ ಬಂಧು ಮಿತ್ರರೊಂದಿಗೆ ಬಂದು ಮಗಳ ಕೈಯಿಂದ ಗಂಡನ ಮನೆಯ ಹೊಸ್ತಿಲ ಪೂಜೆಯನ್ನು ಮಾಡಿಸುತ್ತಾರೆ. 

ಹಿಂದೂ ಪದ್ಧತಿಯಲ್ಲಿ ಪ್ರತಿಯೊಂದು ಮಾಸಕ್ಕೆ ತಕ್ಕಂತೆ ಒಂದೊಂದು ರಾಶಿ ಹಾಗೂ ಸಂಕ್ರಮಣ ಇದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯನು ಹೋಗುವುದೇ ಸಂಕ್ರಮಣ. ಅಂತೆಯೇ ಹನ್ನೆರಡು ರಾಶಿಗಳಿಗೆ ತಕ್ಕಂತೆ ಹನ್ನೆರಡು ಸಂಕ್ರಮಣಗಳು ಇವೆ. ಇವುಗಳಲ್ಲಿ ಮಕರ ಸಂಕ್ರಮಣ [ ಜನವರಿ 14 ] ಮತ್ತು ಕರ್ಕಾಟಕ ಸಂಕ್ರಮಣ [ ಜುಲೈ 16 ] ಗಳನ್ನು ಮುಖ್ಯವಾಗಿ ಆಚರಿಸಲಾಗುತ್ತದೆ. 

ಎಲ್ಲ ಸಂಕ್ರಮಣಗಳು ಪ್ರತಿ ತಿಂಗಳು 14 , 15 ಅಥವಾ 16 ನೆ ತಾರೀಖಿನಂದು ಮಾತ್ರ ಬರುತ್ತವೆ. ಈ ದಿನಗಳು ಶುಭ ಕಾರ್ಯಗಳಿಗೆ ಪ್ರಶಸ್ತವಲ್ಲ ಎನ್ನುತ್ತಾರೆ. ಸಂಕ್ರಮಣ ಕಾಲದಲ್ಲಿ ಶೃದ್ಧಾಭಕ್ತಿ ವಿವೇಕಗಳಿಂದ ಮಾಡುವ ಸ್ನಾನ, ಧ್ಯಾನ, ಹೋಮ, ಪೂಜೆ, ತರ್ಪಣ, ಶ್ರಾದ್ಧ , ಉಪವಾಸ ವ್ರತಗಳನ್ನು ನಡೆಸುವುದು ಒಳ್ಳೆಯದು ಎಂದು ಹೇಳಲಾಗಿದೆ. 

ಸಂಕ್ರಾಂತಿಯು ಪುಣ್ಯಕಾಲವೆಂದು ಪರಿಗಣಿತವಾದುದರಿಂದ ಅಂದು ಪುಣ್ಯತೀರ್ಥಗಳಲ್ಲಿ ಸ್ನಾನ ಮಾಡುವುದು ಅತ್ಯಂತ ಪ್ರಶಸ್ತ. ಹೀಗೆ ಮಾಡುವ ಸ್ನಾನವು ಶರೀರದ ಕೊಳೆಯನ್ನು ತೊಳೆಯುವ ಮಲಾಪಕರ್ಷಣ ಸ್ನಾನವಲ್ಲ. ಮಾನಸಿಕ ದೋಷಗಳನ್ನು ತೊಳೆಯುವ ಪುಣ್ಯಸ್ನಾನ. ಅದಕ್ಕಾಗಿ ಬಿಸಿನೀರಿನಿಂದ ಮಾಡುವ ಅಭ್ಯಂಜನಕ್ಕಿಂತ ಗಂಗಾದಿ ಪುಣ್ಯತೀರ್ಥಗಳಿಗೆ ಹೋಗಿ ಸಂಕಲ್ಪ ಪೂರಕವಾಗಿ ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದು. ಪುಣ್ಯ ಸ್ನಾನವಾದ ನಂತರ ಶ್ರಾದ್ಧಕ್ಕೆ ಅಧಿಕಾರವುಳ್ಳವರು ಪಿತೃಗಳನ್ನೂ ಕುರಿತು ತರ್ಪಣಾದಿ ರೂಪದಲ್ಲಿ ಶ್ರಾದ್ಧ ಮಾಡಬೇಕು. ದಾನಧರ್ಮಗಳನ್ನು ಮಾಡಬೇಕು. 

ಧ್ಯಾನ ಧೀಕ್ಷೆ ಮತ್ತು ಮಂತ್ರಧೀಕ್ಷೆಯನ್ನು ಪಡೆಯುವುದಕ್ಕೆ ಇದು ಉತ್ತಮವಾದ ಕಾಲ. 

ಹಿಂದೂಗಳು ಮಕರ ಸಂಕ್ರಾಂತಿಯ ದಿನವನ್ನು ' ಉತ್ತರಾಯಣ ಪುಣ್ಯಕಾಲ ' ಎಂದು ಕರೆಯುತ್ತಾರೆ. ಏಕೆಂದರೆ ಸೂರ್ಯನಾರಾಯಣನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಹೆಜ್ಜೆಯಿಡಲು ಪ್ರಾರಂಭಿಸುವ ಪವಿತ್ರ ಸಮಯವಾಗಿರುತ್ತದೆ. ಈ ದಿನ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂದು ನಮ್ಮವರ ನಂಬಿಕೆ. ಶರಶಯ್ಯೆಯ ಮೇಲೆ ಮಲಗಿದ್ದ ಇಚ್ಛಾಮರಣಿ ಭೀಷ್ಮರು ಸಹ ಕೊನೆಯುಸಿರನ್ನು ಎಳೆಯುವುದಕ್ಕಾಗಿ ಉತ್ತರಾಯಣ ಬರುವವರೆಗೆ ಕಾಯ್ದಿದ್ದರು. 

ಮಕರ ಸಂಕ್ರಾಂತಿಯ ದಿನದಿಂದ ದೇವತೆಗಳಿಗೆ ಹಗಲು ರಾಕ್ಷಸರಿಗೆ ರಾತ್ರಿ ಆಗುವುದೆಂದು ಪುರಾಣಗಳ ಹೇಳಿಕೆ.

ಮಧ್ಯಾಹ್ನದ ಬೋಜನವಾದ ನಂತರ ಪರಿಕರ ಸಹಿತವಾದ ಎಳ್ಳು ಬೆಲ್ಲವನ್ನು, ಕಬ್ಬಿನ ಜಲ್ಲೆಯನ್ನು, ಸಕ್ಕರೆಯಿಂದ ಮಾಡಿದ ವಿಗ್ರಹಗಳನ್ನು ಹಂಚುವ ಪದ್ಧತಿ ಇದೆ. ಇವೆಲ್ಲವನ್ನೂ ಹಂಚಿ ಇಷ್ಟಮಿತ್ರರೊಂದಿಗೆ ಮಧುರ ಮಾತುಗಳನ್ನು ಆಡುತ್ತಾರೆ. ಸಾಮಾಜಿಕ ಸಂಬಂಧವನ್ನು ಘಟ್ಟಿಗೊಳಿಸಲು ಇದು ಒಂದು ಮಾರ್ಗ. ಸಾಗರದ ಕೆಲವು ಕಡೆ ಮದ್ಯಾಹ್ನದ ಊಟಕ್ಕೆ ಸಿಹಿ ಹೆಸರುಬೇಳೆ ಹುಗ್ಗಿ [ ಪೊಂಗಲ್ ] ಮತ್ತು ಸಿಹಿ ಬೆರಸದ ಪೊಂಗಲ್ , ಜೊತೆಗೆ ಹೊಸ ಹುಣಿಸೆ ಹಣ್ಣಿನ ಹುಳಿಗೊಜ್ಜನ್ನು ಮಾಡುತ್ತಾರೆ. 

ಭೋಗಿ, ಸಂಕ್ರಮಣ ಮತ್ತು ಕನು ಹಬ್ಬ ಎಂದು ಮೂರು ದಿನಗಳ ಕಾಲ ಈ ಹಬ್ಬವನ್ನು ಆಚರಿಸುವ ಪದ್ಧತಿ ಕೆಲವೆಡೆ ಇದೆ. ಸುಗ್ಗಿಯ ಕಾಲದ ಹಿಗ್ಗು ಬಂದಿರುತ್ತದೆ. ಕಬ್ಬು ಸಮೃದ್ಧಿಯಾಗಿ ಈ ವೇಳೆಗೆ ಬೆಳೆದಿರುತ್ತದೆ. ಮನೆಯಲ್ಲಿ ಮಕ್ಕಳಿಗೆ ಅಭ್ಯಂಜನ ಮಾಡಿಸಿ ಮಕ್ಕಳ ತಲೆಯ ಮೇಲೆ ಭೋಗಿ ಹಣ್ಣು [ ಬದರೀಫಲ] [ ಬೋರೆಯ ಹಣ್ಣು,ಎಲಚಿಹಣ್ಣು ] , ಕಬ್ಬು ಮೊದಲಾದುವುಗಳನ್ನು ಎರೆದು ಆರತಿ ಮಾಡುವ ಪದ್ಧತಿ ಕೆಲವೆಡೆ ಇದೆ. 

ಕೆಲವು ಕಡೆ ಹಸು , ಎಮ್ಮೆ ಮೊದಲಾದ ಜಾನುವಾರುಗಳಿಗೆ ಸ್ನಾನ ಮಾಡಿಸಿ ಅವುಗಳ ಕೋಡಿಗೆ , ಮೈಗೆ ಬಣ್ಣ ಬಳಿದು ಅಲಂಕರಿಸುತ್ತಾರೆ. ಅವುಗಳಿಗೆ ಪ್ರಿಯವಾದ ಹುಲ್ಲುಕಡ್ಡಿ, ಧಾನ್ಯ, ಕಾಯಿ, ಬೆಲ್ಲವನ್ನು ತಿನ್ನಿಸುತ್ತಾರೆ. ದೃಷ್ಟಿದೋಷ, ಪೀಡೆಯ ನಿವಾರಣೆಗಾಗಿ ಬೆಂಕಿಯ ಮೇಲೆ ದಾಟಿಸುವ ಪದ್ಧತಿ ಇದೆ. ಇದಕ್ಕೆ ಕಿಚ್ಚು ಹಾಯಿಸುವುದು ಎನ್ನುತ್ತಾರೆ. 

ಇನ್ನು ಕೆಲವು ಕಡೆ ದೇವಸ್ಥಾನಗಳಲ್ಲಿ ದೇವರ ಮುಂದೆ ಮೊಲಕ್ಕೆ ಅರಿಸಿನ - ಕುಂಕುಮ ಬಳಿದು ಹೂವು ಮುಡಿಸಿ ಪೂಜೆ ಮಾಡಿ ಬಿಡುವ ಪದ್ಧತಿ ಇದೆ. 

ಆಂದ್ರದಲ್ಲಿಯೂ ಈ ಹಬ್ಬವನ್ನು ಸಂಭ್ರಮದಿಂದ ಆಚರಿಲಾಗುತ್ತದೆ. ಶ್ರೀರಾಮನು ರಾವಣನನ್ನು ಕೊಂದು ಸೀತೆಯನ್ನು ತಂದ ದಿನವೆಂದು ಭಾವಿಸಿ ಮನೆಯ ಮುಂದೆ ಬೆಂಕಿಯನ್ನು ಹಾಕಿ ರಾವಣ ದಹನವನ್ನು ನಡೆಸುತ್ತಾರೆ. ಇದನ್ನು ' ಭೋಗಿಮಂಟ 'ಎಂದು ಕರೆಯುತ್ತಾರೆ. ಸ್ವರ್ಗಸ್ತರಾದ ಪಿತೃಗಳು ಅದೃಶ್ಯರಾಗಿ ಸ್ವರ್ಗಲೋಕದಿಂದ ತಮ್ಮ ಮನೆಯಂಗಳಕ್ಕೆ ಆಗಮಿಸುವರೆಂದು ಅವರ ನಂಬಿಕೆ. 

ತಮಿಳುನಾಡಿನಲ್ಲಿ ಸಂಕ್ರಾಂತಿಯ ಹಬ್ಬವನ್ನು ' ಪೊಂಗಲ್ ' ಎಂದು ಕರೆಯುತ್ತಾರೆ. ವಿಶೇಷ ವಿಧಿಯಿಂದ ಹಾಲನ್ನು ಕಾಯಿಸಿ ಉಕ್ಕಿಸುವ ದಿನವಾದ್ದರಿಂದ ಅಲ್ಲಿ ಇದು ಪೊಂಗಲ್ ಎಂದು ಪ್ರಸಿದ್ಧವಾಗಿದೆ. ಪೊಂಗಲ್ಲನ್ನು ಬೇಯಿಸಿ ಕಬ್ಬಿನ ಜಲ್ಲೆಗಳನ್ನಿರಿಸಿ ಪೂಜೆ ಮಾಡುತ್ತಾರೆ. ಅದನ್ನು ಸೂರ್ಯನಿಗೆ ನೈವೇಧ್ಯ ಮಾಡುತ್ತಾರೆ. ಸಂಕ್ರಾಂತಿಯು ತಮಿಳರಿಗೆ ಸಂಭ್ರಮದ ಹಬ್ಬ. 

ಉತ್ತರ ಭಾರತದಲ್ಲಿಯೂ ಈ ಹಬ್ಬವನ್ನು ಆಚರಿಸುವುದುಂಟು. ಅಲಹಾಬಾದಿನಲ್ಲಿ ಈ ವೇಳೆಗೆ ಸುಪ್ರಸಿದ್ಧವಾದ ಕುಂಭಮೇಳವನ್ನು ನಡೆಸುವ ಪದ್ಧತಿ ಇದೆ. 

ತಾರೀಖು :14 - 1 - 2018 .

Thursday 10 January 2019

ಅಡಿಕೆ ಬೇಯಿಸುವ ಒಲೆ. ಅಸ್ತ್ರ ಒಲೆ

ನಮ್ಮ ಮನಯಲ್ಲಿ ಮಾಡಿರುವ ಅಡಿಕೆ ಬೇಯಿಸುವ ಒಲೆ. ಅಸ್ತ್ರ ಒಲೆ. ಇದರ ವಿಶೇಷ ಎಂದರೆ 1. ಒಲೆಯ ಕೆಳಗಿನ ಭಾಗದಿಂದ ಒಳಗೆ ಗಾಳಿ ಬರುವ ವ್ಯವಸ್ತೆ -- ಹಿಂದಿನ ಆಲೆಮನೆಯ ಪೂಗುದಾಳಿ [ ಒಲೆಯ ಮಧ್ಯಭಾಗದಲ್ಲಿನ ಕೆಳಗಿನ ಗಾಳಿ ಬರುವ ಕಿಂಡಿ ] ಇದ್ದಂತೆ . ಇದರಲ್ಲಿ ಬೂದಿಯೂ ಕೆಳಗೆ ಬೀಳುತ್ತದೆ. 2. ಕಟ್ಟಿಗೆ ಕೂಡುವ ಜಾಗ ಕೇವಲ 12 ಇಂಚು ಅಗಲ, 8 ಇಂಚು ಎತ್ತರ, ಹಂಡೆ ಇಡುವ ಜಾಗದಿಂದ ಹೊರಗೆ 30 ಇಂಚು ಉದ್ದದ ಒಂದು ಕಾಲುವೆಯಾಕೃತಿಯ ವ್ಯವಸ್ಥೆ ಸಾಕು. ಸುಮಾರು ಐದು ಅಡಿ ಉದ್ದದ ಒಂದು ತಲೆ ಹೊರೆ ಮರದ ಚೆಕ್ಕೆಗಳನ್ನು ಕೂಡಿದರೆ ಒಂದು ಹಂಡೆ ಅಡಿಕೆ ಬೇಯುತ್ತದೆ.. ಕುಂಟೆಗಳ ಅಗತ್ಯವಿಲ್ಲ. ಇದರಲ್ಲಿ ಗಾಳಿ ಒಳಹೋಗದಂತೆ ಮುಚ್ಚಿಡಲಾಗುತ್ತದೆ. .3. . ಗಾಳಿ ಬರುವ ಕಿಂಡಿ + ಬೂದಿ ಬೀಳುವ ಜಾಗದಲ್ಲಿ ಹಾಕಿರುವ ಜಾಲರಿಯ ಮಟ್ಟದಿಂದ ಅಂದರೆ ಒಲೆಯ ತಳಭಾಗದಿಂದ ಹಂಡೆಯಾ ತಳ ಕೇವಲ 7 ರಿಂದ 8 ಇಂಚು ಅಂತರ ಇದ್ದರೆ ಸಾಕು . [ ಅದು ಕಟ್ಟಿಗೆ ಕೂಡಲಿಕ್ಕೆ ].. ಇದರಿಂದ ಶಾಖ [ ಕಾವು ] ಬರುವ ಶಕ್ತಿ ಹೆಚ್ಚು ಇರುತ್ತದೆ. .4. ಒಲೆಯ ಒಳಭಾಗದಲ್ಲಿ ಸುತ್ತ ಮತ್ತು ಕೆಳಗಿನಿಂದ ಮೇಲಿನವರೆಗೆ [ ಹಂಡೆಯ ಕಂಟದವರೆಗೆ ] . ಹಂಡೆಗೂ ಒಲೆಗೂ ಮಧ್ಯೆ 2 ಇಂಚು ಅಂತರ [ Gap ] ಇರಬೇಕು . ಇದರಿಂದಾಗಿ ಬೆಂಕಿ ಹಂಡೆಯ ಸುತ್ತ ಮೇಲಿನವರೆಗೂ ಆವರಿಸಿ ಹಂಡೆಗೆ ಶಾಖ ಬೇಗನೆ ಹೆಚ್ಚು ಸಿಗುತ್ತದೆ. 5. . ಒಲೆಯ ಒಳಭಾಗದಲ್ಲಿ ಭತ್ತದ ಉಮಿಯನ್ನು [ ಭತ್ತದ ಸಿಪ್ಪೆ ] ಸೇರಿಸಿದ ಮಣ್ಣಿನಿಂದ ಮೆತ್ತಿಗೆ ಮಾಡಬೇಕು. ಇದರಿಂದಾಗಿ ಬೆಂಕಿಯ ಕಾವು ಬೇಗನೆ ಬರುತ್ತದೆ ಮತ್ತು ಹೀಗೆ ಬಂದ ಕಾವು ಬೇಗ ತಣಿಯದೆ ಹೆಚ್ಚು ಹೊತ್ತು ಇರುತ್ತದೆ. 6. . ಹಂಡೆಯ ಮೇಲ್ಭಾಗದಲ್ಲಿ ಹೆಂಚು ಮತ್ತು ಮಣ್ಣನ್ನು ಬಳಸಿ ಮುಚ್ಚಬೇಕು. ಇದರಿಂದಾಗಿ ಕಾವು ಬೇಗ ಬರುತ್ತದೆ.. 7. ಚಿತ್ರದಲ್ಲಿ ತೋರಿಸಿದಂತೆ ಒಲೆಯ ಅರ್ಧ ಎತ್ತರದಲ್ಲಿ ಹೊಗೆ ಕಿಂಡಿಯನ್ನಿಟ್ಟು ಮೇಲೆ ಪೈಪನ್ನು ನೆಡಬೇಕು. ನಾನು ಬಳಸಿರುವ ಹಂಡೆಯಲ್ಲಿ 48 ಗಿದ್ನ [ ಹನ್ನೆರಡು ಮಣ್ಣು ಬುಟ್ಟಿ ಅಥವಾ ಸಾಗರದ ಹನ್ನೆರಡು ಡಬ್ಬ ] ] ಸುಳಿ ಬೇಳೆ ಬೇಯುತ್ತದೆ. ಮೊದಲನೆಯ ಹಂಡೆ 48 ಗಿದ್ನ ಅಡಿಕೆ ಬೇಯಲಿಕ್ಕೆ ಸುಮಾರು ಒಂದು ಗಂಟೆ ಬೇಕು. ನಂತರದ ಹಂಡೆಯ ಅಡಿಕೆ ಬೇಯಲು ಕೇವಲ 30 ನಿಮಿಷಗಳು ಸಾಕು. ಪ್ರತೀ 5 ನಿಮಿಷಕ್ಕೊಮ್ಮೆ ಕಟ್ಟಿಗೆಯನ್ನು ಮುಂದೆ ಹಾಕುತ್ತಿರಬೇಕು.
Image may contain: tree, plant and outdoor



Image may contain: outdoor



Image may contain: outdoor


Image may contain: tree, plant and outdoor


Image may contain: sky, tree and outdoor

#### ಯಜ್ನೋಪವೀತ ####

ಯಜ್ನೋಪವೀತ ಎಂದರೆ ಕೇವಲ ಜನಿವಾರ ಅಲ್ಲ. ಯಜ್ನೋಪವೀತದ ಜಾಗಕ್ಕೆ ಕಾಲಾನುಕ್ರಮದಲ್ಲಿ ಜನಿವಾರ ಬಂದಿದೆ ಅಷ್ಟೆ. ಯಜ್ನೋಪವೀತ ಎಂದರೆ ಯಜ್ಞ ಮಾಡುವುದಕ್ಕಾಗಿ ಮಾಡಿಕೊಂಡ ಉಪವೀತ. ಉಪವೀತ ಎಂದರೆ ಉತ್ತರೀಯ ಎಂದರ್ಥ. ಎಡದ ಹೆಗಲ ಮೇಲಿನಿಂದ ಬಂದು ಬಲದ ತೋಳಿನ ಕೆಳಗಡೆಯಿಂದ ಬಂದಿದ್ದರೆ ಅದು ಯಜ್ನೋಪವೀತವಾಗುತ್ತದೆ. ಯಜ್ನೋಪವೀತವನ್ನು ಬಹಳ ಹಿಂದಿನ ಕಾಲದಲ್ಲಿ ಸದಾ ಧರಿಸಿರಬೇಕಾಗಿರಲಿಲ್ಲ. ಯಜ್ನಾದಿ ಧಾರ್ಮಿಕ ಕಾರ್ಯವನ್ನು ಮಾಡುವಂಥಹ ವಿಶಿಷ್ಟ ಸಂದರ್ಭಗಳಲ್ಲಿ ಮಾತ್ರ ಧರಿಸಿದ್ದರೆ ಸಾಕಾಗಿತ್ತು. ಸ್ವಾಧ್ಯಾಯ , ಉತ್ಸರ್ಗ, ದಾನ, ಭೋಜನ, ಮತ್ತು ಆಚಮನಗಳೆಂಬ ಪಂಚಕರ್ಮಗಳನ್ನು ನಡೆಸುವಾಗ ಮಾತ್ರ ಧರಿಸುವ ಅಗತ್ಯವಿತ್ತು. ಪ್ರಾಚೀನ ಕಾಲದಲ್ಲಿ ಈಗಿನಂತೆ ಯಜೋಪವೀತವು ಜನಿವಾರ ಆಗಿರಲಿಲ್ಲ. ಕೃಷ್ಣಮೃಗದ ಇಡೀ ಚರ್ಮವೇ [ ಕೃಷ್ಣಾಜಿನ ] ಉಪವೀತವನ್ನಾಗಿ ಧರಿಸಲಾಗುತ್ತಿತ್ತು. ಅದು ಭಾರವೆನ್ನಿಸಿದ್ದರಿಂದ ನಂತರ ಕಾಲಾನುಕ್ರಮದಲ್ಲಿ ಹತ್ತಿಯ ಬಟ್ಟೆಯನ್ನು ಉಪವೀತವನ್ನಾಗಿ ಬಳಸಲಾಯಿತು. ಆದರೆ ಪ್ರಾಚೀನ ಪದ್ಧತಿಯನ್ನು ಬಿಡಲಾಗದ ಪೂರ್ವಾಗ್ರದಲ್ಲಿ ಆ ಬಟ್ಟೆಯ ಉಪವೀತದ ಜೊತೆಗೆ ನಾಲ್ಕು ಅಂಗುಲ ಅಗಲದ ಕೃಷ್ಣಾಜಿನದ ಉದ್ದನೆಯ ಪಟ್ಟಿಯನ್ನು-- ಎಡದ ಹೆಗಲ ಮೇಲಿನಿಂದ ಬಲ ತೋಳಿನ ಕೆಳಗಿನವರೆಗೆ -- ಧರಿಸಿಕೊಳ್ಳುವ ಪದ್ಧತಿ ಬಂತು. ಮುಂದೆ ಕಾಲಾನುಕ್ರಮದಲ್ಲಿ ಅದೂ ಕಷ್ಟವೆನಿಸಿದಾಗ ಮೂರು ಅಥವಾ ಕೃಷ್ಣಾಜಿನದ ನಾಲ್ಕು ಅಂಗುಲದ ಒಂದು ಚಿಕ್ಕ ತುಂಡನ್ನು ಆ ಬಟ್ಟೆಯ ಉಪವೀತಕ್ಕೆ ಸೇರಿಸಿ ಧರಿಸುವ ಪದ್ಧತಿ ಬಂತು. ಈಗ ಉಪನಯನವಾದ ಕೆಲವು ದಿನ ಅದೇ ರೀತಿ ಜನಿವಾರಕ್ಕೆ ಕೃಷ್ಣಾಜಿನ ಚಿಕ್ಕ ತುಂಡನ್ನು ಸೇರಿಸುವುದು ಈ ಕಾರಣದಿಂದ ಎಂದು ಹೇಳಲಾಗಿದೆ. ಕೃಷ್ಣಮೃಗದ ಚರ್ಮವೇ ಆಗಲಿ, ನಂತರದ ಹತ್ತಿಯ ಬಟ್ಟೆಯೇ ಆಗಲಿ ಎಡದ ಹೆಗಲ ಮೇಲಿನಿಂದ ಬಲ ತೋಳಿನ ಕೆಳಗೆ ಬರುವ ಕ್ರಮವನ್ನು ಅನುಸರಿಸಲಾಗಿತ್ತು. ಈಗ ಅಪರಕರ್ಮವನ್ನು ಮಾಡುವಾಗ ಜನಿವಾರದ ಜೊತೆಗೆ ಬಟ್ಟೆಯ ತುಂಡನ್ನುಉಪವೀತದ ಆಕಾರದಲ್ಲಿ ಸೇರಿಸಿಕೊಳ್ಳುವುದು ಆಗಿನ ಕಾಲದ ಇಡೀ ಬಟ್ಟೆಯ ಉಪವೀತದ ಅನುಕರಣೆ ಇರಬೇಕು. ಒಂದು ಕಾಲದಲ್ಲಿ ಯಜ್ಞಗಳು ವ್ಯಕ್ತಿಯ ಜೀವನದಲ್ಲಿ ಆಗಾಗ್ಯೆಯಷ್ಟೇ ನಡೆಯುತ್ತಿತ್ತು ಆಗಷ್ಟೇ ಯಜೋಪವೀತವನ್ನು ಧರಿಸಲಾಗುತ್ತಿತ್ತು. ಉಳಿದ ಸಂದರ್ಭಗಳಲ್ಲಿ ಅದನ್ನು ಧರಿಸುವ ಪರಿಪಾಠ ಇರಲಿಲ್ಲ. ಆದರೆ ಕಾಲಾನುಕ್ರಮದಲ್ಲಿ ಯಜ್ನಗಳಿಗೆ ಪ್ರಾಶಸ್ತ ಬಂದಮೇಲೆ ಪ್ರತಿ ದಿನವೂ ಯಜ್ನವನ್ನು ಮಾಡಬೇಕೆಂದು ವಿಧಿ ಮಾಡಿದರು. ಪಂಚಮಹಾಯಜ್ಞಗಳು ಗೃಹಸ್ಥನಿಗೆ ಕಡ್ದಾಯವೆಂದು ವಿಧಿಸಲಾಯಿತು. ಅಷ್ಟೇ ಅಲ್ಲ, ಇತರ ಅನೇಕ ಕಾರ್ಯಗಳನ್ನು ಯಜ್ಞ ಸಮಾನವೆಂದು ಸಾರಲಾಯಿತು. ಯಜ್ನ ಮಾಡುವಾಗ ಉಪವೀತ ಇರಬೇಕು ಎಂದಮೇಲೆ ಈ ಕಾಲಘಟ್ಟದಲ್ಲಿ ಸದಾಕಾಲವೂ ಯಜ್ನೋಪವೀತವು ಶರೀರದ ಮೇಲೆ ಇರುವುದು ಕಡ್ದಾಯವಾಯಿತು. ಈ ಕಾಲದಲ್ಲಿ ಕೃಷ್ಣಾಮೃಗದ ಇಡಿಯ ಚರ್ಮವನ್ನೋ ಅಥವಾ ಕೃಷ್ಣಾಜಿನದ ನಾಲ್ಕು ಅಂಗುಲ ಅಗಲದ ಉದ್ದನೆಯ ಪಟ್ಟಿಯನ್ನು ಸೇರಿಸಿಕೊಂಡ ಹತ್ತಿಯ ಇಡಿಯ ಬಟ್ಟೆಯನ್ನೋ ಅಥವಾ ನಾಲ್ಕು ಅಂಗುಲದ ಕೃಷ್ಣಾಜಿನದ ತುಂಡನ್ನು ಸೇರಿಸಿದ ಹತ್ತಿಯ ಬಟ್ಟೆಯನ್ನೂ ಉಪವೀತವನ್ನಾಗಿ ದಿನ ನಿತ್ಯ ಧರಿಸುವ ಪದ್ಧತಿ ಕಷ್ಟವೆನಿಸಿರಬೇಕು. ಆಗ ಅದರ ಬದಲು ದರ್ಭೆಯ ಹಗ್ಗವನ್ನು ಯಜ್ನೋಪವೀತವನ್ನಾಗಿ ಧರಿಸುವ ಪರಿಪಾಠ ಬಂತು. ಆದರೆ ಅದೂ ಕಿರಿಕಿರಿಯನ್ನುಂಟು ಮಾಡುತ್ತಿದ್ದುದರಿಂದ ಹತ್ತಿಯ ದಾರವನ್ನು ಯಜ್ನೋಪವೀತವನ್ನಾಗಿ ಧರಿಸುವ ಪದ್ಧತಿ ಜಾರಿಗೆ ಬಂತು. ಮೂರೆಳೆಯ ದಾರವನ್ನು ಜನಿವಾರವನ್ನು ಯಜ್ನೋಪವೀತವನ್ನಾಗಿ ಧರಿಸುವ ಪದ್ಧತಿ ಪ್ರಾಚಿನದಕ್ಕೆ ಹೋಲಿಸಿದರೆ ಇತ್ತೀಚಿನದು. ಯಜ್ನೋಪವೀತವು ಹೀಗೆ ಸಂಪೂರ್ಣ ಕಷ್ಣಾ ಮೃಗದ ಚರ್ಮ , ಸಂಪೂರ್ಣ ಹತ್ತಿಯ ಬಟ್ಟೆ , ಹತ್ತಿಯ ದಾರ ಎಂಬ ಮೂರು ಹಂತಗಳಲ್ಲಿ ಕಾಲಾನುಕ್ರಮದಲ್ಲಿ ಪರಿವರ್ತನೆಯಾಗಿದೆ. 

 [ ಪ್ರೊ. ಎಂ. ಎ. ಹೆಗಡೆಯವರ ' ಹಿಂದೂ ಸಂಸ್ಕಾರಗಳು ' ಎನ್ನುವ ಪುಸ್ತಕದಿಂದ ಆಯ್ದು ಬರೆದದ್ದು. ] 
 ತಾರೀಖು : 10 -- 1 -- 2019